

ಉಪ್ಪಳ: ಐಲ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ನವರಾತ್ರಿ ಉತ್ಸವದ ಆಮಂತ್ರಣ ಪತ್ರಿಕೆಯನ್ನು ದೇವಸ್ಥಾನದಲ್ಲಿ ಜರುಗಿದ ಸಾಮೂಹಿಕ ಶನೈಶ್ಚರ ಕಲ್ಪೋಕ್ತ ಪೂಜೆ ನಂತರ ದೇವಸ್ಥಾನದ ಆಡಳಿತ ಮೊಕ್ತೇಸರ ಕೊಡಿಬೈಲು ನಾರಾಯಣ ಹೆಗ್ಡೆ ಬಿಡುಗಡೆಗೊಳಿಸಿದರು.
ಉಮೇಶ್ ಅಟ್ಟೆಗೋಳಿ ಅವರನ್ನು ಗೌರವಿಸಲಾಯಿತು. ಆಮಂತ್ರಣ ಪತ್ರಿಕೆಯ ಮುಖಪುಟ ವಿನ್ಯಾಸ ಸ್ಪರ್ಧಾ ವಿಜೇತರಾದ ಹಿತೇಶ್ ಬಾಯಾರು, ನಾಗಾರ್ಜುನ್ ಮಂಗಲ್ಪಾಡಿ, ರತನ್ ಐಲ ಅವರಿಗೆ ಬಹುಮಾನ ವಿತರಿಸಲಾಯಿತು.
ಮೊಕ್ತೇಸರ ಸುಕುಮಾರ್ ಉಪ್ಪಳ, ಶಿವರಾಮ ಪಕಳ, ಡಾ.ಶ್ರೀರಾಜ್, ಕ್ಷೇತ್ರ ಗುರಿಕಾರ ಎಂ.ಜಿ.ಅಶೋಕ್ ಹೊಳ್ಳ, ಸೇವಾ ಸಮಿತಿ ಗೌರವಾಧ್ಯಕ್ಷ ಸಿ.ಎಸ್.ಕೃಷ್ಣಪ್ಪ ಐಲ್, ಅಧ್ಯಕ್ಷ ಸುಧೀಶ್ಚಂದ್ರ ಶೆಟ್ಟಿ ಇಚ್ಲಂಗೋಡು, ಮಾಜಿ ಮೊಕ್ತೇಸರ ತಿಮ್ಮಪ್ಪ ಭಂಡಾರಿ ಬೊಳುವಾಯಿ, ದೇವಸ್ಯಂ ಬೋರ್ಡ್ ನಿವೃತ್ತ ಉದ್ಯೋಗಿ ಉಮೇಶ್ ಅಟ್ಟೆಗೋಳಿ, ದಿನೇಶ್ ಬುಡಾಲೆ, ಶಶಿಕಾಂತ್ ಉಪ್ಪಳ, ಬಾಲಕೃಷ್ಣ ಶೆಟ್ಟಿ ಪೊಯ್ಯೆಲು ಉಪಸ್ಥಿತರಿದ್ದರು. ಶಿವರಾಮ ಪಕಳ ವಂದಿಸಿದರು. ಭ್ರಾಮರಿ ಭಜನಾ ತಂಡದ ಮಕ್ಕಳು ಪ್ರಾರ್ಥನೆಗೈದರು.