ಥಿಯೇಟರ್‌ನಲ್ಲಿ ಸಿನಿಮಾ ವೀಕ್ಷಿಸುತ್ತಿದ್ದ ಜನರ ಮಧ್ಯೆ ಇದ್ದಕ್ಕಿದ್ದಂತೆ ಆಗಮಿಸಿದ ನಟಿ; ಫ್ಯಾನ್ಸ್ ರಿಯಾಕ್ಷನ್ ಹೇಗಿತ್ತು ನೋಡಿ …

krithi new
Published on

ಮುಂಬೈ: ಶಾಹಿದ್ ಕಪೂರ್ ಮತ್ತು ಕೃತಿ ಸನೋನ್ ಅಭಿನಯದ 'ತೇರಿ ಬಾಟನ್ ಮೇ ಐಸಾ ಉಲ್ಜಾ ಜಿಯಾ' ಚಿತ್ರ ಇತ್ತೀಚಿನ ದಿನಗಳಲ್ಲಿ ಥಿಯೇಟರ್‌ಗಳಲ್ಲಿ ಸಖತ್ ಸದ್ದು ಮಾಡುತ್ತಿದೆ. ವ್ಯಾಲೆಂಟೈನ್ಸ್ ವೀಕ್‌ನಲ್ಲಿ ಬಿಡುಗಡೆಯಾದ ಈ ಚಿತ್ರವು ವಾರಾಂತ್ಯದಲ್ಲಿ ಹೆಚ್ಚು ಗಳಿಕೆ ಮಾಡಿದೆ. ಪ್ರೇಕ್ಷಕರು ಚಿತ್ರದ ಬಗ್ಗೆ ಸಾಕಷ್ಟು ಉತ್ಸುಕರಾಗಿದ್ದು, ಹಲವು ವರ್ಷಗಳ ನಂತರ ಶಾಹಿದ್ 'ಲವರ್ ಬಾಯ್' ಪಾತ್ರದಲ್ಲಿ ನಟಿಸಿದ್ದಾರೆ.

ಈ ಚಿತ್ರದಲ್ಲಿ ಕೃತಿ ಸನೊನ್ ಅವರ ಅವತಾರವನ್ನು ಅಭಿಮಾನಿಗಳು ಬಹಳ ಇಷ್ಟಪಡುತ್ತಿದ್ದಾರೆ. ಅಂದಹಾಗೆ ಅಭಿಮಾನಿಗಳಿಂದ ಸಿಗುತ್ತಿರುವ ಈ ಪ್ರೀತಿಯನ್ನು ನೋಡಲು ಸ್ವತಃ ನಟಿಯೇ ಥಿಯೇಟರ್​​​ಗೆ ಹೋಗಿದ್ದಾರೆ. ಹೌದು. ಭಾನುವಾರ ರಾತ್ರಿ ಮುಂಬೈನ ಥಿಯೇಟರ್‌ಗೆ ದಿಢೀರ್ ಭೇಟಿ ನೀಡಿದ್ದಾರೆ ಕೃತಿ. ಸದ್ಯ ಈ ವಿಡಿಯೋವನ್ನು ಸ್ವತಃ ನಟಿಯೇ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಕೃತಿ ಸನೊನ್ ಥಿಯೇಟರ್ ಪ್ರವೇಶಿಸಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಅವರನ್ನು ನೋಡಿದ ತಕ್ಷಣ ಅಭಿಮಾನಿಗಳು ಖುಷಿಯಿಂದ ಕುಣಿದಾಡಿದ್ದಾರೆ. ವಿಡಿಯೋವನ್ನು ಹಂಚಿಕೊಳ್ಳುವಾಗ ನಟಿ ಅದನ್ನು "ಪ್ರೇಕ್ಷಕರ ಪ್ರೀತಿ, ಅವರ ನಗು, ಅವರು ಆನಂದಿಸುವುದನ್ನು ಮತ್ತು ಚಪ್ಪಾಳೆ ತಟ್ಟುವುದನ್ನು ನೋಡಿ" ಎಂದು ಶೀರ್ಷಿಕೆ ನೀಡಿದ್ದು, ನೀವು ಚಿತ್ರವನ್ನು ಇಷ್ಟಪಟ್ಟಿದ್ದಕ್ಕಾಗಿ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

ಈ ಸಮಯದಲ್ಲಿ ಕೃತಿ ತನ್ನ ಅಭಿಮಾನಿಗಳೊಂದಿಗೆ ಸಾಕಷ್ಟು ತಮಾಷೆ ಮಾಡುತ್ತಾ ಮೋಜು ಮಾಡಿದರು. ಜೊತೆಗೆ ನಟಿಗೆ ಪ್ರೇಕ್ಷಕರು ಪ್ರಶ್ನೆಗಳನ್ನೂ ಕೇಳಿದರು. ಈ ಚಿತ್ರ ನಿಮಗೆ ಹೇಗೆ ಇಷ್ಟವಾಯಿತು?, ಈ ಚಿತ್ರದ ಎರಡನೇ ಭಾಗವನ್ನು ಮಾಡಬೇಕೇ ಎಂದು ಕೃತಿ ಕೇಳಿದರು. ಈ ಬಗ್ಗೆ ಪ್ರೇಕ್ಷಕರು, ಹೌದು ಖಂಡಿತ ಮಾಡಲೇಬೇಕು ಎಂದು ಹೇಳುತ್ತಿರುವುದು ಕಂಡುಬಂತು.

ಈ ಚಿತ್ರದ ತಾರಾಬಳಗದ ಕುರಿತು ಹೇಳುವುದಾದರೆ 'ತೇರಿ ಬಾಟನ್ ಮೇ ಐಸಾ ಉಲ್ಜಾ ಜಿಯಾ' ಚಿತ್ರವನ್ನು ಅಮಿತ್ ಜೋಶಿ ಮತ್ತು ಆರಾಧನಾ ಸಾಹ್ ನಿರ್ದೇಶಿಸಿದ್ದಾರೆ. ಅವರೇ ಈ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಕೃತಿ ಮತ್ತು ಶಾಹಿದ್ ಕಪೂರ್ ಜೊತೆಗೆ ಧರ್ಮೇಂದ್ರ ಮತ್ತು ಡಿಂಪಲ್ ಕಪಾಡಿಯಾ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರ ಇದುವರೆಗೆ ನಾಲ್ಕು ದಿನಗಳಲ್ಲಿ ಬಾಕ್ಸ್ ಆಫೀಸ್ ನಲ್ಲಿ ಸುಮಾರು 30 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net