ಮತ್ತೊಮ್ಮೆ ಡೀಪ್ ಫೇಕ್​ಗೆ ಬಲಿಯಾದ್ರು ರಶ್ಮಿಕಾ ಮಂದಣ್ಣ; ವಿಡಿಯೋ ನೋಡಿ..

rashmika mandanna
Published on

ಬೆಂಗಳೂರು: ಡೀಪ್ ಫೇಕ್ ಕಾಟ ಯಾರನ್ನು ಬಿಡುತ್ತಿಲ್ಲ.  ಈ ಹಿಂದೆ  ರಶ್ಮಿಕಾ ಮಂದಣ್ಣ ಅವರದ್ದೇ ಎನ್ನಲಾದ ಡೀಪ್ ಫೇಕ್ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್​​ ಆಗಿದ್ದು, ಗೊತ್ತೆ ಇದೆ ಈ ಬೆನ್ನಲ್ಲೇ ಇದೀಗ ರಶ್ಮಿಕಾ ಮಂದಣ್ಣ  ಅವರ ಮತ್ತೊಂದು ಡೀಪ್​ಫೇಕ್ ವಿಡಿಯೋ ವೈರಲ್ ಆಗಿದೆ.

ಯುವತಿಯೊಬ್ಬರು ಸಣ್ಣ ಬಟ್ಟೆ ಧರಿಸಿ ಲಿಫ್ಟ್ ಏರುತ್ತಿರುವ ವಿಡಿಯೋ ವೈರಲ್ ಆಗಿತ್ತು. ಇದಕ್ಕೆ ರಶ್ಮಿಕಾ ಮಂದಣ್ಣ ಮುಖವನ್ನು ಅಂಟಿಸಲಾಯಿತು. ಅನೇಕರು ಇದು ರಶ್ಮಿಕಾ ಎಂದೇ ಭಾವಿಸಿದ್ದರು. ನಂತ್ರ ಈ ಕುರಿತಾಗಿ ಕೆಲವು ನಟಿ-ನಟಿಯರು ಧ್ವನಿ ಎತ್ತಿದ್ದರು.  ಈಗ ರಶ್ಮಿಕಾ ಅವರ ಹೊಸ ಡೀಪ್​ಫೇಕ್ ವಿಡಿಯೋ ವೈರಲ್ ಆಗಿದೆ.

ಯುವತಿಯೊಬ್ಬರು ಡ್ಯಾನ್ಸ್ ಮಾಡುತ್ತಿದ್ದಾರೆ. ಇದಕ್ಕೆ ರಶ್ಮಿಕಾ ಮುಖ ಹಾಕಲಾಗಿದೆ. ಈ ವಿಡಿಯೋಗೆ ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ. ‘ರಶ್ಮಿಕಾ ಮಂದಣ್ಣ ಅವರ ಡೀಪ್​ಫೇಕ್ ವಿಡಿಯೋ ಮಾಡಬೇಡಿ’ ಎಂದು ಅವರ ಫ್ಯಾನ್ಸ್ ಕೋರಿಕೊಂಡಿದ್ದಾರೆ. ಕೆಲವರು ಪೊಲೀಸರ ಬಳಿ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಡೀಪ್ ಫೇಕ್ ವಿಡಿಯೋ ಕುರಿತಾಗಿ ಕೂಡಲೇ ಕ್ರಮಕ್ಕಾಗಿ ಹಲವರು ಒತ್ತಾಯಿಸಿದ್ದಾರೆ. ಮೊನ್ನೆಯಷ್ಟೇ ಕರ್ನಾಟಕ ಸರಕಾರ ಕೂಡ ಈ ಕುರಿತಂತೆ ಗಂಭೀರ ಕಾನೂನು ಕ್ರಮವನ್ನು ತೆಗೆದುಕೊಳ್ಳಲು ಮುಂದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net