ಸುರತ್ಕಲ್ ನಿಲ್ದಾಣದಲ್ಲಿ ರೈಲಿನಿಂದ ಬೀಳುತ್ತಿದ್ದ ವೃದ್ಧನ ರಕ್ಷಣೆ

IMG-20250403-WA0029
Published on

ವಿಜಯವಾಣಿ ಸುದ್ದಿಜಾಲ ಮಂಗಳೂರು

ಸುರತ್ಕಲ್ ನಿಲ್ದಾಣದಲ್ಲಿ ಚಲಿಸುತ್ತಿದ್ದ ಮತ್ಸೃಗಂಧ ಎಕ್ಸ್‌ಪ್ರೆಸ್ ರೈಲು (12620) ಏರುವ ಯತ್ನದಲ್ಲಿ ವಿಲನಾಗಿ ಆಯತಪ್ಪಿ ಬೀಳುತ್ತಿದ್ದ ವೃದ್ಧರೋರ್ವರನ್ನು ನಿಲ್ದಾಣದ ಸ್ಟೇಷನ್ ಮಾಸ್ಟರ್ ಹಾಗೂ ಪಾಯಿಂಟ್ಸ್‌ಮೆನ್ ಸೇರಿ ರಕ್ಷಿಸಿದ್ದಾರೆ.

ಮಂಗಳೂರು ಸೆಂಟ್ರಲ್- ಮುಂಬೈ ನಡುವೆ ಸಂಚರಿಸುವ ಮತ್ಸೃಗಂಧ ಎಕ್ಸ್‌ಪ್ರೆಸ್ ರೈಲು ಸುರತ್ಕಲ್ ನಿಲ್ದಾಣದಿಂದ ಪ್ರಯಾಣ ಆರಂಭಿಸಿದ ಬಳಿಕ ವೃದ್ಧ ಪ್ರಯಾಣಿಕರೋರ್ವರು ಗಡಿಬಿಡಿಯಲ್ಲಿ ರೈಲು ಏರುವ ಯತ್ನ ನಡೆಸಿದ್ದಾರೆ. ಈ ಸಂದರ್ಭದಲ್ಲಿ ವೃದ್ಧರು ಬೀಳುವುದನ್ನು ಕಂಡ ನಿಶಾನೆ ಧ್ವಜ ತೋರುವ ರೈಲ್ವೆ ಸಿಬ್ಬಂದಿ (ಪಾಯಿಂಟ್ಸ್‌ಮೆನ್) ಜಗದೀಶ್ ಹಾಗೂ ಸ್ಟೇಷನ್ ಮಾಸ್ಟರ್ ಮನೋಜ್ ಶೆಟ್ಟಿ ನೆರವಿಗೆ ಧಾವಿಸಿದ್ದಾರೆ. ಅವರು ವೃದ್ಧರನ್ನು ಕೂಡಲೇ ತಮ್ಮ ತೋಳಿಗೆ ತೆಗೆದುಕೊಂಡ ಸುರಕ್ಷಿತವಾಗಿ ನಿಲ್ದಾಣದಲ್ಲಿ ಇಳಿಸಿದ್ದಾರೆ.

ತಕ್ಷಣ ನಿಂತ ರೈಲಿನಲ್ಲಿಯೇ ವೃದ್ಧ ಪ್ರಯಾಣಿಕ ಪ್ರಯಾಣ ಮುಂದುವರಿಸಿದ್ದಾರೆ.

ಕೊಂಕಣ ರೈಲ್ವೆ ಚೇರ್ಮನ್ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಂತೋಷ್ ಕುಮಾರ್ ಝಾ ಅವರು ಸಕಾಲದಲ್ಲಿ ವೃದ್ಧ ಪ್ರಯಾಣಿಕರ ನೆರವಿಗೆ ಧಾವಿಸಿದ ಜಗದೀಶ್ ಹಾಗೂ ಮನೋಜ್ ಶೆಟ್ಟಿ ಅವರಿಗೆ ತಲಾ 5,000 ರೂ ಬಹುಮಾನ ಪ್ರಕಟಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net