

ನವದೆಹಲಿ: ಬಾಲಿವುಡ್, ಸ್ಯಾಂಡಲ್ವುಡ್, ಹಾಲಿವುಡ್ ಹೀಗೆ ಎಲ್ಲಾ ಚಿತ್ರರಂಗದ ಸ್ಟಾರ್ ನಟರುಗಳ ರಿಮೇಕ್ ಮಾಡುವವರು ಬಹಳಷ್ಟು ಜನರಿರುತ್ತಾರೆ. ಕೆಲವೊಂದಿಷ್ಟು ಜನರು ಸ್ಟಾರ್ಗಳಿಗೆ ಹೋಲಿಕೆಯಾಗಿ ಅವರ ಅಕ್ಕ ತಮ್ಮನೋ ಅಥವಾ ಅಣ್ಣ ತಂಗಿಯೋ ಎನ್ನುವಂತೆ ಕಾಣಿಸಿಕೊಳ್ಳುತ್ತಿದ್ದಾರೆ. ಅದೇ ರೀತಿಯಲ್ಲಿ ಬಾಲಿವುಡ್ನ ಚೆಲುವೆ ಐಶ್ವರ್ಯಾ ರೈಗೂ ಸಹ ಒಬ್ಬ ನಕಲಿ ಸಿಕ್ಕಿದ್ದಾರೆ. ಐಶ್ವರ್ಯಾ ನೋಡಿ ನಕಲಿಯನ್ನು ನೋಡಿದರೆ ನಿಜವಾದ ಐಶ್ವರ್ಯಾ ಯಾರು ಎನ್ನುವ ಗೊಂದಲ ಮೂಡಿಸುವಂತಿದ್ದಾರೆ ಈ ನಕಲಿ ಐಶ್ವರ್ಯಾ ರೈ.
ಮರಾಠಿಯ ನಟಿ ಮತ್ತು ಟಿಕ್ಟಾಕ್ನ ಸೆಲೆಬ್ರಿಟಿ ಮಾನಸಿ ನಾಯಕ್ ನೋಡುವುದಕ್ಕೆ ಥೇಟ್ ಐಶ್ವರ್ಯಾ ರೈ ಥರನೇ ಇದ್ದಾರೆ. ಹುಡುಗರ ನಿದ್ದೆ ಕೆಡಿಸದಂತಹ ನಟಿಯಂತೇ ಇರುವ ಮಾನಸಿ ಐಶ್ವರ್ಯಾರಂತೆಯೇ ಉಡುಗೆ ತೊಡುಗೆಗಳನ್ನು ಹಾಕಿಕೊಂಡು ಫೋಟೋಶೂಟ್ ಮಾಡಿಸಿದ್ದಾರೆ. ಆ ಫೋಟೋ ನೋಡಿದ ಆಕೆಯ ಮತ್ತು ಐಶ್ವರ್ಯಾಳ ಅಭಿಮಾನಿಗಳು ಆಕೆಗೆ ನಕಲಿ ಐಶ್ವರ್ಯಾ ಎಂದು ಕಾಮೆಂಟ್ ಮಾಡಿದ್ದಾರೆ. ಸಾವಿರ ಸಾವಿರಷ್ಟು ಲೈಕ್ ಕಾಮೆಂಟ್ಗಳನ್ನು ಕೊಟ್ಟು ಆಕೆಗೆ ಪ್ರೋತ್ಸಾಹಿಸಿದ್ದಾರೆ.
ಮಾನಸಿ ಇನ್ಸ್ಟಾಗ್ರಾಮ್ ಮತ್ತು ಟಿಕ್ಟಾಕ್ನಲ್ಲಿ ಬಹುದೊಡ್ಡ ಅಭಿಮಾನಿ ಬಳಗವನ್ನೇ ಹೊಂದಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಬರೋಬ್ಬರಿ 9,43,000 ಜನರು ಆಕೆಯನ್ನು ಹಿಂಬಾಲಿಸುತ್ತಿದ್ದಾರೆ. ಟಿಕ್ಟಾಕ್ನಲ್ಲಿ 4 ಮಿಲಿಯನ್ ಜನರು ಮಾನಸಿಯನ್ನು ಹಿಂಬಾಲಿಸುತ್ತಿದ್ದಾರೆ. ಐಶ್ವರ್ಯಾ ರೈ ಅವರ ಸೂಪರ್ ಹಿಟ್ ಹಾಡುಗಳು ಮತ್ತು ಡೈಲಾಗ್ಗಳಿಗೆ ಅವರಂತೆಯೇ ನಟಿಸಿ ಟಿಕ್ಟಾಕ್ನಲ್ಲಿ ಅಪ್ಲೋಡ್ ಮಾಡುವ ಆಕೆಯ ವಿಡಿಯೋಗಳಿಗೆ ಲಕ್ಷಗಟ್ಟಲೆ ಲೈಕ್ಗಳು ಬಂದಿವೆ. (ಏಜೆನ್ಸೀಸ್)