

ಹೆಬ್ರಿ: ಹದಿಹರೆಯದ ವಯಸ್ಸಿನಲ್ಲಿ ಸಹಜವಾದ ಆಕರ್ಷಣೆ ಇರುತ್ತವೆ. ಅದನ್ನು ನಿಗ್ರಹಿಸದೆ ಹೋದರೆ ಜೀವನ ಹಾಳಾಗುವ ಸಾಧ್ಯತೆ ಇರುತ್ತವೆ. ಮದ್ಯಪಾನ, ಧೂಮಪಾನ, ಡ್ರಗ್ಸ್, ತಂಬಾಕಿನಂತಹ ದುಶ್ಚಟಗಳಿಂದ ದೂರವಿರಬೇಕು ಎಂದು ಮಾಹೆ ಮಣಿಪಾಲ ಸೈಕ್ಯಾರ್ಟಿಸ್ಟ್ ವಿಭಾಗದ ಅಡಿಷನಲ್ ಪ್ರೊ.ಡಾ.ರವೀಂದ್ರ ಮುನೋಲಿ ಹೇಳಿದರು.
ಹೆಬ್ರಿ ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪದವಿ ಪೂರ್ವ ಕಾಲೇಜು ಹೆಬ್ರಿಯಲ್ಲಿ ವಿದ್ಯಾರ್ಥಿಗಳಿಗೆ ಹದಿಹರೆಯದ ಸಮಸ್ಯೆಗಳ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು. ಮಣಿಪಾಲ ನರ್ಸಿಂಗ್ ಕಾಲೇಜು ಶಿಕ್ಷಕರಾದ ಮಂಜುಳಾ, ಉಪೇಂದ್ರ, ಪಿಆರ್‌ಒ ವಿಜಯ್ ಕುಮಾರ್ ಶೆಟ್ಟಿ, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಉಪನ್ಯಾಸಕಿ ಅನುಸೂಯಾ ಮಲ್ಯ ಸ್ಮರಣಿಕೆ ನೀಡಿ ಗೌರವಿಸಿದರು. ಉಪನ್ಯಾಸಕ ವೀಣೇಶ ಅಮೀನ್ ನಿರೂಪಿಸಿದರು.