

ಅಹಮದಾಬಾದ್: ಆಘಾತಖಾರಿ ಘಟನಯೊಂದರಲ್ಲಿ 13 ವರ್ಷದ ಬಾಲಕಿ ಒಬ್ಬಳು ಮೊಬೈಲ್ ಪೋನ್ ಬಳಸಬೇಡ ಎಂದಿದ್ದಕ್ಕೆ ತನ್ನ ತಂದೆ-ತಾಯಿಗೆ ವಿಷ ಹಾಕಿ ಕೊಲಲು ಮುಂದಾಗಿದ್ದ ಘಟನೆ ಗುಜರಾತಿನ ಅಹಮದಾಬಾದಿನಲ್ಲಿ ನಡೆದಿದೆ.
ಬಾಲಕಿ ಹೆಚ್ಚಾಗಿ ಮೊಬೈಲ್ ಪೋನ್ ಉಪಯೋಗಿಸುತ್ತಿದ್ದ ಕಾರಣ ಆಕೆ ಸಂಪೂರ್ಣವಾಗಿ ಓದಿನ ಮೇಲೆ ಆಸಕ್ತಿಯನ್ನು ಕಳೆದುಕೊಂಡಿದ್ದಳು. ಈ ವಿಚಾರ ತಿಳಿದು ಆಕೆಯ ಪೋಷಕರು ಮೊಬೈಲ್ ಪೋನ್ ಕಸಿದು ಬಳಸದಂತೆ ಎಚ್ಚರಿಸಿದ್ದರು.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಅಭಯಂ ಹೆಲ್ಪ್ಲೈನ್ ಸದಸ್ಯೆ ಫಾಲ್ಗುಣಿ ಪಟೇಲ್ 13 ವರ್ಷದ ಬಾಲಕಿ ಸದಾ ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಾ, ತನ್ನ ಸ್ನೇಹಿತರ ಜೊತೆ ಮಾತನಾಡುತ್ತೆ ಹೆಚ್ಚಿನ ಸಮಯ ಕಳೆಯುತ್ತಿದ್ದಳು. ಓದಿನಲ್ಲಿ ಹಿಂದುಳಿದಿರುವ ಕಾರಣ ಹೆಚ್ಚಾಗಿ ಮೊಬೈಲ್ ಬಳಸಬೇಡ ಎಂದು ಬಾಲಕಿಗೆ ಆಕೆಯ ಪೋಷಕರು ಎಚ್ಚರಿಕೆ ನೀಡಿದ್ಧಾರೆ.
ತನ್ನ ಮೊಬೈಲ್ ಕಸಿದುಕೊಂಡಿದ್ದಕ್ಕೆ ಸಿಟ್ಟಿಗೆದ್ದಿದ ಬಾಲಕಿ ಪೋಷಕರು ಸೇವಿಸುವ ಆಹಾರಕ್ಕೆ ವಿಷ ಬೆರೆಸಿದ್ದಾಳೆ. ಸಕ್ಕರೆ ಡಬ್ಬದಲ್ಲಿ ಕೀಟನಾಶಕ ಔಷಧಿಯ ವಾಸನೆ ಬಂದಿದೆ. ಕೂಡಲ್ಲೇ ಅದನ್ನು ಪರಿಶೀಲಿಸಿದಾಗ ವಿಷ ಬೆರಸಿರುವ ವಿಚಾರ ಬೆಳಕಿಗೆ ಬಂದಿದೆ. ಬಾಲಕಿಯನ್ನು ಆಕೆಯ ಪೋಷಕರು ಹಿಡಿದು ವಿಚಾರಿಸಿದಾಗ ತಪ್ಪೊಪ್ಪಿಕೊಂಡಿದ್ದಾಳೆ.
ಕೂಡಲ್ಲೇ ಅವರು ಅಭಯಂ ಹೆಲ್ಪ್ಲೈನ್ಗೆ ಕರೆ ಮಾಡಿ ಮಾಹಿತಿ ನೀಡಿದ್ಧಾರೆ. ಬಾಲಕಿಯನ್ನು ವಶಕ್ಕೆ ಪಡೆಯಲಾಗಿದ್ದು, ಆಪ್ತ ಸಮಾಲೋಚನೆಯ ನಂತರ ಆಕೆಯ ಚಲನವಲನಗಳನ್ನು ಗಮನಿಸಿ ಮನೆಗೆ ವಾಪಸ್ ಕಳಿಸಲಾಗುವುದು ಎಂದು ಅಭಯಂ ಹೆಲ್ಪ್ಲೈನ್ ಸದಸ್ಯೆ ಫಾಲ್ಗುಣಿ ಪಟೇಲ್ ತಿಳಿಸಿದ್ಧಾರೆ.