'ಸುನಕ್ ಒಳ್ಳೆ ಅಡುಗೆ ಮಾಡ್ತಾರೆ, ನನ್ನ ಈ ಅಭ್ಯಾಸ ಅವರಿಗಿಷ್ಟವಿಲ್ಲ': ವೈಯಕ್ತಿಕ ಜೀವನದ ಅನೇಕ ಸೀಕ್ರೆಟ್ಸ್ ರಿವೀಲ್ ಮಾಡಿದ ಅಕ್ಷತಾ ಮೂರ್ತಿ

rishi new
Published on

ಲಂಡನ್: ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಪುತ್ರಿ ಅಕ್ಷತಾ ಮೂರ್ತಿ ತಮ್ಮ ಪತಿ ಮತ್ತು ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ಅವರ ಅಡುಗೆ ಕೌಶಲವನ್ನು ಶ್ಲಾಘಿಸಿದ್ದಾರೆ. ಅಷ್ಟೇ ಅಲ್ಲ, ತನ್ನ ಅನೇಕ ಅಭ್ಯಾಸಗಳನ್ನು ಪತಿ ಸುನಕ್ ಇಷ್ಟಪಡುವುದಿಲ್ಲ ಎಂದು ಅವರು ಒಪ್ಪಿಕೊಂಡಿದ್ದಾರೆ. ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ 10 ಡೌನಿಂಗ್ ಸ್ಟ್ರೀಟ್‌ನಲ್ಲಿ ನಡೆದ ಗ್ರಾಜಿಯಾ ನಿಯತಕಾಲಿಕೆಯ ಜಂಟಿ ಸಂದರ್ಶನದಲ್ಲಿ ಅಕ್ಷತಾ ತಮ್ಮ ಜೀವನದ ಬಗ್ಗೆ ಅನೇಕ ಆಸಕ್ತಿದಾಯಕ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ.       

ಚೆನ್ನಾಗಿ ಅಡುಗೆ ಮಾಡ್ತಾರೆ ರಿಷಿ ಸುನಕ್

ಸಂದರ್ಶನದ ವೇಳೆ ಅಕ್ಷತಾ ಮೂರ್ತಿ ಅಡುಗೆ ಬಗ್ಗೆ ಹೇಳಿದ್ದು, "ನನಗೆ ಅಡುಗೆ ಮಾಡುವುದು ತುಂಬಾ ಇಷ್ಟ. ಆದರೆ ಅಡುಗೆ ವಿಷಯದಲ್ಲಿ ಸುನಕ್ ನನಗಿಂತ ಉತ್ತಮ. ಅವರು ತುಂಬಾ ಚೆನ್ನಾಗಿ ಅಡುಗೆ ಮಾಡುತ್ತಾರೆ. ಆದರೆ, ದೇಶದ ಪ್ರಧಾನಿಯಾಗಿ ಕೆಲಸದಲ್ಲಿ ನಿರತರಾಗಿರುವ ಕಾರಣ ಅಡುಗೆ ಕಡೆಗೆ ಹೆಚ್ಚು ಸಮಯ ಸಿಗುತ್ತಿಲ್ಲ. ಈಗ ಅವರು ಶನಿವಾರ ಬೆಳಗ್ಗೆ ಮಾತ್ರ ಉಪಾಹಾರ ಮಾಡಬಹುದು" ಎಂದು ಹೇಳಿದರು.  ಸುನಕ್ ಮತ್ತು ಅಕ್ಷತಾ ಇಬ್ಬರಲ್ಲಿ ರಿಷಿ ಸುನಕ್ ಸ್ವಚ್ಛತೆಯನ್ನು ಹೆಚ್ಚು ಇಷ್ಟಪಡುತ್ತಾರೆ ಎಂದು ಸುನಕ್-ಅಕ್ಷತಾ ಇಬ್ಬರೂ ಒಪ್ಪಿಕೊಂಡರು.

" ಅಕ್ಷತಾ ಕೆಲವೊಮ್ಮೆ ಬೆಳಗ್ಗೆ ಎದ್ದ ನಂತರ ಹಾಸಿಗೆಯನ್ನು ನೀಟಾಗಿಡುವುದಿಲ್ಲ ಎಂದು ಸುನಕ್ ಹೇಳಿದರು. "ಇದು ನನ್ನನ್ನು ಕೆರಳಿಸುತ್ತದೆ. ನಾನು ಕೆಲವೊಮ್ಮೆ ಆಫೀಸ್‌ನಿಂದ ಫ್ಲಾಟ್‌ಗೆ ಹಿಂತಿರುಗಿದಾಗ ಯಾರಾದರೂ ಎದ್ದ ನಂತರ ಹಾಸಿಗೆಯನ್ನು  ನೀಟಾಗಿಡದಿದ್ದರೆ ಅದು ನನ್ನನ್ನು ಕೆರಳಿಸುತ್ತದೆ" ಎಂದು ಸುನಕ್ ಹೇಳಿದರು. 

ಓದುವಾಗ ಹಾಸಿಗೆಯಲ್ಲಿ ಊಟ

ಸಂದರ್ಶನದ ವೇಳೆ ಅಕ್ಷತಾ ಮೂರ್ತಿ ಅವರು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಲ್ಲಿ ತಮ್ಮ ಅಧ್ಯಯನದ ಕೆಲವು ನೆನಪುಗಳನ್ನು ಹಂಚಿಕೊಂಡರು. "ನಾನು ಸುನಕ್‌ನನ್ನು ಭೇಟಿಯಾದಾಗ ನನಗೆ ಕೆಲವು ಅಭ್ಯಾಸಗಳಿದ್ದವು, ಅದರಿಂದ ಸುನಕ್‌ಗೆ ತೊಂದರೆಯಾಗುತ್ತಿತ್ತು" ಎಂದು ಅಕ್ಷತಾ ಹೇಳಿದರು. "ನಾನು ಓದುತ್ತಿದ್ದಾಗ ಹಾಸಿಗೆಯ ಮೇಲೆ ಕುಳಿತು ಊಟ ಮಾಡುತ್ತಿದ್ದೆ" ಎಂದು ಅಕ್ಷತಾ ಹೇಳಿದರು. ಅನೇಕ ಬಾರಿ ರಿಷಿ ಸುನಕ್ ನನ್ನ ನಿವಾಸಕ್ಕೆ ಬಂದಾಗ, ನನ್ನ ಹಾಸಿಗೆಯ ಮೇಲೆ ಆಹಾರದ ತಟ್ಟೆ ಇರುವುದನ್ನು ಅವರು ನೋಡುತ್ತಿದ್ದರು. ಅವರು ಸುನಕ್‌ನಂತೆ ಕ್ಲೀನ್ ಅಲ್ಲ ಎಂದು ಒಪ್ಪಿಕೊಂಡರು. 

ಮಕ್ಕಳಿಗೆ ಹೋಮ್‌ವರ್ಕ್ ಮಾಡಿಸುವವರು...

ಪೋಷಕರಾಗಿ ಮಕ್ಕಳನ್ನು ಬೆಳೆಸುವ ಬಗ್ಗೆಯೂ ಪ್ರಶ್ನೆಗಳನ್ನು ಕೇಳಲಾಯಿತು. ಈ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಇಬ್ಬರೂ ಮಕ್ಕಳನ್ನು ಒಟ್ಟಿಗೆ ಬೆಳೆಸುತ್ತೇವೆ. ಅಕ್ಷತಾ ಮಕ್ಕಳ ಕೆಲಸವನ್ನು ಮಾಡುತ್ತಾರೆ. ಅವರ ಇತರ ಆರೈಕೆ ಕೆಲಸಗಳನ್ನು ಮಾಡುತ್ತಾರೆ ಎಂದು ಸುನಕ್ ಹೇಳಿದರು. ಶಾಲೆಗೆ ಸಂಬಂಧಿಸಿದ ವಿಷಯಗಳು ಬಂದಾಗ ಕಠಿಣ ನಿಲುವು ತೆಗೆದುಕೊಳ್ಳುತ್ತೇನೆ ಎಂದು ಅಕ್ಷತಾ ಹೇಳಿದರು.   

ಫ್ರೆಂಡ್ಸ್ ಎಪಿಸೋಡ್ ಒಟ್ಟಿಗೆ ವೀಕ್ಷಿಸುತ್ತಾರೆ!
ಅಕ್ಷತಾ ಮೂರ್ತಿ ತಮ್ಮ ದಿನಚರಿಯಲ್ಲಿ ಸುನಕ್‌ಗಿಂತ ಹೆಚ್ಚು ನಮ್ಯತೆಯನ್ನು ಹೊಂದಿದ್ದಾರೆ ಎಂದು ಹೇಳಿದರು. ಅವರು ಸುನಕ್‌ಗಿಂತ ಹೆಚ್ಚು ವ್ಯಾಯಾಮ ಮಾಡಲು ಸಮರ್ಥರು ಮತ್ತು ಪುಸ್ತಕಗಳನ್ನು ಓದಲು ಸಮಯವನ್ನು ಕಂಡುಕೊಳ್ಳುತ್ತಾರೆ. ಇಬ್ಬರೂ ಸಿಟ್‌ಕಾಮ್ ಫ್ರೆಂಡ್ಸ್‌ನ ಸಂಚಿಕೆಗಳನ್ನು ಒಟ್ಟಿಗೆ ನೋಡುತ್ತೇವೆ ಎಂದು ಹೇಳಿದರು. ಸುನಕ್, ತಮ್ಮ ದಿನಚರಿಯ ಬಗ್ಗೆ ಮಾತನಾಡುತ್ತಾ, ನಾನು ಮನೆಗೆ ತಲುಪಿದಾಗ ನನಗೆ ತುಂಬಾ ಸುಸ್ತಾಗಿರುತ್ತದೆ, ಆದ್ದರಿಂದ ನಾನು ಫ್ರೆಂಡ್ಸ್ ಸಂಚಿಕೆಯನ್ನು ನೋಡಿ ಮಲಗುತ್ತೇನೆ ಎಂದು ಹೇಳಿದರು. ವಾರದಲ್ಲಿ ಒಂದು ಅಥವಾ ಎರಡು ಬಾರಿ ಮಾತ್ರ ಹೊರಗೆ ಹೋಗಲು ಸಮಯ ಸಿಗುತ್ತದೆ ಎಂದು ಅವರು ಹೇಳಿದರು. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net