More

    ದೇಶಕ್ಕಿಂತ ಐಪಿಎಲ್ ಮುಖ್ಯವೇ? ಮೂವರು ಕ್ರಿಕೆಟಿಗರಿಗೆ ಆಫ್ಘನ್​ ಕ್ರಿಕೆಟ್ ಮಂಡಳಿ ಶಾಕ್!

    ಕಾಬೂಲ್​: ಐಪಿಎಲ್ 17ನೇ ಸೀಸನ್ ಗೆ ತಯಾರಿ ನಡೆಸುತ್ತಿರುವ ಅಫ್ಘಾನಿಸ್ತಾನ ಕ್ರಿಕೆಟಿಗರಿಗೆ ಆ ದೇಶದ ಕ್ರಿಕೆಟ್ ಮಂಡಳಿ ಬಿಗ್ ಶಾಕ್ ನೀಡಿದೆ. ಸ್ಟಾರ್ ಬೌಲರ್ ಗಳಾದ ಮುಜೀಬ್ ಉರ್ ರೆಹಮಾನ್, ಫಜಲ್ಹಕ್ ಫಾರೂಕಿ, ನವೀನ್ ಉಲ್ ಹಕ್​ಗೆ ಎನ್‌ಒಸಿ (ನಿರಾಕ್ಷೇಪಣಾ ಪ್ರಮಾಣಪತ್ರ) ನೀಡದಿರಲು ನಿರ್ಧರಿಸಲಾಗಿದೆ.

    ಇದನ್ನೂ ಓದಿ: ಹಾರ್ದಿಕ್​ ಪಾಂಡ್ಯರ ಆ ವರ್ತನೆ ನನಗೆ ಇಷ್ಟವಾಗಲಿಲ್ಲ! ಕಹಿ ಘಟನೆ ನೆನಪಿಸಿಕೊಂಡ ಮೊಹಮ್ಮದ್​ ಶಮಿ
    ಈ ಮೂವರಿಗೆ ದೇಶಕ್ಕಿಂತ ವೈಯಕ್ತಿಕ ಲಾಭವೇ ಮುಖ್ಯವಾಗಿರುವುದರಿಂದ ಎರಡು ವರ್ಷ ಐಪಿಎಲ್ ಮತ್ತು ಇತರ ಫ್ರಾಂಚೈಸಿ ಲೀಗ್‌ಗಳಲ್ಲಿ ಆಡದಂತೆ ನಿಷೇಧ ಹೇರಲಾಗಿದೆ. ಇವರಿಗೆ ಈ ಹಿಂದೆ ನೀಡಿದ್ದ ಎನ್‌ಒಸಿಯನ್ನು ಎಸಿಬಿಯ ವಿಶೇಷ ಸಮಿತಿ ರದ್ದುಗೊಳಿಸಿತ್ತು. ಮೇಲಾಗಿ ಈ ಮೂವರಿಗೆ ಒಂದು ವರ್ಷದವರೆಗೆ ಕೇಂದ್ರ ಗುತ್ತಿಗೆ ನೀಡದಿರಲು ನಿರ್ಧರಿಸಲಾಯಿತು.

    ಮುಜೀಬ್, ಫಾರೂಕಿ, ನವೀನ್… ಈ ಮೂವರು ದೇಶದ ಹಿತಾಸಕ್ತಿಗಿಂತಲೂ ಸ್ವಂತ ಹಿತಾಸಕ್ತಿಗೇ ಮಹತ್ವ ನೀಡುತ್ತಿದ್ದಾರೆ. ಹೀಗಾಗಿ ಅವರ ಹೆಸರನ್ನು ಕೇಂದ್ರ ಒಪ್ಪಂದಕ್ಕೆ ಪರಿಗಣಿಸುವುದಿಲ್ಲ ಎಂದು ಕ್ರಿಕೆಟ್ ಮಂಡಳಿ ತಿಳಿಸಿದೆ. ಆದರೆ, 2024ರ ಜನವರಿಯಿಂದ ದೇಶಕ್ಕಾಗಿ ಆಡಲು ಆಸಕ್ತಿ ಇದೆ ಎಂದು ಮೂವರೂ ಹೇಳಿದ್ದಾರೆ. ಅವರಿಗೆ ಒಂದು ವರ್ಷದವರೆಗೆ ಕೇಂದ್ರ ಗುತ್ತಿಗೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಎಸಿಬಿ ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ.

    ಐಪಿಎಲ್‌ನಲ್ಲಿ ಮುಜೀಬ್ ಕೋಲ್ಕತ್ತಾ ನೈಟ್ ರೈಡರ್ಸ್, ಫಾರೂಕಿ ಸನ್‌ರೈಸರ್ಸ್ ಹೈದರಾಬಾದ್ ಮತ್ತು ನವೀನ್ ಲಕ್ನೋ ಸೂಪರ್ ಜೆಂಟ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಇವರೊಂದಿಗೆ ರಶೀದ್ ಖಾನ್ ಮತ್ತು ನೂರ್ ಅಹ್ಮದ್ ಗುಜರಾತ್ ಟೈಟಾನ್ಸ್ ಪರ ಆಡುತ್ತಿದ್ದಾರೆ.

    ಐಪಿಎಲ್ 17ನೇ ಸೀಸನ್ ಮುಂದಿನ ವರ್ಷ ಏಪ್ರಿಲ್ ನಲ್ಲಿ ಆರಂಭವಾಗಲಿದೆ. ಭಾರತದ ನೆಲದಲ್ಲಿ ಏಕದಿನ ವಿಶ್ವಕಪ್ ಮುಗಿದ ಬಳಿಕ ನವೀನ್ 50 ಓವರ್ ಮಾದರಿಗೆ ವಿದಾಯ ಹೇಳಿದ್ದು ಗೊತ್ತೇ ಇದೆ.ಇವರೊಂದಿಗೆ ಮುಜೀಬ್ ಮತ್ತು ಫಾರೂಕಿ ಕೂಡ ಟಿ20 ಲೀಗ್‌ಗಳಲ್ಲಿ ಆಡಲು ಆಸಕ್ತಿ ತೋರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಬಾರಿ ಈ ಮೂವರು ಆಟಗಾರರಿಗೆ ಎನ್​ಒಸಿ ನೀಡದಿರಲು ಆಫ್ಘನ್ ಕ್ರಿಕೆಟ್ ಮಂಡಳಿ ನಿರ್ಧರಿಸಿದೆ.

    ಕೊನೆಗೂ ಮುಂಬೈ ತಲುಪಿದ ವಿಮಾನ: 276 ಪ್ರಯಾಣಿಕರು ವಾಪಸ್​- 27 ಭಾರತೀಯರು ಇನ್ನೂ ಫ್ರಾನ್ಸ್‌ನಲ್ಲಿರುವುದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts