Plane Crash: ಇಂದು (ಜೂನ್ 12) ಮಧ್ಯಾಹ್ನ ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನವು ಟೇಕಾಫ್ ಆದ ಕೆಲವೇ ಸಮಯದಲ್ಲಿ ಕಟ್ಟಡಕ್ಕೆ ಡಿಕ್ಕಿಯಾಗಿ ಭಸ್ಮವಾಗಿದೆ. ಏರ್ ಇಂಡಿಯಾ 171 ವಿಮಾನವಾಗಿ ಕಾರ್ಯನಿರ್ವಹಿಸುತ್ತಿರುವ ಬೋಯಿಂಗ್ 787-8 ಡ್ರೀಮ್‌ಲೈನರ್ 230 ಪ್ರಯಾಣಿಕರು ಮತ್ತು 12 ಸಿಬ್ಬಂದಿ ಸೇರಿದಂತೆ ಒಟ್ಟು 242 ಜನರನ್ನು ಹೊತ್ತೊಯ್ಯುತ್ತಿತ್ತು. ಬೆಂಕಿಗೆ ಆಹುತಿಯಾದ ವಿಮಾನದಲ್ಲಿ ಎಷ್ಟು ಮಂದಿ ಮೃತರು ಎಂಬ ವರದಿ ಇನ್ನೂ ಲಭ್ಯವಾಗಿಲ್ಲ ಎಂಬುದೇ ಅಚ್ಚರಿ.
ಇದನ್ನೂ ಓದಿ: Actress Manvitha Interview | ನನ್ನ ಗಂಡ ಹೀಗಂದ್ರಲ್ಲಾ, ಅಂತಾ ಬೇಜಾರಾಯ್ತು…!
ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ಉಳಿದಿದ್ದ ಹಾಸ್ಡೆಲ್ ಕಟ್ಟಡಕ್ಕೆ ವಿಮಾನ ಡಿಕ್ಕಿ ಹೊಡೆದಿದ್ದು, 20ಕ್ಕೂ ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತು ವರದಿಗಳು ಕೂಡ ಪ್ರಕಟವಾಗಿವೆ. ಎಷ್ಟು ಮಂದಿ ವಿಮಾನ ದುರಂತದಲ್ಲಿ ಬಲಿಯಾಗಿದ್ದಾರೆ ಎಂಬ ವರದಿ ಮಾತ್ರ ಇನ್ನೂ ಅಧಿಕೃತವಾಗಿ ಹೊರಬಿದ್ದಿಲ್ಲ.
VIDEO | Ahmedabad Plane Crash: Firefighting teams at the spot making efforts to put out the fire. Rescue operations underway.
Air India flight AI-171 from Ahmedabad to London, Gatwick, on Thursday, was involved in a crash shortly after takeoff, outside the airport.
(Full video… pic.twitter.com/ZAoYdWiRYo
— Press Trust of India (@PTI_News) June 12, 2025
ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ….