More

    ರಮ್ಯಾ, ರಚಿತಾರಾಮ್​ಗೆ ಬೆಣ್ಣೆದೋಸೆಯ ಆಸೆ!; ‘ಹೆಡ್​ಬುಷ್’ ಪ್ರಿ-ರಿಲೀಸ್ ಕಾರ್ಯಕ್ರಮದಲ್ಲಿ ನಟಿಯರ ದರ್ಬಾರ್

    ರಮ್ಯಾ ಚಿತ್ರರಂಗಕ್ಕೆ ಬಂದು 20 ವರ್ಷ. ಹಾಗೆಯೇ ರಚಿತಾ ರಾಮ್ ಚಂದನವನಕ್ಕೆ ಪದಾರ್ಪಣೆ ಮಾಡಿ 10 ವರ್ಷ. ಒಬ್ಬರು ‘ಸ್ಯಾಂಡಲ್​ವುಡ್ ಕ್ವೀನ್’ ಎನಿಸಿಕೊಂಡಿದ್ದರೆ ಮತ್ತೊಬ್ಬರು ‘ಡಿಂಪಲ್ ಕ್ವೀನ್’. ಹೀರೋಗಳಂತೆಯೇ ಈ ಇಬ್ಬರು ನಟಿಯರಿಗೂ ಅಭಿಮಾನಿಗಳಿದ್ದಾರೆ, ಸ್ಟಾರ್​ಡಮ್ ಇದೆ. ಆದರೆ, ಇದುವರೆಗು ರಮ್ಯಾ ಮತ್ತು ರಚಿತಾ ಒಂದೇ ಚಿತ್ರದಲ್ಲಿ ನಟಿಸಿಲ್ಲ, ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿರಲಿಲ್ಲ. ಈಗ ಅವರಿಬ್ಬರನ್ನೂ ಒಂದೇ ವೇದಿಕೆಗೆ ಕರೆತಂದ ಹೆಗ್ಗಳಿಕೆ ‘ಹೆಡ್ ಬುಷ್’ ಚಿತ್ರತಂಡಕ್ಕೆ ಸಲ್ಲುತ್ತದೆ. ಹೌದು, ದಾವಣಗೆರೆಯಲ್ಲಿ ನಡೆದ ಚಿತ್ರದ ಅದ್ಧೂರಿ ಪ್ರಿ- ರಿಲೀಸ್ ಕಾರ್ಯಕ್ರಮದಲ್ಲಿ ಇಬ್ಬರು ‘ಕ್ವೀನ್’ಗಳೂ ಒಂದಾಗಿದ್ದಾರೆ.

    ನೃತ್ಯ ಕಲಾವಿದರ ಜತೆ ವೇದಿಕೆ ಮೇಲೆ ಸ್ಟೆಪ್ಸ್ ಹಾಕಿದ ಬಳಿಕ ಮಾತಿಗಿಳಿದ ರಚಿತಾ ರಾಮ್ ‘ಬೆಣ್ಣೆಯಂತ ಮನಸ್ಸಿರುವ ದಾವಣಗೆರೆಗೆ ಬಂದು ತುಂಬ ಖುಷಿಯಾಗುತ್ತಿದೆ. ಧನಂಜಯ್ ಅವರಿಗೆ ಥ್ಯಾಂಕ್ಸ್ ಇಲ್ಲಿ ಕಾರ್ಯಕ್ರಮ ಮಾಡಿರೋದಕ್ಕೆ. ಎಲ್ಲರನ್ನೂ ನೇರವಾಗಿ ಭೇಟಿಯಾಗೋಕೆ ಆಗವುದಿಲ್ಲ. ಈ ರೀತಿಯಾದರೂ ನಿಮ್ಮನ್ನೆಲ್ಲ ಭೇಟಿಯಾಗೋ ಅವಕಾಶ ಸಿಕ್ಕಿತು. ಹತ್ತು ವರ್ಷ ಈ ಪ್ರೀತಿ ಕೊಟ್ಟಿರುವುದಕ್ಕೆ ಕರ್ನಾಟಕದ ಎಲ್ಲ ಜನರಿಗೂ ಥ್ಯಾಂಕ್ಸ್. ನನಗೆ ‘ಹೆಡ್ ಬುಷ್’ ಚಿತ್ರದ ಟ್ರೇಲರ್ ತುಂಬ ಇಷ್ಟವಾಯಿತು. ಚಿತ್ರತಂಡಕ್ಕೆ ಶುಭವಾಗಲಿ. ಇಲ್ಲಿಗೆ ಬಂದ ತಕ್ಷಣ ನಾಲ್ಕು ಬೆಣ್ಣೆ ದೋಸೆ ತಿಂದೆ’ ಎಂದು ನಕ್ಕರು.

    ಬಳಿಕ ವೇದಿಕೆಗೆ ಬಂದು, ‘ಹೇಗಿದೀರಾ, ಚೆನ್ನಾಗಿದೀರಾ? ಊಟ ಆಯ್ತಾ?’ ಎಂದು ಮಾತು ಪ್ರಾರಂಭಿಸಿದ ರಮ್ಯಾ, ‘ಧನು ನನಗೆ ಒಳ್ಳೆಯ ಗೆಳೆಯ. ಡಯಟ್​ನಲ್ಲಿದ್ದೀನಿ. ಆದರೂ ಇಷ್ಟು ದೂರ ಬಂದು ಬೆಣ್ಣೆ ದೋಸೆ ತಿನ್ನದಿದ್ದರೆ ಹೇಗೆ? ಬೆಣ್ಣೆ ದೋಸೆ ತಿಂದುಕೊಂಡೇ ಹೋಗುತ್ತೇನೆ’ ಎಂದರು.

    ಶೂನ್ಯ ನಿರ್ದೇಶನದ ‘ಹೆಡ್ ಬುಷ್’ ಚಿತ್ರದಲ್ಲಿ ಧನಂಜಯ, ಯೋಗಿ, ಪಾಯಲ್ ರಜಪುತ್, ರಘು ಮುಖರ್ಜಿ, ಶ್ರುತಿ ಹರಿಹರನ್, ದೇವರಾಜ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಚರಣ್ ರಾಜ್ ಸಂಗೀತ ನೀಡಿದ್ದಾರೆ. ಸೋಮಣ್ಣ ಟಾಕೀಸ್ ಮತ್ತು ಡಾಲಿ ಪಿಚ್ಚರ್ಸ್ ಜಂಟಿಯಾಗಿ ನಿರ್ವಿುಸಿರುವ ಚಿತ್ರ ಇದೇ ಶುಕ್ರವಾರ ಅ.21ರಂದು ಬಿಡುಗಡೆಯಾಗಲಿದೆ.

    ಕಾಲಿಗೆ ಬಿದ್ದು ಕೇಳ್ತೀನಿ, ಇದೊಂದು ಸಲ ದಯವಿಟ್ಟು ಕ್ಷಮಿಸಿ!; ಅಪ್ಪು ಅಭಿಮಾನಿಗಳ ಅಬ್ಬರಕ್ಕೆ ತತ್ತರಿಸಿದ ಕಿಡಿಗೇಡಿ

    ಪ್ರೆಗ್ನೆನ್ಸಿ ಡಯೆಟ್ ಬಗ್ಗೆ ಗೊಂದಲ ಬೇಡ: ಇಲ್ಲಿದೆ ನೋಡಿ ಪೋಷಕಾಂಶಭರಿತ ಆಹಾರ-ಪದಾರ್ಥಗಳ ಪಟ್ಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts