

ನವದೆಹಲಿ: ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಇಂಗ್ಲೆಂಡ್ ತಂಡಕ್ಕೆ ಭಾರೀ ಮುಖಭಂಗವಾಗಿದ್ದು, ಅಫ್ಘಾನಿಸ್ತಾನದ ಎದುರು 69ರನ್ಗಳ ಸೋಲುಂಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ಆರಂಭಿಕ ರಹಮಾನುಲ್ಲಾ ಗುರ್ಬಾಜ್ (80 ರನ್, 57 ಎಸೆತ, 8 ಬೌಂಡರಿ, 4 ಸಿಕ್ಸರ್), ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಇಕ್ರಂ ಅಲಿಖಿಲ್ (58 ರನ್, 66 ಎಸೆತ, 3 ಬೌಂಡರಿ, 2 ಸಿಕ್ಸರ್) ಅರ್ಧಶತಕಗಳ ಫಲವಾಗಿ 49.5 ಓವರ್ಗಳಲ್ಲಿ 284 ಆಲೌಟ್ ಆಯಿತು.
ಇಂಗ್ಲೆಂಡ್ ಪರ ಆದಿಲ್ ರಶೀದ್ (10-1-42-3), ಮಾರ್ಕ್ ವುಡ್ (9-0-50-2), ಲಿಯಾಮ್ ಲಿವಿಂಗ್ಸ್ಟನ್ (10-0-33-1), ರೀಸ್ ಟಾಪ್ಲೆ (8.5-1-52-1), ಜೋ ರೂಟ್ (4-0-19-1), ಸ್ಯಾಮ್ ಕರ್ರನ್ (4-0-46-0), ಕ್ರಿಸ್ ವೋಕ್ಸ್ (4-0-41-0) ರನ್ ನೀಡಿ ವಿಕೆಟ್ ಪಡೆದಿದ್ದಾರೆ.
ಗುರಿ ಬೆನ್ನತ್ತಿದ್ದ ಇಂಗ್ಲೆಂಡ್ ತಂಡಕ್ಕೆ ಬಿಟ್ಟು ಬಿಡದೆ ಕಾಡಿದ ಅಫ್ಘಾನಿಸ್ತಾನ ಬೌಲರ್ಗಳು ಎದುರಾಳಿ ತಂಡವನ್ನು 40.3 ಓವರ್ಗಳಲ್ಲಿ 215 ರನ್ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು. ಇಂಗ್ಲೆಂಡ್ ಪರ ಹ್ಯಾರಿ ಬ್ರೂಕ್ (66 ರನ್, 61 ಎಸೆತ, 7 ಬೌಂಡರಿ, 1 ಸಿಕ್ಸರ್) ಕೆಲಕಾಲ ತಂಡಕ್ಕೆ ಆಸರೆಯಾದರು.
ಅಫ್ಘಾನಿಸ್ತಾನ ಪರ ರಶೀದ್ ಖಾನ್ (9.3-1-37-3), ಮುಜೀಬ್ ಉರ್ ರಹಮಾನ್ (10-1-21-3), ಮೊಹಮ್ಮದ್ ನಬಿ (6-0-16-2), ಫಜಲ್ಹಕ್ ಫಾರೂಕಿ (7-0-50-1), ನವೀನ್ ಉಲ್ ಹಕ್ (6-1-44-1). ಅಜಮತುಲ್ಲಾ ಓಮರ್ಝೈ (2-0-13-0) ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿರುವ ಬೌಲರ್ಗಳು. ಇಂಗ್ಲೆಂಡ ತಂಡ ಆಡಿರುವ ಮೂರು ಪಂದ್ಯಗಳಲ್ಲಿ 2 ರಲ್ಲಿ ಸೋತಿದೆ. ಅಫ್ಘಾನಿಸ್ತಾನ ಆಡಿರುವ ಮೂರು ಪಂದ್ಯಗಳಲ್ಲಿ ಮೊದಲ ಗೆಲುವು ಸಾಧಿಸಿದೆ.