More

  ನಂದಗೋಕುಲ ಗೋಶಾಲೆಗೆ ಧರ್ಮಸ್ಥಳದಿಂದ ನೆರವು

  ಬೆಳ್ತಂಗಡಿ: ಕಳೆಂಜ ಗ್ರಾಮದ ಕಾಯರ್ತಡ್ಕ ನಂದಗೋಕುಲ ಗೋಶಾಲೆಯ ದೀಪೋತ್ಸವ ಮತ್ತು ಗೋಶಾಲೆ ನಿರ್ವಹಣೆಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು 5 ಲಕ್ಷ ರೂ. ಆರ್ಥಿಕ ನೆರವನ್ನು ನೀಡಿದ್ದಾರೆ.

  ಶ್ರೀ ಕ್ಷೇತ್ರದ ಪರವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಮತ್ತು ಅಭಿವೃದ್ಧಿ ವಿಭಾಗದ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ, ನಂದಗೋಕುಲ ಗೋಶಾಲೆ ನಿರ್ವಹಣೆಯ ಸ್ವಾಮಿ ವಿವೇಕಾನಂದ ಸೇವಾಶ್ರಮ ಟ್ರಸ್ಟ್ ಪದಾಧಿಕಾರಿಗಳಿಗೆ ನೆರವನ್ನು ಹಸ್ತಾಂತರಿಸಿದರು.

  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಮತ್ತು ಅಭಿವೃದ್ಧಿ ವಿಭಾಗದ ಇಂಜಿನಿಯರ್ ಸುರೇಶ್, ಕಳೆಂಜ ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷ ಉಮೇಶ್, ಕಳೆಂಜ ಗ್ರಾಮದ ಸೇವಾ ಪ್ರತಿನಿಧಿ ಜನಾರ್ದನ, ಸ್ವಾಮಿ ವಿವೇಕಾನಂದ ಸೇವಾಶ್ರಮ ಟ್ರಸ್ಟಿನ ಅಧ್ಯಕ್ಷ ಡಾ.ಎಂ.ಎಂ.ದಯಾಕರ್, ಕಾರ್ಯದರ್ಶಿ ಸುಬ್ರಹ್ಮಣ್ಯ ಕುಮಾರ್ ಅಗರ್ತ, ನಂದಗೋಕುಲ ದೀಪೋತ್ಸವ ಸಂಚಾಲನ ಸಮಿತಿಯ ಪದಾಧಿಕಾರಿಗಳಾದ ರಮೇಶ್ ಧರ್ಮಸ್ಥಳ, ಕುಮಾರನಾಥ, ರಾಘವೇಂದ್ರ ಗೌಡ ಮೊದಲಾದವರು ಉಪಸ್ಥಿತರಿದ್ದರು.

  See also  ಜಂಟಿ ಮಾಲೀಕತ್ವಕ್ಕೂ ಆರ್ಥಿಕ ನೆರವು

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts