ಅಗ್ರಿಲೀಫ್​ಗೆ ದಾಖಲೆಯ ರೂ. 16 ಕೋಟಿ ಹೂಡಿಕೆ: ಗ್ರಾಮೀಣ ಭಾಗದ ವಿದೇಶಿ ರಫ್ತು ಸಂಸ್ಥೆಯ ಅಪೂರ್ವ ಸಾಧನೆ | Agrileaf

Agrileaf

ಬೆಳ್ತಂಗಡಿ (ದ.ಕ. ಜಿಲ್ಲೆ) : ಹಾಳೆತಟ್ಟೆ ಉತ್ಪಾದನೆ ಮತ್ತು ರಫ್ತು ಚಟುವಟಿಕೆಯಲ್ಲಿ ದೇಶದ ನಂ.1 ಸಂಸ್ಥೆಯಾಗಿರುವ “ಅಗ್ರಿಲೀಫ್ ( Agrileaf ) ಎಕ್ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್”ನ ಅಭಿವೃದ್ಧಿಗಾಥೆ ಹಾಗೂ ವಿಶ್ವಾಸಾರ್ಹತೆಯನ್ನು ಪರಿಗಣಿಸಿ ಕ್ಯಾಪಿಟಲ್-ಎ ಮತ್ತು ಸಮರ್ಷ್ ಕ್ಯಾಪಿಟಲ್ ಎಂಬ ಎರಡು ಬಂಡವಾಳ ಹೂಡಿಕೆ ಸಂಸ್ಥೆಗಳು ದಾಖಲೆಯ ರೂ. 16 ಕೋಟಿ ಹಣವನ್ನು ಹೂಡಿಕೆ ಮಾಡಿವೆ.

ಇದು ಅಗ್ರಿಲೀಫ್ ಸಂಸ್ಥೆಯ ಹೊಸ ಮೈಲಿಗಲ್ಲಾಗಿದ್ದು, ಅಮೆರಿಕ, ಯೂರೋಪ್, ಮಧ್ಯಪ್ರಾಚ್ಯ ಮತ್ತು ಆಗ್ನೇಯ ಏಷ್ಯಾ ರಾಷ್ಟ್ರಗಳತ್ತ ಸಂಸ್ಥೆಯ ವಿಸ್ತರಣಾ ಯೋಜನೆಗಳಿಗೆ ಸಹಕಾರಿಯಾಗುವ ಜತೆಗೆ ಅಲ್ಲಿ ಸ್ಥಾಪಿತ ಮಾರುಕಟ್ಟೆಯನ್ನು ಹೊಂದಲು ನೆರವಾಗಲಿದೆ. ಅಡಿಕೆ ಹಾಳೆತಟ್ಟೆ ರಫ್ತು ಸಂಸ್ಥೆಯೊಂದಕ್ಕೆ ಈ ಪ್ರಮಾಣದ ಹೂಡಿಕೆ ಹರಿದುಬಂದಿರುವುದು ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಮೊದಲು ಎನ್ನುವುದು ಗಮನಾರ್ಹ.

ಈ ಬಗ್ಗೆ ಮಂಗಳೂರಿನಲ್ಲಿ ಏರ್ಪಡಿಸಲಾದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡ ಸಂಸ್ಥೆಯ ಸಂಸ್ಥಾಪಕರು (ಸಿಇಒ) ಅವಿನಾಶ್ ರಾವ್, ಹೊಸ ಹೂಡಿಕೆಗಳ ಮೂಲಕ ಅಗ್ರಿಲೀಫ್ ಸಂಸ್ಥೆ ತನ್ನ ಜಾಗತಿಕ ಗುರುತನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದು, ಗ್ರಾಮೀಣ ಭಾಗದಲ್ಲಿ ಜನರಿಗೆ ಉದ್ಯೋಗ ಪ್ರಮಾಣ ಹಿಗ್ಗಿಸುವ ಜತೆಗೆ ಹವಾಮಾನ ಬದಲಾವಣೆಯ ಸವಾಲಿನ ಸನ್ನಿವೇಶದಲ್ಲಿ ಪರಿಸರ ಸ್ನೇಹಿ ಹಾಳೆತಟ್ಟೆ ಹಾಗೂ ಇತರೆ ಕೃಷಿ ಉತ್ಪನ್ನಗಳ ಉದ್ಯಮದಲ್ಲಿ ದಾಪುಗಾಲಿಡುತ್ತಿದೆ. ಮುಂದಿನ 2 ವರ್ಷಗಳಲ್ಲಿ ರೂ. 100 ಕೋಟಿ ವ್ಯವಹಾರ ನಡೆಸುವ ಗುರಿಯನ್ನು ಹೊಂದಿದೆ ಎಂದು ತಿಳಿಸಿದ್ದಾರೆ.

ನವೀನ ಆವಿಷ್ಕಾರಗಳೊಂದಿಗೆ ಗ್ರಾಮೀಣ ಭಾಗದಲ್ಲಿ ಛಾಪು ಮೂಡಿಸುತ್ತಿರುವ ಅಗ್ರಿಲೀಫ್ ಸಂಸ್ಥೆ, ಆಧುನಿಕ ತಂತ್ರಜ್ಞಾನಗಳನ್ನು ಬಳಸುತ್ತಿರುವುದು ಹೂಡಿಕೆದಾರರ ಆಕರ್ಷಣೆಗೆ ಪಾತ್ರವಾಗಿದೆ. ಹೊಸ ಹೊಸ ಉತ್ಪನ್ನಗಳ ಮೂಲಕ ಕೃಷಿಕರನ್ನು ಮತ್ತಷ್ಟು ಪ್ರೋತ್ಸಾಹಿಸಲಿದ್ದೇವೆ. ಎಲ್ಲಕ್ಕಿಂತ ಮುಖ್ಯವಾಗಿ, 2025ರಲ್ಲಿ ಅಂದಾಜು 3 ಕೋಟಿ ಹಾಳೆ ಸಂಗ್ರಹಣೆಯಾಗಲಿದ್ದು, ದಿನವೊಂದಕ್ಕೆ 3 ಲಕ್ಷ ಹಾಳೆತಟ್ಟೆಗಳನ್ನು ತಯಾರಿ ಮಾಡುವ ಗುರಿ ಇದೆ ಎಂದು ಸಂಸ್ಥೆಯ ಸಹಸಂಸ್ಥಾಪಕರಾದ ಅತಿಶಯ ಜೈನ್ ವಿವರಿಸಿದ್ದಾರೆ.

ಇದನ್ನೂ ಓದಿ: ಸಿನಿಮಾ ಬಿಡುಗಡೆಯಾದ ಬಳಿಕ…. ಪುಷ್ಪ 2 ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ಬಿಜೆಪಿ ಶಾಸಕ! Pushpa 2

2019ರಲ್ಲಿ ಆರಂಭ

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಿಡ್ಲೆಯಲ್ಲಿ ಅವಿನಾಶ್ ರಾವ್ ಮತ್ತು ಅತಿಶಯ ಜೈನ್ ಅವರು 2019ರಲ್ಲಿ ಅಗ್ರಿಲೀಫ್ ಸಂಸ್ಥೆಯನ್ನು ಆರಂಭಿಸಿದರು. ಪ್ಲಾಸ್ಟಿಕ್, ಪೇಪರ್ ಪ್ಲೇಟ್ ಗಳಿಗೆ ಪರ್ಯಾಯವಾಗಿ ಹಾಳೆತಟ್ಟೆಗಳು ಶೇ.100ರಷ್ಟು ನೈಸರ್ಗಿಕವಾಗಿದೆ. ಗ್ರಾಮೀಣ ಭಾಗದಲ್ಲಿ ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ಮತ್ತು ರೋಬೋಟಿಕ್ಸ್​ಗಳನ್ನೊಳಗೊಂಡ ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಪ್ರತಿ ಉತ್ಪನ್ನದಲ್ಲೂ ಗುಣಮಟ್ಟ ಕಾಯ್ದುಕೊಳ್ಳಲಾಗಿದೆ. 3 ಲಕ್ಷ ಹಾಳೆತಟ್ಟೆಯ ದೈನಂದಿನ ಉತ್ಪಾದನಾ ಗುರಿಯ ಜತೆಗೆ ಇದು ಗ್ರಾಮೀಣ ಪ್ರದೇಶದಲ್ಲಿ ಅಂದಾಜು 1,000 ಉದ್ಯೋಗ ಸೃಷ್ಟಿಸುವ ಮೂಲಕ ಸ್ಥಳೀಯ ಜನ-ಸಮುದಾಯಗಳನ್ನು ಬೆಂಬಲಿಸುತ್ತಾ ಬಂದಿದೆ.

ದಿಲ್ಲಿ To ಹಳ್ಳಿ

ಹಳ್ಳಿಯಿಂದ ತೆರಳಿ ನಗರ, ಮಹಾನಗರಗಳಲ್ಲಿ ಉದ್ಯೋಗ ಮಾಡುತ್ತಿರುವ, ಹಳ್ಳಿಗೆ ವಾಪಸಾಗಲು ಬಯಸುವ ಪ್ರತಿಭಾವಂತರಿಗೆ ಅಗ್ರಿಲೀಫ್ ಸಂಸ್ಥೆ ಉದ್ಯೋಗ ನೀಡುತ್ತಿದೆ. ಇತ್ತೀಚಿಗೆ, ಇದೇ ಮಾದರಿಯಲ್ಲಿ ಹಲವು ನೇಮಕಾತಿಗಳನ್ನು ಮಾಡಲಾಗಿದೆ. ವಿದೇಶದಲ್ಲಿ ಕೆಲಸ ಮಾಡಿದ್ದವರೂ ಈ ಸಂಸ್ಥೆ ಸೇರಿಕೊಂಡಿದ್ದಾರೆ. ದಿಲ್ಲಿ, ಬೆಂಗಳೂರಿನಲ್ಲಿದ್ದವರೂ ಬಂದಿದ್ದಾರೆ. ಸಂಸ್ಥೆ ವಿಸ್ತರಣೆಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಹೊಸ ಕಚೇರಿಯೊಂದನ್ನು ಆರಂಭಿಸಲಾಗುತ್ತಿದ್ದು, ಅಲ್ಲಿಗೂ ಹೊಸ ನೇಮಕಾತಿಗಳನ್ನು ಮಾಡಲಾಗುತ್ತಿದೆ. ನಿಡ್ಲೆಯ ಕೇಂದ್ರ ಕಚೇರಿಯ ಕಾರ್ಖಾನೆಯಲ್ಲೂ ವಿಸ್ತರಣಾ ಕಟ್ಟಡ ಸದ್ಯದಲ್ಲೇ ಉದ್ಘಾಟನೆಯಾಗಲಿದೆ.

ವಿಟಮಿನ್​ ಡಿ ಕೊರತೆ: ನೀವು ಈ ಆಹಾರಗಳನ್ನು ಸೇವಿಸಿದ್ರೆ ಸಾಕು ಬೇಕಾದಷ್ಟು ಡಿ ವಿಟಮಿನ್ ಪಡೆಯಬಹುದು! Vitamin D

ಶೀಘ್ರದಲ್ಲಿ ಭೂಮಿಯಿಂದಲೇ ಕಣ್ಮರೆಯಾಗಲಿದೆ ದಕ್ಷಿಣ ಕೊರಿಯಾ!? ಇಲ್ಲಿದೆ ನೋಡಿ ಆಘಾತಕಾರಿ ಸಂಗತಿ | South Korea

Share This Article

ಕಣ್ಣಿಗೊಂದು ಸವಾಲ್…ಈ ಫೋಟೋದಲ್ಲಿರುವ ಹಾವನ್ನು ಗುರುತಿಸಬಲ್ಲಿರಾ? Optical Illusion..

Optical Illusion: ನಮ್ಮ ಕಣ್ಣುಗಳಿಗೆ ಸವಾಲು ಎಸೆಯುವಂತಹ ಚಿತ್ರಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ…

Tea….ಒಂದು ತಿಂಗಳು ಟೀ ಕುಡಿಯುವುದನ್ನು ಬಿಟ್ಟರೆ ಏನಾಗುತ್ತೆ ಗೊತ್ತಾ?

Tea: ಬೆಳಗ್ಗೆ ಎದ್ದ ತಕ್ಷಣ ಬಿಸಿ ಬಿಸಿ ಟೀ ಕುಡಿದರೆ ಸಿಗುವ ಸಂತೋಷ ಅಷ್ಟಿಷ್ಟಲ್ಲ. ಹಾಗಿದ್ದರೂ,…

ಈ ಅಭ್ಯಾಸಗಳಿಂದ ನೀವು ಶ್ವಾಸಕೋಶ ಕ್ಯಾನ್ಸರ್​ಗೆ​ ತುತ್ತಾಗಬಹುದು ಎಚ್ಚರ! ತಡೆಗಟ್ಟದ್ದಿದ್ರೆ ಸಾವು ಕಟ್ಟಿಟ್ಟಬುತ್ತಿ | Lung Cancer

Lung Cancer: ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಕಾಯಿಲೆಗೆ ತುತ್ತಾದವರ ಸಂಖ್ಯೆ ಗಣನೀಯವಾಗಿ ಏರಿಕೆ ಆಗುತ್ತಿದೆ. ವಯಸ್ಸಿನ…