More

    ನಿಮಗೋಸ್ಕರ ಸಾಯಲು ರೆಡಿ ಎಂದ ಅಭಿಮಾನಿಗೆ ನಟಿ ಕೊಟ್ಟ ಉತ್ತರಕ್ಕೆ ನೆಟ್ಟಿಗರ ಬಹುಪರಾಕ್​!

    ಚೆನ್ನೈ: ಐಶ್ವರ್ಯ ರಾಜೇಶ್​ ತಮಿಳು ಹಾಗೂ ತೆಲುಗು ಚಿತ್ರರಂಗದ ಪ್ರತಿಭಾನ್ವಿತ ನಟಿ. ಕಳೆದ ಫೆಬ್ರವರಿಯಲ್ಲಿ ತೆರೆಕಂಡ ವಿಜಯ್​ ದೇವರಕೊಂಡ ನಟನೆಯ “ವರ್ಲ್ಡ್​ ಫೇಮಸ್​ ಲವರ್​” ಚಿತ್ರದ ನಟನೆಗೆ ಭಾರಿ ಮೆಚ್ಚುಗೆ ಗಳಿಸಿರುವ ಐಶ್ವರ್ಯಾ, ಇತ್ತೀಚೆಗಷ್ಟೇ ನಿಮಗೋಸ್ಕರ ಸಾಯುಲು ಸಿದ್ಧನಿದ್ದೇನೆ ಎಂದ ಅಭಿಮಾನಿಗೆ ಅವರು ನೀಡಿದ ಪ್ರತಿಕ್ರಿಯೆಗೆ ಸಿಕ್ಕಾಪಟ್ಟೆ ಮೆಚ್ಚುಗೆ ವ್ಯಕ್ತವಾಗಿದೆ.

    ಜೂನ್​ 11ರಂದು ಐಶ್ವರ್ಯ ತಮ್ಮ ಇನ್​ಸ್ಟಾಗ್ರಾಂನಲ್ಲಿ ಫೋಟೋವೊಂದನ್ನು ಅಪ್​ಲೋಡ್​ ಮಾಡಿಕೊಂಡಿದ್ದಾರೆ. ಫೋಟೋ ವೈರಲ್​ ಆಗಿದ್ದು, ಅಭಿಮಾನಿಗಳಿಂದ ಮೆಚ್ಚುಗೆ ಮಹಾಪೂರವೇ ಹರಿದುಬರುತ್ತಿದೆ. ಇದರ ನಡುವೆ ತಮಿಳುನಾಡಿನ ತ್ರಿಪುರ ಮೂಲದ ಕಟ್ಟಾ ಅಭಿಮಾನಿಯೊಬ್ಬನ ಕಾಮೆಂಟ್​ಗೆ ಐಶ್ವರ್ಯ ನೀಡಿರುವ ಉತ್ತರಕ್ಕೆ ಬಹುಪರಾಕ್​ ದೊರಕಿದೆ. ಇದನ್ನೂ ಓದಿ: ಪತ್ನಿ ಗರ್ಭಿಣಿ ಎಂದು ತಿಳಿದಾಗ ಚಿರು ಕೊಟ್ಟ ಉಡುಗೊರೆ ನೋಡಿ ಭಾವುಕರಾಗಿದ್ರು ಮೇಘನಾ: ಮಗು ವಿಚಾರದಲ್ಲೂ ಚಿರು ಆಸೆ ಹೀಗಿತ್ತು

    ನಿಮಗೋಸ್ಕರ ಸಾಯಲು ರೆಡಿ ಎಂದ ಅಭಿಮಾನಿಗೆ ನಟಿ ಕೊಟ್ಟ ಉತ್ತರಕ್ಕೆ ನೆಟ್ಟಿಗರ ಬಹುಪರಾಕ್​!ಅಭಿಮಾನಿ ಮಾಡಿದ ಕಾಮೆಂಟ್​ ಹೀಗಿತ್ತು. ಹಾಯ್​ ಸಹೋದರಿ ನಾನು ನಿಮ್ಮ ಅತಿ ದೊಡ್ಡ ಅಭಿಮಾನಿ. ತ್ರಿಪುರದವನು. ನಾನು ನಿಮಗಾಗಿ ಸಾಯಲು ಕೂಡ ಸಿದ್ಧ. ನಿಮ್ಮನ್ನು ಅಷ್ಟು ಇಷ್ಟಪಡುತ್ತೇನೆ ಸಹೋದರಿ. ನಿಮ್ಮ ನಟನೆಯಂತೂ ಸೂಪರ್​. ಈ ಫೋಟೋದಲ್ಲಿ ನೀವು ತುಂಬಾ ಚೆನ್ನಾಗಿ ಕಾಣುತ್ತಿದ್ದೀರಾ ಅಕ್ಕ. ಐ ಲವ್​ ಯು ಸೋ ಮಚ್​ ಅಕ್ಕ ಎಂದು ಬರೆದಿದ್ದರು.

    ನಿಮಗೋಸ್ಕರ ಸಾಯಲು ರೆಡಿ ಎಂದ ಅಭಿಮಾನಿಗೆ ನಟಿ ಕೊಟ್ಟ ಉತ್ತರಕ್ಕೆ ನೆಟ್ಟಿಗರ ಬಹುಪರಾಕ್​!ಇದಕ್ಕೆ ಅಷ್ಟೇ ನಮ್ರತೆಯಿಂದ ಪ್ರತಿಕ್ರಿಯೆ ನೀಡಿರುವ ಐಶ್ವರ್ಯಾ, ತುಂಬಾ ಧನ್ಯವಾದಗಳು ಆದರೆ, ಈ ರೀತಿಯ ಪದಗಳನ್ನು ಬಳಸಬೇಡಿ. ನಮ್ಮ ಜೀವನ ಇರುವುದು ಯಾರೊಬ್ಬರಿಗಾಗಿ ಸಾಯುವುದಕ್ಕಲ್ಲ. ಇನ್ನೆಂದು ಆ ರೀತಿಯ ಮಾತನ್ನಾಡಬೇಡಿ. ನಿಮ್ಮಂತ ಅಭಿಮಾನಿ ಹೊಂದಿರುವುದಕ್ಕೆ ನನಗೆ ನಿಜಕ್ಕೂ ತುಂಬಾ ಸಂತೋಷ. ಮತ್ತೊಮ್ಮೆ ಆ ರೀತಿಯ ಮಾತುಗಳನ್ನು ಆಡುವುದಿಲ್ಲವಾದರೆ, ನಾನು ಯಾವಾಗಲೂ ನಿಮ್ಮ ಒಳ್ಳೆಯ ಸ್ನೇಹಿತೆಯಾಗಿರುತ್ತೇನೆ. ನಿಮ್ಮ ಆರೋಗ್ಯದ ಕಡೆ ಗಮನವಹಿಸಿ ಎಂದು ಹೇಳಿದ್ದಾರೆ.

    ಐಶ್ವರ್ಯಾರ ಈ ಉತ್ತರ ನೆಟ್ಟಿಗರ ಮನಗೆದ್ದಿದ್ದು, ಮೆಚ್ಚುಗೆ ವ್ಯಕ್ತವಾಗುತ್ತಿವೆ. ಇನ್ನು ಸಿನಿಮಾ ವಿಚಾರಕ್ಕೆ ಬಂದರೆ ಐಶ್ವರ್ಯಾ ವಿಜಯ್​ ಸೇತುಪತಿ ಅಭಿನಯದ ಪೆ ರಣಸಿಂಗಂ ಚಿತ್ರದಲ್ಲಿ ಕಾಣಿಸಿಕೊಂಡಿದ್ದು, ಲಾಕ್​ಡೌನ್​ನಂತರ ಚಿತ್ರ ಬಿಡುಗಡೆಯಾಗಲಿದೆ. (ಏಜೆನ್ಸೀಸ್)

    ಈ ಫೋಟೋ ಮೂಲಕ ಅಭಿಷೇಕ್ ಏನು ಹೇಳೋಕೆ ಹೊರಟಿದ್ದಾರೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts