ಶಿಕ್ಷಣಕ್ಕೆ ಪೂರಕ ಅಕ್ಷರ ದಾಸೋಹ

Btw_Education
Published on

ಬಂಟ್ವಾಳ: ಎಲ್ಲ ಮಕ್ಕಳು ಅಕ್ಷರ ದಾಸೋಹ ಬಳಸಿಕೊಳ್ಳುತ್ತಿದ್ದು, ಮಕ್ಕಳ ಆರೋಗ್ಯದ ಮೇಲೆ ಮತ್ತು ದೈಹಿಕ-ಮಾನಸಿಕ ಅಭಿವೃದ್ಧಿಗೆ ಪೂರಕ ವಾತಾವರಣ ತಂದುಕೊಟ್ಟಿದೆ ಎಂದು ಬಂಟ್ವಾಳ ತಾಲೂಕಿನ ಅಕ್ಷರ ದಾಸೋಹದ ನಿರ್ದೇಶಕ ನೋಣಯ್ಯ ನಾಯ್ಕ ಹೇಳಿದರು.

ಮಂಗಳವಾರ ಮಜಿ ದ.ಕ. ಜಿ.ಪಂ. ಹಿ.ಪ್ರಾ.ಶಾಲೆಯಲ್ಲಿ ಶೈಕ್ಷಣಿಕ ಸಮುದಾಯದತ್ತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಕೊರಗಪ್ಪ ನಾಯ್ಕ ಸಿಂಗೇರಿ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಯತಿನ್ ಕುಮಾರ್ ಏಳ್ತಿಮಾರ್ ಮಾತನಾಡಿದರು. ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಸಂಗೀತ ಶರ್ಮ ಪಿ.ಜಿ, ತರಕಾರಿ ವ್ಯಾಪಾರಿ ಮಹಮ್ಮದ್ ಶರೀಫ್ ಅವರನ್ನು ಅಭಿನಂದಿಸಲಾಯಿತು. ಕ್ಯಾನ್ಸರ್ ಪೀಡಿತರಿಗೆ ಕೂದಲು ದಾನ ಮಾಡಿದ ಪ್ರಾಪ್ತಿ ಹಾಗೂ ಚಿರಣ್ಯ ಅವರನ್ನು ಗೌರವಿಸಲಾಯಿತು.

ಸಾಮಾಜಿಕ ಪರಿಶೋಧನಾ ತಂಡದ ಮುಖ್ಯಸ್ಥೆ ಅಂಜಲಿ ಶೇಠ್, ವೀರಕಂಭ ಗ್ರಾಪಂ ಅಧ್ಯಕ್ಷೆ ಲಲಿತಾ, ಉಪಾಧ್ಯಕ್ಷ ಜನಾರ್ದನ ಪೂಜಾರಿ, ಸದಸ್ಯರಾದ ನಿಶಾಂತ್ ರೈ, ರಘು ಪೂಜಾರಿ, ಅಬ್ದುಲ್ ರೆಹಮಾನ್, ಗೀತಾ ಜಯಶೀಲಾ ಗಾಂಭೀರ, ಕಾರ್ಯದರ್ಶಿ ಸವಿತಾ, ತಾಲೂಕು ಪಂಚಾಯಿತಿ ತಾಂತ್ರಿಕ ಸಹಾಯಕ ಅಭಿಯಂತೆ ನಳಿನಾಕ್ಷಿ, ತೋಟಗಾರಿಕೆ ವಿಭಾಗದ ನಯನಾ, ತಾಲೂಕು ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಸಿಬ್ಬಂದಿ ಸರಿತಾ ಮತ್ತು ಮಮತಾ, ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷೆ ವನಿತಾ ಉಪಸ್ಥಿತರಿದ್ದರು.

ಮುಖ್ಯ ಶಿಕ್ಷಕಿ ಬೆನೆಡಿಕ್ಟಾ ಆಗ್ನೇಸ್ ಮಂಡೋನ್ಸಾ ಸ್ವಾಗತಿಸಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪುಷ್ಪಾ ವಂದಿಸಿದರು. ಶಾಲಾ ದೈಹಿಕ ಶಿಕ್ಷಕ ಇಂದು ಶೇಖರ್ ಹಾಗೂ ಸಹ ಶಿಕ್ಷಕಿ ಸಂಗೀತಾ ಶರ್ಮ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net