More

    ಎಂಗೇಜ್​​ಮೆಂಟ್​​ ರಿಂಗನ್ನೂ ಬಿಚ್ಚಿಟ್ಟು ಓಡಾಡುತ್ತಿರುವ ಅಭಿಷೇಕ್​ ಬಚ್ಚನ್​​; ಇದೆಲ್ಲಾ ಪಬ್ಲಿಸಿಟಿ ಸ್ಟಂಟ್​​​ ಎಂದ ನೆಟ್ಟಿಗರು..!

    ಕಳೆದ ಕೆಲ ದಿನಗಳಿಂದ ಅಭಿಷೇಕ್​ ಬಚ್ಚನ್​ ಮತ್ತು ಐಶ್ವರ್ಯ ರೈ ಡಿವೋರ್ಸ್​​, ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗುತ್ತಿದೆ. ಆದರೆ ಅಭಿಷೇಕ್​​ ಅಥವಾ ಐಶ್ವರ್ಯ ಇಬ್ಬರೂ ಈ ಬಗ್ಗೆ ಅಧಿಕೃತವಾಗಿ ಯಾವುದೇ ಹೇಳಿಕೆ ಕೊಟ್ಟಿಲ್ಲ.


    ಇತ್ತೀಚೆಗೆ ಧೂಮ್ ನಟ ತನ್ನ ಮದುವೆಯ ಉಂಗುರವಿಲ್ಲದೆ ಕಾಣಿಸಿಕೊಂಡಾಗ ಅಭಿಷೇಕ್​-ಐಶ್ವರ್ಯ ಡಿವೋರ್ಸ್​​ ಸುದ್ದಿಗೆ ಮತ್ತಷ್ಟು ಬಲ ಬಂದಿತ್ತು.
    ಬಾಲಿವುಡ್​​ನ ಮೋಸ್ಟ್​​ ಹ್ಯಾಪೆನಿಂಗ್​​ ಕಪಲ್​ ಐಶ್ ಮತ್ತು ಅಭಿಷೇಕ್ ಅವರನ್ನು ಬಾಲಿವುಡ್‌ನ ಪವರ್ ಕಪಲ್ ಎಂದು ಕರೆಯಲಾಗುತ್ತದೆ. 2007 ರಲ್ಲಿ ಮದುವೆಯಾದ ಇವರಿಗೆ 2011 ರಲ್ಲಿ ಆರಾಧ್ಯ ಎಂಬ ಹೆಣ್ಣು ಮಗುವಿನ ಜನನವಾಯ್ತು.


    ಆದರೆ 16 ವರ್ಷಗಳ ಇದೀಗ ಅಭಿಷೇಕ್​-ಐಶ್ವರ್ಯ ಮದುವೆ ಮುರಿದು ಬಿದ್ದಿದೆ. ಇವರಿಬ್ಬರೂ ವಿಚ್ಛೇದನ ನೀಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಒಟ್ಟಾರೆಯಾಗಿ ಇವರಿಬ್ಬರೂ ಡಿವೋರ್ಸ್​​ ನೀಡಲಿದ್ದಾರೆಯೋ ಇಲ್ಲವೋ ಅನ್ನೋ ವಿಚಾರದ ಬಗ್ಗೆ ಯಾವುದೇ ಮಾಹಿತಿ ಇಲ್ಲ.


    ಸದ್ಯ ಈ ಬಗ್ಗೆ ನೆಟ್ಟಿಗರು ಹೆಚ್ಚಿನ ಸಂಖ್ಯೆಯಲ್ಲಿ ಕಾಮೆಂಟ್​​ ಮಾಡುತ್ತಿದ್ದು, ಅಭಿಷೇಕ್ ಅವರು ತಮ್ಮ ಇತ್ತೀಚಿನ ಈವೆಂಟ್​​ನಲ್ಲಿ ಎಮಗೇಜ್​ಮೆಂಟ್​ ಉಂಗುರ ಇಲ್ಲದೇ ಹಾಜರಾಗುತ್ತಿರೋ ಫೋಟೋ ರೆಡ್ಡಿಟ್​​​ನಲ್ಲಿ ಶೇರ್​​ ಮಾಡಲಾಗಿದ್ದು, ಅವುಗಳು ವೈರಲ್​ ಆಗಿವೆ.


    ಮುಂದಿನ ಸಿನಿಮಾದಲ್ಲಿ ಅಭಿಷೇಕ್ ವಿಚ್ಛೇದನ ಪಡೆದವನಾಗಿ ನಟಿಸುತ್ತಿದ್ದಾರೆ ಆದ್ದರಿಂದ ಈ ರೀತಿ ವಿಚ್ಛೇದನದ ವದಂತಿ ಹರಡುತ್ತಿದ್ದಾರೆ ಎಂದು ಓರ್ವ ವ್ಯಕ್ತಿ ಕಾಮೆಂಟ್​ ಮಾಡಿದ್ರೆ, ಮತ್ತೋರ್ವ ವ್ಯಕ್ತಿ ಅಭಿಷೇಕ್​​ ಕೈ ಬೆರಳು ದಪ್ಪವಾಗಿದೆ ಅನಿಸುತ್ತೆ ಅಂತಾ ಮತ್ತೋರ್ವ ವ್ಯಕ್ತಿ ಕಾಮೆಂಟ್​​ ಮಾಡಿದ್ದಾರೆ.


    ಒಟ್ಟಾರೆಯಾಗಿ ತಮ್ಮ ವಿಚ್ಛೇದನದ ಕುರಿತಂತೆ ಇಬ್ಬರೂ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲವಾದರೂ ಬೆಂಕಿ ಇಲ್ಲದೆ ಹೊಗೆ ಆಡೋದಿಲ್ಲ ಎಂದು ನೆಟ್ಟಿಗರು ಕಾಮೆಂಟ್​​ ಮಾಡುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts