More

    ಹಾರ್ದಿಕ್​ ಪಾಂಡ್ಯರ ಆ ವರ್ತನೆ ನನಗೆ ಇಷ್ಟವಾಗಲಿಲ್ಲ! ಕಹಿ ಘಟನೆ ನೆನಪಿಸಿಕೊಂಡ ಮೊಹಮ್ಮದ್​ ಶಮಿ

    ನವದೆಹಲಿ: ಐಪಿಎಲ್​-2022ರಲ್ಲಿ ಚೊಚ್ಚಲ ಬಾರಿಗೆ ಪದಾರ್ಪಣೆ ಮಾಡಿದ ಗುಜರಾತ್​ ಟೈಟಾನ್ಸ್,​ ಹಾರ್ದಿಕ್​ ಪಾಂಡ್ಯ ನೇತೃತ್ವದಲ್ಲಿ ಮೊದಲ ಆವೃತ್ತಿಯಲ್ಲೇ ಟ್ರೋಫಿ ಜಯಿಸುವ ಮೂಲಕ ಹೊಸ ದಾಖಲೆ ಬರೆಯಿತು. ಈ ವೇಳೆ ನಡೆದ ಘಟನೆಯೊಂದನ್ನು ಹಿರಿಯ ಆಟಗಾರ ಮೊಹಮ್ಮದ್​ ಶಮಿ ಮೆಲುಕು ಹಾಕಿದ್ದಾರೆ.

    ನಾಯಕರಾಗಿದ್ದ ಹಾರ್ದಿಕ್​ ಪಾಂಡ್ಯ ತಾಳ್ಮೆಯನ್ನು ಕಳೆದುಕೊಂಡು ಕೋಪಗೊಂಡಿದ್ದನ್ನು ಸ್ಮರಿಸಿರುವ ಶಮಿ, ಪಾಂಡ್ಯರ ಆ ಪ್ರತಿಕ್ರಿಯೆ ತಮಗೆ ಇಷ್ಟವಾಗಲಿಲ್ಲ ಎಂದಿದ್ದಾರೆ. ಅಷ್ಟಕ್ಕೂ ಏನಾಗಿತ್ತು ಅಂದರೆ, ಶಮಿ ಸರಿಯಾಗಿ ಫೀಲ್ಡಿಂಗ್​ ಮಾಡದಿದ್ದಾಗ ಪಾಂಡ್ಯ ಮೈದಾನದಲ್ಲೇ ಜೋರಾಗಿ ಕೂಗಾಡಿದ್ದರು. ಇದು ಶಮಿಗೆ ಬೇಸರ ತರಿಸಿತ್ತು.

    ಈ ಬಗ್ಗೆ ಗೌರವ್​ ಕಪೂರ್​ ಪಾಡ್​ಕಾಸ್ಟ್​ನಲ್ಲಿ ಮಾತನಾಡಿದ ಶಮಿ, ಹಾರ್ದಿಕ್ ತನ್ನ ಮೇಲೆ ವಾಗ್ದಾಳಿ ನಡೆಸಿದ್ದನ್ನು ನೋಡಿದಾಗ ನನಗೆ ಸರಿ ಎನಿಸಲಿಲ್ಲ ಎಂದರು. ಮೈದಾನದಲ್ಲಿ ಯಾರಿಂದಲೂ ವಿಶೇಷವಾಗಿ ಪ್ರತಿ ಆಟಗಾರನ ಮೇಲೆ ಕ್ಯಾಮೆರಾ ಮುಂದೆಯೇ ರೇಗುವುದು ನನಗೆ ಇಷ್ಟವಿಲ್ಲ ಎಂದು ಹಾರ್ದಿಕ್ ಮತ್ತು ತಂಡದ ಮ್ಯಾನೇಜ್‌ಮೆಂಟ್‌ಗೆ ಪಂದ್ಯದ ನಂತರ ಹೇಳಿದೆ ಎಂದು ಶಮಿ ತಿಳಿಸಿದರು.

    ಇಂದು ಟೀಮ್​ ಇಂಡಿಯಾದ ಶಮಿ ಮತ್ತು ಹಾರ್ದಿಕ್ ತಂಡದ ಸಹ ಆಟಗಾರರಾಗಿದ್ದಾರೆ. ಅವರು ಈಗಾಗಲೇ ಈ ಘಟನೆಯನ್ನು ಮರೆತಿದ್ದಾರೆ. ಕ್ರೀಡಾಂಗಣದಲ್ಲಿ ಪರಸ್ಪರ ಗೌರವ ನೀಡುವುದು ಆಟದ ಒಂದು ದೊಡ್ಡ ಭಾಗವಾಗಿದೆ ಮತ್ತು ಅದರ ಕೊರತೆಯು ಯಾವುದೇ ತಂಡಕ್ಕೆ ಎಂದಿಗೂ ಸಹಾಯ ಮಾಡುವುದಿಲ್ಲ ಎಂದು ಅರ್ಥಮಾಡಿಕೊಂಡಿದ್ದಾರೆ.

    ಕಾಕತಾಳೀಯ ಏನೆಂದರೆ ಇದೇ ಹಾರ್ದಿಕ್​ ಪಾಂಡ್ಯ ಅವರು ಗಾಯದ ಸಮಸ್ಯೆಯಿಂದ ವಿಶ್ವಕಪ್​ನಿಂದ ಹೊರಗುಳಿದಾಗ ಶಮಿಗೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಸಿಕ್ಕಿತು. ಮೊದಲ 4 ಪಂದ್ಯಗಳಲ್ಲಿ ವಿಶ್ರಾಂತಿ ಪಡೆದುಕೊಂಡಿದ್ದ ಶಮಿ, ಕೇವಲ 7 ಪಂದ್ಯಗಳಲ್ಲಿ 24 ವಿಕೆಟ್​ ಪಡೆಯುವ ಮೂಲಕ ಕ್ರೀಡಾ ಜಗತ್ತಿನ ಗಮನ ಸೆಳೆದರು. ಶಮಿ ಏಳು ಪಂದ್ಯಗಳಲ್ಲಿ ಮೂರು ಬಾರಿ ಐದು ವಿಕೆಟ್‌ಗಳನ್ನು ಕಬಳಿಸಿದರು. ಈ ಮೂಲಕ ಏಕದಿನ ವಿಶ್ವಕಪ್​ನಲ್ಲಿ ವೇಗವಾಗಿ 50 ವಿಕೆಟ್‌ಗಳನ್ನು ಪೂರೈಸಿದ ಆಟಗಾರರ ಸಾಲಿಗೆ ಸೇರಿಕೊಂಡಿದ್ದಾರೆ. ಆದಾಗ್ಯೂ, ಅಹಮದಾಬಾದ್‌ನಲ್ಲಿ ನಡೆದ ಫೈನಲ್​ ಪಂದ್ಯದಲ್ಲಿ ಭಾರತ ಆರು ವಿಕೆಟ್‌ಗಳಿಂದ ಆಸ್ಟ್ರೇಲಿಯಾ ವಿರುದ್ಧ ಸೋತಿತು. ನಿರ್ಣಾಯಕ ಪಂದ್ಯದಲ್ಲಿ ಶಮಿ ಅವರು ತಮ್ಮ ಫಾರ್ಮ್ ಮುಂದುವರಿಸಲು ಸಾಧ್ಯವಾಗದೆ ನಿರಾಶೆಗೊಂಡರು.

    ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಗಮನಾರ್ಹ ಸಾಧನೆ ಮಾಡಿದ ಟೀಮ್​ ಇಂಡಿಯಾದ ವೇಗಿ ಮೊಹಮ್ಮದ್​ ಶಮಿಗೆ ಕೇಂದ್ರ ಸರ್ಕಾರ ಅರ್ಜುನ ಪ್ರಶಸ್ತಿ ನೀಡಿ ಗೌರವ ಸೂಚಿಸಿದೆ. (ಏಜೆನ್ಸೀಸ್​)

    ವಿಶ್ವಕಪ್​ ಟ್ರೋಫಿಯ ಮೇಲೆ ಕಾಲಿಟ್ಟ ಮಿಚೆಲ್​ ಮಾರ್ಷ್​ ವಿರುದ್ಧ ಗುಡುಗಿದ ಮೊಹಮ್ಮದ್​ ಶಮಿ!

    ಮೊಹಮ್ಮದ್​ ಶಮಿಯ 2ನೇ ಹೆಂಡ್ತಿಯಾಗಲು ನಾನು ರೆಡಿ ಆದ್ರೆ ಒಂದು ಷರತ್ತು ಎಂದು ಖ್ಯಾತ ನಟಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts