More

    ಕಾಲೇಜಿಗೆ ಭೇಟಿ ನೀಡಲಿದ್ದಾರೆ ನಟಿ ತಮನ್ನಾ ಭಾಟಿಯಾ; ಕಾರಣವೇನು? ಇಲ್ಲಿದೆ ಮಾಹಿತಿ

    ಆಂಧ್ರಪ್ರದೇಶ: ಸೂಪರ್‌ಸ್ಟಾರ್ ರಜನಿಕಾಂತ್ ನಟನೆಯ ಬಹುನಿರೀಕ್ಷಿತ ‘ಜೈಲರ್’ ಚಿತ್ರದ ಬಿಡುಗಡೆಗೆ ಕ್ಷಣಗಣನೆ ಆರಂಭಗೊಂಡಿದ್ದು, ಈ ಮಧ್ಯೆ ಚಿತ್ರದಲ್ಲಿ ತಲೈವಾ ಜತೆಯಲ್ಲಿ ಅಭಿನಯಿಸಿರುವ ನಟಿ ತಮನ್ನಾ ಇದೀಗ ಹೈದರಾಬಾದ್‌ ಕಾಲೇಜಿಗೆ ಭೇಟಿ ನೀಡಲಿದ್ದಾರೆ.

    ಇದನ್ನೂ ಓದಿ: ರೈತರ ಪ್ರಗತಿಗೆ ವಿಎಸ್ಸೆಸ್ಸೆನ್ ಕೊಡುಗೆ ಅಪಾರ

    ಜುಲೈ 26, 2023 ರಂದು ಹೈದರಾಬಾದ್‌ನ ಸಿಎಂಆರ್ ಕಾಲೇಜಿಗೆ ಆಗಮಿಸಲಿದ್ದಾರೆ. ಇದಕ್ಕೆ ಕಾರಣ ಜೈಲರ್ ಚಿತ್ರದ ಹಿಟ್​​ ಹಾಡು ‘ಕಾವಾಲಯ್ಯ’ ತಮಿಳಿನಲ್ಲಿ ರಿಲೀಸ್​ ಆಗಿ ಭಾರೀ ವೈರಲ್ ಆಗಿತ್ತು. ಇದೀಗ ಅದರ ತೆಲುಗು ಆವೃತ್ತಿಯನ್ನು ಬಿಡುಗಡೆಗೊಳಿಸಲು ಭೇಟಿ ನೀಡಲಿದ್ದಾರೆ ಎಂದು ಹೇಳಲಾಗಿದೆ. ಅನಿರುದ್ಧ್ ರವಿಚಂದರ್ ಅವರ ಸಂಗೀತ ಸಂಯೋಜನೆಯಲ್ಲಿ ಈ ಹಾಡಿಗೆ ‘ಕಾವಾಲಿ’ ಎಂದು ಹೆಸರಿಡಲಾಗಿದೆ.

    ‘ಜೈಲರ್’ ಚಿತ್ರ ಇದೇ ಆಗಸ್ಟ್ 10, 2023 ರಂದು ದೇಶಾದ್ಯಂತ ಭರ್ಜರಿ ಓಪನಿಂಗ್ ಪಡೆಯಲು ಸಜ್ಜಾಗಿದೆ. ಚಿತ್ರದ ರಿಲೀಸ್​ಗಾಗಿ ರಜನಿಕಾಂತ್ ಅಭಿಮಾನಿಗಳು ತೀವ್ರ ಕುತೂಹಲದಿಂದ ಕಾಯುತ್ತಿದ್ದಾರೆ. ಈ ಸಿನಿಮಾವನ್ನು ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶಿಸಿದ್ದು, ಕಲಾನಿತಿ ಮಾರನ್ ನಿರ್ಮಾಣ ಮಾಡಿದ್ದಾರೆ,(ಏಜೆನ್ಸೀಸ್).

    ಸರ್ಕಾರಿ ಬಸ್‌ ಮೇಲೆ ನಿಂತು ಪುಂಡಾಟ ಮೆರೆದ ನಾಲ್ವರು ಕಾಲೇಜು ವಿದ್ಯಾರ್ಥಿಗಳು; ಪೊಲೀಸರು ವಿಧಿಸಿದ ಶಿಕ್ಷೆಯೇನು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts