More

    ರಾಧೇ ಆಯ್ತು, ಈಗ ಅಂತಿಮ್ ಮತ್ತು ಮೈದಾನ್ ಮೇಲೆ ಜೀ ಕಣ್ಣು?

    ಮುಂಬೈ: ಸಲ್ಮಾನ್​​ ಖಾನ್​ ಅಭಿನಯದ ರಾಧೇ ಚಿತ್ರವನ್ನು ಜೀ ಸಂಸ್ಥೆಯು ಜೀ ಪ್ಲೆಕ್ಸ್​ ಮತ್ತು ಜೀ5 ಒಟಿಟಿಗಳಲ್ಲಿ ಪೇ ಪರ್​ ವ್ಯೂ ಮಾದರಿಯಲ್ಲಿ ಮೇ 13ರಂದು ಬಿಡುಗಡೆ ಮಾಡಿದ್ದು ಗೊತ್ತೇ ಇದೆ. ಈ ಚಿತ್ರವನ್ನು ಮೊದಲ ದಿನವೇ 4.2 ಮಿಲಿಯನ್​ ಅಂದರೆ 42 ಲಕ್ಷ ಜನ ವೀಕ್ಷಣೆ ಮಾಡಿದ್ದಾರೆ. ಈ ಚಿತ್ರಕ್ಕೆ ಸಿಕ್ಕ ಪ್ರತ್ರಿಕ್ರಿಯೆಯಿಂದ ಖುಷಿಯಾಗಿರುವ ಜೀ ಸಂಸ್ಥೆಯು, ಈಗ ಇನ್ನಷ್ಟು ಚಿತ್ರಗಳನ್ನು ಪೇ ಪರ್​ ವ್ಯೂ (ಪ್ರತಿ ವೀಕ್ಷಣೆಗೆ ಶುಲ್ಕ) ಬಿಡುಗಡೆ ಮಾಡುವುದಕ್ಕೆ ಪ್ರಯತ್ನ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ.

    ಇದನ್ನೂ ಓದಿ: ಸ್ಟಾರ್ ಮಕ್ಕಳಿಗೆ ಆ ನಿಯಮ ಇದೆಯಾ ಎಂದು ಪ್ರಶ್ನಿಸಿದ ಮಲ್ಲಿಕಾ

    ಪ್ರಮುಖವಾಗಿ, ಕಳೆದೊಂದು ವರ್ಷದಿಂದ ಬಾಲಿವುಡ್​ನಲ್ಲಿ ಯಾವೊಂದು ದೊಡ್ಡ ಚಿತ್ರವೂ ಬಿಡುಗಡೆಯಾಗಿಲ್ಲ. ಮೊದಲ ಲಾಕ್​​ಡೌನ್​ ಮುಗಿದ ಮೇಲೆ ಕೆಲವು ಚಿತ್ರಗಳನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವ ಪ್ರಯತ್ನವಾದರೂ, ಕಾರಣಾಂತರಗಳಿಂದ ಮುಂದೂಡಲಾಯಿತು. ಈಗ ಕರೊನಾ ಎರಡನೇ ಅಲೆ ಇರುವುದರಿಂದ, ಈ ವರ್ಷ ಸಹ ಚಿತ್ರಪ್ರದರ್ಶನ ಇರುತ್ತದೋ, ಇಲ್ಲವೋ ಎಂಬ ಬಗ್ಗೆ ಹಲವರಿಗೆ ಸಂಶಯ ಇದೆ.

    ಈ ಮಧ್ಯೆ ಕೆಲವು ದೊಡ್ಡ ಚಿತ್ರಗಳು ಒಂದು ವರ್ಷದಿಂದ ಬಿಡುಗೆಡಯ ಅವಕಾಶಕ್ಕಾಗಿ ಕಾಯುತ್ತಿದ್ದರೂ ಕಾರಣಾಂತರಗಳಿಂದ ಅವಕಾಶ ಸಿಕ್ಕಿಲ್ಲ. ಪ್ರಮುಖವಾಗಿ ಅಕ್ಷಯ್​ ಕುಮಾರ್​ ಅಭಿನಯದ ಸೂರ್ಯವಂಶಿ, ರಣವೀರ್​ ಸಿಂಗ್​ ಅಭಿನಯದ 83 ಚಿತ್ರಗಳನ್ನು ಯಾಕೆ ಬಿಡುಗಡೆ ಮಾಡಬಾರದು ಎಂದು ಜೀ ಸಂಸ್ಥೆಯು ಪ್ರಯತ್ನ ನಡೆಸಿದೆ.

    ಇದನ್ನೂ ಓದಿ: `ರಾಧೇ’ ಚಿತ್ರದ ಮೊದಲ ವಾರದ ಕಲೆಕ್ಷನ್ ಇಷ್ಟೇನಾ?

    ಇದು ಈಗಾಗಲೇ ಸಿದ್ಧವಿರುವ ಚಿತ್ರಗಳಾದರೆ, ಇನ್ನೂ ಕೆಲವು ಚಿತ್ರಗಳ ಚಿತ್ರೀಕರಣ ಗ್ಯಾಪ್​ನಲ್ಲಿ ಮುಗಿದಿದ್ದು, ಆ ಚಿತ್ರಗಳು ಸಹ ಸದ್ಯ ಬಿಡುಗಡೆಯಾಗುವಂತಿಲ್ಲ. ಅಕ್ಷಯ್​ ಕುಮಾರ್​ ಅಭಿನಯದ ಬೆಲ್​ ಬಾಟಮ್​, ಅಜಯ್​ ದೇವಗನ್​ ಅಭಿನಯದ ಮೈದಾನ್​, ಸಲ್ಮಾನ್ ಖಾನ್​ ಅಭಿನಯದ ಅಂತಿಮ್​ ಚಿತ್ರಗಳ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ನಡೆಯುತ್ತಿದ್ದು, ಆ ಚಿತ್ರತಂಡಗಳ ಜತೆಗೂ ಜೀ ಸಂಸ್ಥೆಯು ಮಾತುಕತೆ ನಡೆಸಿದೆಯಂತೆ. ಇಷ್ಟು ಚಿತ್ರಗಳ ಪೈಕಿ ಯಾವೆಲ್ಲ ಚಿತ್ರಗಳು ಒಟಿಟಿಯಲ್ಲಿ ಬಿಡುಗಡೆಯಾಗುತ್ತವೋ ಕಾದು ನೋಡಬೇಕಿದೆ.

    ಸುಳ್ಳುಸುದ್ದಿಗಳನ್ನು ನಂಬಲೇಬೇಡಿ ಎಂದ ಕೃತಿ ಶೆಟ್ಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts