

ಮೊದಲ ಚಿತ್ರದಲ್ಲಿ, ಹೆಣ್ಣು ಮಗುವಿನ ಕೆನ್ನೆಗೆ ಪ್ರೀತಿಯಿಂದ ಮುತ್ತಿಡುತ್ತಿರುವುದನ್ನು ಕಾಣಬಹುದು. ಎರಡನೇ ಫೋಟೋದಲ್ಲಿ, ಅವರಿಬ್ಬರ ನಗು ಹಾಗೂ ಸಂತೋಷವನ್ನು ಕಾಣಬಹುದಾಗಿದೆ. ಈ ಫೋಟೋಗಳನ್ನು ನೋಡಿದ ಪ್ರೇಕ್ಷಕರು ಯಾರ ದೃಷ್ಟಿ ತಾಕದಿರಲಿ ಅಂತ ಕಮೆಂಟ್ ಮಾಡುತ್ತಿದ್ದಾರೆ.
Sreeleela| ನಟಿ ಶ್ರೀಲೀಲಾ ಹೆಣ್ಣು ಮಗುವನ್ನು ಮುದ್ದಾಡುತ್ತಿರುವ ಎರಡು ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇನ್ನೂ ಮಗುವಿನ ಬಗ್ಗೆ ಅವರು ಹೆಚ್ಚಾಗಿ ಬಹಿರಂಗಪಡಿಸಲಿಲ್ಲ. ಆದರೆ ಪುಟ್ಟ ಮಗು ತನ್ನ ಮನೆಗೆ ಹೊಸ ಸದಸ್ಯರಂತೆ ಸೇರ್ಪಡೆಯಾಗಿದೆ ಎಂದು ಬರೆದುಕೊಂಡಿದ್ದಾರೆ.
ಇನ್ನೂ ಈ ಬಗ್ಗೆ ನಟಿ ಶ್ರೀಲೀಲಾ ಮನೆಯಲ್ಲಿ ಹೊಸ ಸದಸ್ಯೆ, ನಮ್ಮ ಹೃದಯಗಳನ್ನು ಸೆರೆಹಿಡಿಯುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಇವರು ಮಗುವನ್ನು ಎಷ್ಟೊಂದು ಪ್ರೀತಿಸುತ್ತಾರೆಂದು ಈ ಫೋಟೋ ನೋಡಿದ ಫ್ಯಾನ್ಸ್ ಕಮೆಂಟ್ ಮಾಡುತ್ತಿದ್ದಾರೆ. ಇದರಿಂದ ಶ್ರೀಲೀಲಾ ಮೂರನೇ ಹೆಣ್ಣು ಮಗುವನ್ನು ದತ್ತು ಪಡೆದಿದ್ದಾರೆಯೇ ಎಂಬ ಊಹಾಪೋಹವೂ ಇದೆ. 2022 ರಲ್ಲಿ ತಮ್ಮ 21 ನೇ ವಯಸ್ಸಿನಲ್ಲಿ, ಅವರು ಅನಾಥಾಶ್ರಮದಿಂದ ಇಬ್ಬರು ಮಕ್ಕಳನ್ನು ದತ್ತು ಪಡೆದಿದ್ದರು.
(ಏಜೆನ್ಸೀಸ್)
ಶ್ರೀಲೀಲಾ ಚಲನಚಿತ್ರ ವೃತ್ತಿಜೀವನದಲ್ಲಿ ಸಖತ್ ಖುಷ್ ಆಗಿದ್ದಾರೆ. ಅವರು ತಮ್ಮ ಸಿನಿಮಾ ವೃತ್ತಿಜೀವನವನ್ನು 'ಕಿಸ್' ಚಿತ್ರದ ಮೂಲಕ ಪ್ರಾರಂಭಿಸಿದರು ಮತ್ತು ಕನ್ನಡ ಮತ್ತು ತೆಲುಗು ಚಿತ್ರೋದ್ಯಮಗಳಲ್ಲಿ ವಿಭಿನ್ನ ಪಾತ್ರಗಳೊಂದಿಗೆ ಖ್ಯಾತಿಯನ್ನು ಪಡೆದರು. ಶ್ರೀಲೀಲಾ ಇತ್ತೀಚೆಗೆ ತನ್ನ ಎಂಬಿಬಿಎಸ್ ಪೂರ್ಣಗೊಳಿಸಿ ಈಗ ತಮ್ಮ ನಟನಾ ವೃತ್ತಿಜೀವನದತ್ತ ಗಮನ ಹರಿಸಿದ್ದಾರೆ. ಜುಲೈನಲ್ಲಿ ಬಿಡುಗಡೆಯಾಗಲಿರುವ ರವಿತೇಜ ಅವರ "ಮಾಸ್ ಜತಾರ" ಚಿತ್ರದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ಅವರು ಕಾರ್ತಿಕ್ ಆರ್ಯನ್ ಅವರೊಂದಿಗೆ ಬಾಲಿವುಡ್‌ಗೆ ಪಾದಾರ್ಪಣೆ ಮಾಡುವ ಕೆಲಸದಲ್ಲಿದ್ದಾರೆ. ಈ ಎರಡು ಚಿತ್ರಗಳ ಜೊತೆಗೆ, ಅವರು ಇತ್ತೀಚೆಗೆ ಅಖಿಲ್ ಅಕ್ಕಿನೇನಿ ಅವರ "ಲೆನಿನ್" ಚಿತ್ರಕ್ಕೆ ಸಹಿ ಹಾಕಿದ್ದಾರೆ.