ನಟಿ ಸಂಜನಾ ಈಗ ಹಿಂದುವಲ್ಲ ಮುಸ್ಲಿಂ!? ಹೊಸ ಹೆಸರು ಬಹಿರಂಗಪಡಿಸಿದ ಪ್ರಶಾಂತ್​ ಸಂಬರಗಿ

Prashanth - Sanjana - Final
Published on

ಬೆಂಗಳೂರು: ಡ್ರಗ್ಸ್​ ಮಾಫಿಯಾ ಪ್ರಕರಣದ ಆರೋಪಿ ಆಗಿರುವ ನಟಿ ಸಂಜನಾ ಗಲ್ರಾಣಿ ಅವಿವಾಹಿತೆಯಾ-ವಿವಾಹಿತೆಯಾ ಎಂಬ ಬಗ್ಗೆ ಕೆಲವು ದಿನಗಳ ಹಿಂದೆ ಚರ್ಚೆ ಆಗಿತ್ತು. ಇದೀಗ ಅವರು ಹಿಂದುನಾ ಅಥವಾ ಮುಸ್ಲಿಮಾ ಎಂಬುದು ಕೂಡ ಚರ್ಚಾಸ್ಪದವಾಗಿದೆ.

ಇಂಥದ್ದೊಂದು ಚರ್ಚೆ ಉಂಟಾಗಲು ಕಾರಣವಾಗಿರುವುದು ಒನ್ಸ್​ ಅಗೇನ್​ ಪ್ರಶಾಂತ್​ ಸಂಬರಗಿ. ಡ್ರಗ್ಸ್​ ಮಾಫಿಯಾ ಪ್ರಕರಣ ಸಂಬಂಧ ಸಂಜನಾ ಕುರಿತು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಈಗಾಗಲೇ ಹಲವು ಆರೋಪಗಳನ್ನು ಮಾಡಿದ್ದಾರೆ. ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿರುವ ಅವರು ಸಂಜನಾ ಧರ್ಮದ ಬಗ್ಗೆಯೇ ತಕರಾರು ಎತ್ತಿದ್ದಾರೆ.

ಸಂಜನಾ ಲವ್ ಜಿಹಾದ್​ಗೆ ಒಳಗಾಗಿದ್ದು, 2018ರಲ್ಲೇ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಮಾತ್ರವಲ್ಲ, ಮಾಹಿರಾ ಎಂದು ಹೆಸರನ್ನೂ ಬದಲಾಯಿಸಿಕೊಂಡಿದ್ದಾರೆ ಎಂಬುದಾಗಿ ಪ್ರಶಾಂತ್ ಸಂಬರಗಿ ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದಾರೆ.

ಸಂಜನಾ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ದಾಖಲೆ ಕೂಡ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದ್ದು, ಅದರ ಪ್ರತಿಯೂ ಇಲ್ಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net