ಮಹಾನ್ ನಾಯಕರ ತತ್ವಾದರ್ಶ ಅಳವಡಿಸಿಕೊಳ್ಳಿ

PH 6
Published on

ಕಮಲಾಪುರ: ಅಹಿಂಸಾ ತತ್ವದ ಮೂಲಕ ಭಾರತದಿಂದ ಬ್ರಿಟಿಷರನ್ನು ಓಡಿಸಿದ ಮಹಾನ್ ನಾಯಕ ರಾಷ್ಟçಪಿತ ಮಹಾತ್ಮ ಗಾಂಧಿ ಅವರಾಗಿದ್ದು, ದೇಶಕ್ಕಾಗಿ ಹಗಲಿರುಳು ಶ್ರಮಿಸಿದ್ದಾರೆ ಎಂದು ತಹಸೀಲ್ದಾರ್ ರಮೇಶ ಪೆದ್ದಿ ಹೇಳಿದರು.

ತಹಸಿಲ್ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರಾಷ್ಟçಪಿತ ಮಹಾತ್ಮ ಗಾಂಧಿ, ಮಾಜಿ ಪ್ರಧಾನಿ ಲಾಲ್ ಬಹಾದುರ್ ಶಾಸ್ತಿç ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಾಸ್ತಿçÃಜಿ ಅವರು ಸರಳವಾಗಿ ಜೀವನ ನಡೆಸಿದ ಶ್ರೇಷ್ಠ ನಾಯಕರಾಗಿದ್ದಾರೆ. ಇಂದಿನ ಯುವಜನತೆ ಮಹಾನ್ ನಾಯಕರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಸಿಕೊಳ್ಳಬೇಕು ಎಂದು ಕರೆ ನೀಡಿದರು.

ಶಿರಸ್ತೆದಾರ ಕಮಲಾಕರ, ಆಹಾರ ನಿರೀP್ಷÀಕ ಸಂತೋಷ ಸೋಲಾಪುರ, ಪ್ರಮುಖರಾದ ಅಂದಪ್ಪ ಓಕಳಿ, ಅವಿನಾಶ, ಸಿದ್ದಲಿಂಗ, ಹಣಮಂತ, ಮಹೇಶ ಇತರರಿದ್ದರು.

ಮಹಾಗಾಂವ್ ಪಿಡಿಒಗೆ ನೋಟಿಸ್ ಜಾರಿ: ಕಮಲಾಪುರ ತಾಲೂಕಿನ ಮಹಾಗಾಂವ್ ಗ್ರಾಮ ಪಂಚಾಯಿತಿಯಲ್ಲಿ ಹಮ್ಮಿಕೊಂಡಿದ್ದ ಲಾಲ್ ಬಹಾದುರ್, ಮಹಾತ್ಮ ಗಾಂಧಿ ಜಯಂತಿ ಕಾರ್ಯಕ್ರಮಕ್ಕೆ ಗೈರಾದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜಗದೇವಿ ಪಾವರ್ ಅವರಿಗೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅಂಬರೀಶ ಪಾಟೀಲ್ ನೋಟಿಸ್ ಜಾರಿ ಮಾಡಿದ್ದಾರೆ. ಸೋಮವಾರ ಗ್ರಾಪಂನಲ್ಲಿ ರಾಷ್ಟç ನಾಯಕರ ಸ್ಮರಣೆಯ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇಂತಹ ಸಮಾರಂಭಕ್ಕೆ ಗೈರಾಗುವ ಮೂಲಕ ಪಿಡಿಒ ಜಗದೇವಿ ಪವಾರ್ ಅವರು ರಾಷ್ಟç ನಾಯಕರಿಗೆ ಅಪಮಾನ ಮಾಡಿದ್ದಾರೆ ಎಂದು ಗ್ರಾಪಂ ಸದಸ್ಯ ಮುಹ್ಮದ್ ಅಕ್ರಂ ದೂರು ನೀಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿರುವ ತಾಪಂ ಇಒ ಪಿಡಿಒ ಮಹಾದೇವಿ ಅವರಿಗೆ ಉತ್ತರ ನೀಡುವಂತೆ ನೋಟಿಸ್‌ನಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net