ಅಮೆರಿಕದ ಅಟ್ಲಾಂಟದಲ್ಲಿ ಅಹಿಲ್ಯಾಬಾಯಿ ಹೋಳ್ಕರ್ ಅವರ 300ನೇ ಜನ್ಮದಿನಾಚರಣೆ! Ahilyabai Holkar

Ahilyabai Holkar
Published on

Ahilyabai Holkar : ಕಳೆದ ಶನಿವಾರ (ಮೇ 31) ಅಮೆರಿಕದ ಜಾರ್ಜಿಯ ರಾಜ್ಯದ ರಾಜಧಾನಿ ಅಟ್ಲಾಂಟದಲ್ಲಿ ಅಹಿಲ್ಯಾಬಾಯಿ ಹೋಳ್ಕರ್ ಅವರ 300ನೇ ಜನ್ಮ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.

ಅಟ್ಲಾಂಟ ಕೌನ್ಸಲೇಟ್ ಜನರಲ್ ಅವರು ತಮ್ಮ ಭಾಷಣದಲ್ಲಿ ಅಹಿಲ್ಯಾಬಾಯಿ ಹೋಳ್ಕರ್ ಅವರು ತಮ್ಮ ಜೀವಿತಾವಧಿಯಲ್ಲಿ ನ್ಯಾಯಾಂಗ, ಆಡಳಿತ, ಸಾಮಾಜಿಕ ಹಾಗೂ ಮಹಿಳಾ ಸಬಲೀಕರಣಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿದರು. 300ನೇ ಜನ್ಮ ದಿನಾಚರಣೆಯನ್ನು ಭಾರತ ಸರಕಾರವು ನೆನಪಿನಲ್ಲಿ ಉಳಿಯಲು ಅಹಿಲ್ಯಾಬಾಯಿ ಹೋಳ್ಕರ್ ಅವರ ಚಿತ್ರವಿರುವ ವಿಶೇಷ ಅಂಚೆ ಸ್ಟ್ಯಾಂಪ್ ಹಾಗೂ ನಾಣ್ಯವನ್ನು ಬಿಡುಗಡೆ ಮಾಡಿರುವುದನ್ನು ಸಹ ವಿವರಿಸಿದರು.

ಈ ಕಾರ್ಯಕ್ರಮವನ್ನು ನೃಪತುಂಗ ಕನ್ನಡ ಕೂಟದ ಅಧ್ಯಕ್ಷ ಶ್ರೀ. ಶ್ರೀಧರ್ ವೆಂಕಟ್ ಅವರ ನೇತೃತ್ವದಲ್ಲಿ ಆಯೋಜಿಸಲಾಗಿತ್ತು. ವಿಶ್ವ ಹಿಂದೂ ಪರಿಷತ್ ಅಮೆರಿಕ (VHPA) ಸಂಸ್ಥೆಯು ಈ ಕಾರ್ಯಕ್ರಮವನ್ನು ಪ್ರಾಯೋಜಿಸಿದ್ದರು ಹಾಗೂ ನೆರೆದಿದ್ದ ಅತಿಥಿಗಳಿಗೆ ಅಂಬಾಜಿ ದೇವಾಲಯದವರು ರುಚಿಕರ ಆಹಾರದ ವ್ಯವಸ್ಥೆಯನ್ನು ಮಾಡಿದ್ದರು.

ಸಾಧಕರಿಂದ ಪ್ರೇರಣೆಯ ಭಾಷಣಗಳನ್ನು ಆಯೋಜಿಸಲಾಗಿತ್ತು. ಗೀತಾ ಅವರ ತಂಡದಿಂದ ನೃತ್ಯ, ಪ್ರಿಯಾ ಮತ್ತು ಜ್ಯೋತ್ಸ್ನಾ ಅವರಿಂದ ಗಾಯನ ಕಾರ್ಯಕ್ರಮ ನೀಡಲಾಯಿತು. ಅಟ್ಲಾಂಟದಲ್ಲಿ ನೆಲಸಿರುವ ಹೆಚ್ಚಿನ ಸಂಖ್ಯೆಯ ಭಾರತೀಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net