ಭಾನುವಾರ ಆದಿಕವಿ ಪುರಸ್ಕಾರ ಮತ್ತು ವಾಗ್ದೇವಿ ಪುರಸ್ಕಾರ ಪ್ರದಾನ

award
Published on

ಬೆಂಗಳೂರು: ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕನರ್ಅಟಕ ಘಟಕ ಪ್ರತಿವರ್ಷ ಕೊಡ ಮಾಡುವ ಪ್ರತಿಷ್ಠಿತ ಆದಿಕವಿ ಮತ್ತು ವಾಗ್ದೇವಿ ಪುರಸ್ಕಾರ ಪ್ರದಾನ ಸಮಾರಂಭ ಇಂದು (ಭಾನುವಾರ) ನಡೆಯಲಿದೆ.

ಗಾಂಧಿ ಭವನದ ಭಾಪೂ ಸಭಾಂಗಣದಲ್ಲಿ ಸಂಜೆ 4.30ಕ್ಕೆ ನಡೆಯಲಿರುವ ಸಮಾರಂಭದಲ್ಲಿ 2025ನೇ ಸಾಲಿನ ಆದಿಕವಿ ಪುರಸ್ಕಾರವನ್ನು ತಿಪಟೂರಿನ ಪ್ರೊ.ಎಲ್.ವಿ.ಶಾಂತಕುಮಾರಿ ಅವರಿಗೆ ನೀಡಲಾಗುವುದು. 2025ನೇ ಸಾಲಿನ ವಾಗ್ದೇವಿ ಪುರಸ್ಕಾರವನ್ನು ದಾವಣಗೆರೆ ಜಿಲ್ಲೆಯ ಅರಬಗಟ್ಟೆ ಅಣ್ಣಪ್ಪ ಅವರಿಗೆ ನೀಡಿ ಗೌರವಿಸಲಾಗುವುದು.

ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಎಸ್.ಜಿ.ಕೋಟಿ ಬಾಗಲಕೋಟೆ, ರಮೇಶ್ ಭಟ್ ಬೆಳಗೋಡು, ರಘುನಂದನ್ ಭಟ್ ನರೂರ, ಪ್ರಶಸ್ತಿ ಪ್ರಾಯೋಜಕರಾದ ಎಸ್.ಜಯರಾಮ್ ಮತ್ತು ಕೆ.ಹರೀಶ್ ಪಾಲ್ಗೊಳ್ಳಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net