ಆದಿಪುರುಷ್​​ ಚಿತ್ರದ ಅಂತಿಮ ಟ್ರೇಲರ್ ಬಿಡುಗಡೆ: ಯುದ್ಧಭೂಮಿಯ ಅನಾವರಣ

adipurush final trailer
Published on

ತಿರುಪತಿ: ಪ್ರಭಾಸ್, ಕೃತಿ ಸನೋನ್, ಸೈಫ್ ಅಲಿ ಖಾನ್, ಸನ್ನಿ ಸಿಂಗ್ ಮತ್ತು ದೇವದತ್ತ ನಟಿಸಿರುವ ರಾಮಾಯಣ ಕಥೆಯಾಧಾರಿತ ಆದಿಪುರುಷ್​​​ ಚಿತ್ರ ಜೂನ್ 16ರಂದು ತೆರೆಗೆ ಬರಲಿದೆ. ಈ ಹಿನ್ನೆಲೆಯಲ್ಲಿ ಆದಿಪುರುಷ್​​​ ಚಿತ್ರತಂಡವು ಅಂತಿಮ ಟ್ರೇಲರ್​ನ್ನು ಬಿಡುಗಡೆ ಮಾಡಿದೆ.

ಮಂಗಳವಾರ ತಿರುಪತಿಯಲ್ಲಿ ನಡೆದ ಅದ್ಧೂರಿ ಪ್ರೀ-ರಿಲೀಸ್ ಸಮಾರಂಭದಲ್ಲಿ ಈ ಟ್ರೇಲರ್​ನ್ನು ಬಿಡುಗಡೆ ಮಾಡಲಾಗಿದೆ. ಈ ಸಮಾರಂಭದಲ್ಲಿ ಚಿತ್ರರಂಗದ ನಟ-ನಟಿ ಹಾಗೂ ಅನೇಕ ಗಣ್ಯರು ಸೇರಿದಂತೆ ಒಂದು ಲಕ್ಷಕ್ಕೂ ಹೆಚ್ಚು ಅಭಿಮಾನಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಆದಿಪುರುಷ್​ ಚಿತ್ರದ​ ಅಂತಿಮ ಟ್ರೈಲರ್​ನಲ್ಲಿ ಏನಿದೆ?
2 ನಿಮಿಷಕ್ಕೂ ಹೆಚ್ಚು ಅವಧಿಯ ಟ್ರೇಲರ್​ನಲ್ಲಿ ರಾಮಾಯಣದ ಕಥಾಹಂದರವನ್ನು ತೋರಿಸಲಾಗಿದೆ. ರಾವಣನು ಸೀತೆಯನ್ನು ಅಪಹರಿಸಿದ ನಂತರದಲ್ಲಾಗುವ ಘಟನೆಗಳ ಚಿತ್ರಣದ ಜತೆಗೆ ಯುದ್ಧಭೂಮಿಯಲ್ಲಿ ಪ್ರಭಾಸ್, ವಾನರ ಸೈನ್ಯ​ ಮತ್ತು ಯುದ್ಧದ ಅನೇಕ ದೃಶ್ಯಗಳನ್ನು ಈ ಟ್ರೇಲರ್​ ಒಳಗೊಂಡಿವೆ.

ಹಿಂದಿನ ಟ್ರೇಲರ್‌ಗಳು ಮತ್ತು ಟೀಸರ್‌ಗಳಿಗೆ ಹೋಲಿಸಿದರೆ ಈ ಟ್ರೇಲರ್​ನ ಮೊದಲಾರ್ಧವು ಉತ್ತಮವಾದ ದೃಶ್ಯಗಳನ್ನು ಹೊಂದಿದೆ. ಬಿಡುಗಡೆಯಾದ ಕೆಲವೇ ಹೊತ್ತಿನಲ್ಲಿ ಟ್ರೇಲರ್​ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಸೇರಿದಂತೆ ಭಾರತದ 5 ವಿವಿಧ ಭಾಷೆಗಳಲ್ಲಿ ಆದಿಪುರುಷ್​​ ಚಿತ್ರ ಬಿಡುಗಡೆಯಾಗಲಿದೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net