

ಕಿಲಾ: ಮದುವೆಯಾದ 20 ದಿನಗಳ ನಂತರ ಪತ್ನಿಯನ್ನು ಪ್ರಿಯಕರನಿಗೆ ಕೊಟ್ಟು ಮದುವೆ ಮಾಡಿಸಿರುವ ವಿಚಿತ್ರ ಘಟನೆ ಝಾರ್ಖಂಡ್ನ ಪಲಮು ಜಿಲ್ಲೆಯ ಕಿಲಾ ಗ್ರಾಮದಲ್ಲಿ ನಡೆದಿದೆ.
ಮೇ 10ರಂದು ಕಿಲಾ ಗ್ರಾಮದ ಸನೋಜ್ ಕುಮಾರ್, ಪ್ರಿಯಾಂಕಾ ಎಂಬಾಕೆಯ ಜತೆ ಮದುವೆಯಾಗಿದ್ದ. ಆದರೆ ಪ್ರಿಯಾಂಕಾ ಅದೇ ಗ್ರಾಮದ ಜೀತೆಂದ್ರ ಎಂಬಾತನನ್ನು ಪ್ರೀತಿಸುತ್ತಿದ್ದಳು. ಹಾಗಾಗಿ ಮದುವೆಯ ನಂತರವೂ ಆಕೆ ಅವನ ಜತೆ ಫೋನ್ನಲ್ಲಿ ಮಾತನಾಡುತ್ತಿದ್ದಳು.
ಈ ನಡುವೆ ಪ್ರಿಯಾಂಕಾ ತನ್ನ ಪ್ರಿಯಕರನೊಂದಿಗೆ ಓಡಿಹೋಗಲು ಸಿದ್ಧತೆ ನಡೆಸಿದ್ದು, ಗ್ರಾಮಸ್ಥರು ಆಕೆಯನ್ನು ಹಿಡಿದು ಕುಟುಂಬಸ್ಥರಿಗೆ ಒಪ್ಪಿಸಿದ್ದಾರೆ. ವಿಷಯ ತಿಳಿದ ಪತಿ ಸನೋಜ್, ಮಾನಾಟು ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಪ್ರಿಯಾಂಕ ಹಾಗೂ ಜಿತೇಂದ್ರನ ಜೊತೆ ವಿವಾಹ ಮಾಡಿಸಿದ್ದಾನೆ.(ಏಜೆನ್ಸೀಸ್)