

ಪುತ್ತೂರು: ಚಿಕ್ಕಮಗಳೂರಿನಲ್ಲಿ ಹೆಲ್ಮೆಟ್ ಧರಿಸದ ವಿಚಾರದಲ್ಲಿ ವಕೀಲರೊಬ್ಬರ ಮೇಲೆ ಪೊಲೀಸರು ನಡೆಸಿದ ದೌರ್ಜನ್ಯವನ್ನು ಖಂಡಿಸಿ ಪುತ್ತೂರು ಬಾರ್ ಅಸೋಸಿಯೇಶನ್ ವತಿಯಿಂದ ಖಂಡನಾ ಸಭೆ ನಡೆದು, ನ್ಯಾಯಾಲಯದ ಆವರಣದಲ್ಲಿ ಸಾಂಕೇತಿಕ ಪ್ರತಿಭಟನೆ ಸೋಮವಾರ ನಡೆಯಿತು.
ಖಂಡನಾ ಸಭೆಯಲ್ಲಿ ಪುತ್ತೂರು ವಕೀಲರ ಸಂಘ ಮಾಜಿ ಅಧ್ಯಕ್ಷ ಮಹೇಶ್ ಕಜೆ ಮಾತನಾಡಿ ಹೆಲ್ಮೆಟ್ ಹಾಕಿಲ್ಲ ಎಂಬ ವಿಚಾರದಲ್ಲಿ ಕಾನೂನು ಮೀರಿ ವರ್ತಿಸಿದ ಪೊಲೀಸರು ಠಾಣೆಗೆ ಹೋದ ಸಂದರ್ಭದಲ್ಲಿ ಅಧಿಕಾರದ ವ್ಯಾಪ್ತಿಯನ್ನು ಮೀರಿ ದೈಹಿಕವಾಗಿ ಹಲ್ಲೆ ನಡೆಸಲಾಗಿದೆ. ಸಾರ್ವಜನಿಕವಾಗಿ ಪೊಲೀಸರು ವರ್ತಿಸಿ ರೀತಿಯನ್ನು ಗಮನಿಸಿದನ್ನು ನೋಡಿದರೆ, ಅದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದರು.
ನ್ಯಾಯಾಲಯದ ಆವರಣದಲ್ಲಿ ನಡೆದ ಸಾಂಕೇತಿಕ ಪ್ರತಿಭಟನೆಯಲ್ಲಿ ವಕೀಲ ಕುಂಬ್ರ ದುರ್ಗಾಪ್ರಸಾದ್ ರೈ ಮಾತನಾಡಿ ಚಿಕ್ಕಮಂಗಳೂರು ಠಾಣೆಯ ವ್ಯಾಪ್ತಿಗೆ ಬೇರೆ ಠಾಣೆಯ ಪೊಲೀಸರು ರಜೆಯನ್ನು ಹಾಕದೆ ಬಂದಿರುವ ಬಗ್ಗೆಯೂ ಸರಿಯಾದ ತನಿಖೆಯಾಗಬೇಕಾಗಿದೆ. ದರೋಡೆ, ಹಲ್ಲೆಯಾದಾಗ ಇಲ್ಲದ ಸಿಸಿಟಿವಿ ಪೂಟೇಜ್ ಪಿಟ್ಟಿ ಪ್ರಕರಣ ಹಾಕುವುದಕ್ಕೆ, ಹೆಲ್ಮೆಟ್ ಹಾಕದ್ದಕ್ಕೆ ಸರಿಯಾಗಿರುತ್ತದೆ. ಸೀಟ್ ಬೆಲ್ಟ್ ಹಾಕದೆ ಹೋದ ಚಿತ್ರ ಸಿಗುತ್ತದೆ, ಅದೇ ದಾರಿಯಲ್ಲಿ ದರೊಡೆಕೋರ ಹೋದಾಗ ಚಿತ್ರ ಇರುವುದಿಲ್ಲ. ಇದರ ಹಿಂದೆ ಇರುವವರು ಯಾರು ಎಂಬ ಬಗ್ಗೆ ಕೂಲಂಕುಶವಾದ ತನಿಖೆ ನಡೆಯಬೇಕು ಎಂದು ತಿಳಿಸಿದರು.
ವಕೀಲರಾದ ರಾಮ್ ಮೋಹನ್ ರಾವ್, ಪಿ. ಕೆ. ಸತೀಶನ್, ದಿನಕರ ರೈ, ಎನ್. ಕೆ. ಜಗನ್ನಿವಾಸ ರಾವ್, ನರಸಿಂಹಪ್ರಸಾದ್ ಮಾತನಾಡಿದರು. ಬಾರ್ ಎಸೋಸಿಯೇಶನ್ ನ ದೇವಾನಂದ, ಜಗನ್ನಾಥ, ವಕೀಲರ ಸಂಘಧ ಪ್ರಧಾನ ಕಾರ್ಯದರ್ಶಿ ಚಿನ್ಮಯ್ ರೈ, ಉಪಾಧ್ಯಕ್ಷ ಕೃಷ್ಣಪ್ಪ ಗೌಡ, ಜೊತೆ ಕಾರ್ಯದರ್ಶಿ ಸೀಮಾ ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.