ಅದಿತಿ ಪ್ರಭುದೇವ ಮನೆಯಲ್ಲಿ ಮದುವೆ ಸಂಭ್ರಮ; ಮುಗಿಯಿತು ಅರಿಶಿನ ಶಾಸ್ತ್ರ

Aditi Prabhudeva Marriage 3 - Final
Published on

ಬೆಂಗಳೂರು: ಸ್ಯಾಂಡಲ್​ವುಡ್​ ನಟಿ ಅದಿತಿ ಪ್ರಭುದೇವ ಮನೆಯಲ್ಲಿ ಮದುವೆ ಸಂಭ್ರಮ ಶುರುವಾಗಿದೆ. ಸೋಮವಾರ (ನ. 28) ಅದಿತಿ, ಯಶಸ್ವಿ (ಯಶಸ್​) ಜತೆಗೆ ಹಸೆಮಣೆ ಏರಲಿದ್ದು, ಅದಕ್ಕೂ ಮುನ್ನ ಇಂದು ಅರಿಶಿನ ಶಾಸ್ತ್ರ ನಡೆದಿದೆ.

ಅದಿತಿ ಮತ್ತು ಯಶಸ್ವಿ ಅವರ ನಿಶ್ಚಿತಾರ್ಥ ಕಳೆದ ವರ್ಷವೇ ನೆರವೇರಿತ್ತು. ಮದುವೆ ಯಾವಾಗ ಎಂಬ ಪ್ರಶ್ನೆ ಎದುರಾದಾಗಲೆಲ್ಲಾ ಮೌನ ವಹಿಸುತ್ತಿದ್ದ ಅದಿತಿ, ಈ ತಿಂಗಳ ಆರಂಭದಲ್ಲಿ ನ. 28ರಂದು ಮದುವೆಯಾಗುವುದಾಗಿ ಘೋಷಿಸಿದ್ದರು.

ಅದರ ಪ್ರಕಾರ ಭಾನುವಾರ ಅರಮನೆ ಮೈದಾನದಲ್ಲಿ ಅದ್ದೂರಿ ರಿಸೆಪ್ಶನ್ ನಡೆಯಲಿದ್ದು, ನವೆಂಬರ್ 28ರ ಬೆಳಗ್ಗೆ ಮುಹೂರ್ತ 9:30ರಿಂದ 10:32ಕ್ಕೆ ಲಗ್ನ ಮದುವೆ ನಡೆಯಲಿದೆ. ಈ ಮದುವೆ ಸಮಾರಂಭದಲ್ಲಿ ಕನ್ನಡ ಚಿತ್ರರಂಗದ ಹಲವು ಸೆಲೆಬ್ರಿಟಿಗಳು ಮತ್ತು ರಾಜಕೀಯ ಮುಖಂಡರು ಭಾಗವಹಿಸಲಿದ್ದಾರೆ.

ಹಳದಿ ಶಾಸ್ತ್ರದಲ್ಲಿ ಭಾಗವಹಿಸಿದ್ದ ಅದಿತಿ, ಸೋಷಿಯಲ್​ ಮೀಡಿಯಾದಲ್ಲಿ ಕಲೆವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net