More

    ಸುನೀಲ್​ ಗವಾಸ್ಕರ್​ ಬಳಿಕ RCB ಅಭಿಮಾನಿಗಳಿಗೆ ಶಾಕ್​ ಕೊಟ್ಟ ಎ ಬಿ ಡಿವಿಲಿಯರ್ಸ್​!

    ನವದೆಹಲಿ: ಟೀಮ್​ ಇಂಡಿಯಾದ ಸ್ಟಾರ್​ ಬ್ಯಾಟ್ಸ್​ಮನ್​​ ವಿರಾಟ್​ ಕೊಹ್ಲಿ ಇತ್ತೀಚೆಗೆ ಹೆಚ್ಚು ಸುದ್ದಿಯಲ್ಲಿದ್ದಾರೆ. ಇತ್ತೀಚೆಗಷ್ಟೇ ಅವರ ಮನೆಗೆ ಜ್ಯೂನಿಯರ್​ ವಿರಾಟ್​ ಕೊಹ್ಲಿ ಆಗಮನವಾಗಿದ್ದು, ಕೊಹ್ಲಿ ತುಂಬಾ ಖುಷಿಯಾಗಿದ್ದಾರೆ. ಮಗನೊಂದಿಗೆ ಸಮಯ ಕಳೆಯುತ್ತಿದ್ದು, ಟೀಮ್​ ಇಂಡಿಯಾದಿಂದ ಅಂತರ ಕಾಯ್ದುಕೊಂಡಿದ್ದಾರೆ. ಇದೀಗ ಕೊಹ್ಲಿ ಮತ್ತೊಂದು ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಕೊಹ್ಲಿ ಈ ಬಾರಿ ಐಪಿಎಲ್​ ಆಡ್ತಾರಾ? ಸದ್ಯ ಆರ್​ಸಿಬಿ ಅಭಿಮಾನಿಗಳಲ್ಲಿ ಇದೊಂದು ಮಿಲಿಯನ್​ ಡಾಲರ್​ ಪ್ರಶ್ನೆಯಾಗಿದೆ. ಇತ್ತೀಚೆಗಷ್ಟೇ ಟೀಮ್​ ಇಂಡಿಯಾದ ಮಾಜಿ ಆಟಗಾರ ಸುನೀಲ್​ ಗವಾಸ್ಕರ್​ ಈ ವಿಚಾರವಾಗಿ ನೀಡಿದ ಹೇಳಿಕೆ ಆರ್​ಸಿಬಿ ಅಭಿಮಾನಿಗಳಿಗೆ ಆಘಾತ ಉಂಟು ಮಾಡಿತ್ತು. ಇದೀಗ ಎಬಿ ಡಿವಿಲಿಯರ್ಸ್​ ನೀಡಿರುವ ಸುಳಿವು ಸಹ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.

    ಐಪಿಎಲ್​ 2024 ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಮಾರ್ಚ್ 22ರಿಂದ ಆರಂಭವಾಗಲಿರುವ ಈ ಮೆಗಾ ಟೂರ್ನಮೆಂಟ್‌ನ ಮೊದಲ ಪಂದ್ಯದಲ್ಲೇ ಆರ್‌ಸಿಬಿ ತಂಡ, ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಆದರೆ, ಈ ಸೀಸನ್‌ನಲ್ಲಿ ವಿರಾಟ್ ಕೊಹ್ಲಿ ಭಾಗವಹಿಸುತ್ತಾರಾ? ಎಲ್ಲರಲ್ಲೂ ಇರುವ ಸಂದೇಹವಿದು. ವಿರುಷ್ಕಾ ದಂಪತಿಗೆ ಗಂಡು ಮಗು ಜನಿಸಿರುವುದು ನಿಮಗೆಲ್ಲ ಗೊತ್ತೇ ಇದೆ. ಇದರಿಂದಾಗಿ ಭಾರತ ತಂಡದಿಂದ ಕೊಹ್ಲಿ ಕೆಲಕಾಲದಿಂದ ದೂರ ಉಳಿದಿದ್ದಾರೆ. ಐಪಿಎಲ್​ ವಿಚಾರದಲ್ಲಿಯೂ ಇದು ಮುಂದುವರಿಯಲಿದೆ ಎನ್ನಲಾಗುತ್ತಿದೆ.

    ಸುನಿಲ್ ಗವಾಸ್ಕರ್ ಇತ್ತೀಚೆಗೆ ಮಾಧ್ಯಮವೊಂದರ ಜೊತೆ ಮಾತನಾಡಿ, ಕೊಹ್ಲಿ ವೈಯಕ್ತಿಕ ಕಾರಣಗಳಿಂದ ಸದ್ಯ ಟೀಂ ಇಂಡಿಯಾದಿಂದ ದೂರ ಉಳಿದಿದ್ದಾರೆ. ಇದೇ ವೇಳೆ ಕೊಹ್ಲಿ ಐಪಿಎಲ್ ಆಡುತ್ತಾರಾ? ಎಂಬ ಪ್ರಶ್ನೆ ಎಲ್ಲರ ಮನದಲ್ಲಿದೆ. ಆದರೆ, ನನಗೆ ತಿಳಿದ ಮಟ್ಟಿಗೆ ವಿರಾಟ್ ಕೊಹ್ಲಿ ಈ ಐಪಿಎಲ್‌ನಲ್ಲಿ ಆಡದೇ ಇರಬಹುದು ಎಂದು ಶಾಕಿಂಗ್ ಹೇಳಿಕೆ ನೀಡಿದ್ದರು.

    ಇದೀಗ ವಿರಾಟ್​ ಕೊಹ್ಲಿ ಅವರ ಟೀಮ್​ಮೇಟ್​ ಎ ಬಿ ಡಿವಿಲಿಯರ್ಸ್​ ಕೂಡ ಕೊಹ್ಲಿ ಅನುಪಸ್ಥಿತಿಯ ಸುಳಿವು ನೀಡಿದ್ದಾರೆ. ಐಪಿಎಲ್ ಸಮಯದಲ್ಲಿ ನೀವು ಆರ್​ಸಿಬಿ ತಂಡದ ಸದಸ್ಯರೊಂದಿಗೆ ಹಾಜರಿರುತ್ತೀರಾ ಎಂದು ಕೇಳಿದಾಗ, ಇನ್ನೂ ಯಾವುದೂ ಕೂಡ ದೃಢವಾಗಿಲ್ಲ. ಕೆಲವು ಬ್ಯಾಟರ್‌ಗಳೊಂದಿಗೆ ಸ್ವಲ್ಪ ಸಮಯ ಕಳೆಯಲು ನನ್ನ ಉಪಸ್ಥಿತಿಯನ್ನು ಕೊಹ್ಲಿ ಕೂಡ ಬಯಸಬಹುದು. ಆದರೆ, ಇನ್ನೂ ಯಾವುದು ದೃಢವಾಗಿಲ್ಲ. ಆಂಡಿ ಫ್ಲವರ್, ಫಾಫ್ ಮತ್ತು ತಂಡದಿಂದ ಕರೆ ಬರಬಹುದು ಎಂದು ನಾನು ಭಾವಿಸುತ್ತೇನೆ. ಆದರೆ, ಸದ್ಯಕ್ಕೆ ನಾನು ಐಪಿಎಲ್‌ನ ಮೊದಲ ಕೆಲವು ವಾರ ಮುಂಬೈನಲ್ಲಿ ಇರಲಿದ್ದೇನೆ. ಸ್ವಲ್ಪ ಕಾಮೆಂಟರಿ ಮಾಡಲಿದ್ದೇನೆ. ಆದ್ದರಿಂದ ನಮ್ಮ ಲೈವ್ ಸ್ಟ್ರೀಮ್‌ಗಳನ್ನು ವೀಕ್ಷಿಸಿ. ನಾಕೌಟ್‌ಗಾಗಿ ನಾನು ಬ್ಯಾಕೆಂಡ್‌ಗೆ ಹಿಂತಿರುಗುತ್ತೇನೆ ಎಂದು ಡಿವಿಲಿಯರ್ಸ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.

    ಈ ಸುದ್ದಿ ಕೇಳಿ ಆರ್‌ಸಿಬಿ ಅಭಿಮಾನಿಗಳು ಸೇರಿದಂತೆ ಕೊಹ್ಲಿ ಅಭಿಮಾನಿಗಳು ಆತಂಕಗೊಂಡಿದ್ದಾರೆ. ಸುನಿಲ್​ ಗವಾಸ್ಕರ್ ಮತ್ತು ಎಬಿಡಿ​ ಮಾತು ನಿಜವಾಗದಿರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ. ಆದರೆ, ವಿರಾಟ್ ಈ ಐಪಿಎಲ್‌ನಲ್ಲಿ ಆಡುತ್ತಾರೋ? ಇಲ್ಲವೋ? ಎಂಬುದನ್ನು ಕಾದು ನೋಡಬೇಕಿದೆ. (ಏಜೆನ್ಸೀಸ್​)

    ಆರ್​ಸಿಬಿಗೆ ಬಿಗ್​ಶಾಕ್​! ಮಿಲಿಯನ್​ ಡಾಲರ್​ ಪ್ರಶ್ನೆಯಾದ ಕೊಹ್ಲಿ, ಏನಿದು ಬ್ರೋ ಎಂದ ಅಭಿಮಾನಿಗಳು

    ಬ್ಲ್ಯಾಕ್​ಮೇಲ್​ ಮಾಹಿತಿ ಕೊಟ್ರೆ ಪ್ರಶಂಸನಾ ಪತ್ರ: ಲೋಕಾಯುಕ್ತ ನ್ಯಾ. ಬಿ.ಎಸ್.ಪಾಟೀಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts