More

    ಒಂದೇ ವೇದಿಕೆಯಲ್ಲಿ ರಮ್ಯಾ-ರಚಿತಾ; ಹೆಡ್ ಬುಷ್ ಪ್ರಿ-ರಿಲೀಸ್​ನಲ್ಲಿ ಸ್ಟಾರ್ ನಟಿಯರು

    ಬೆಂಗಳೂರು: ಡಾಲಿ ಧನಂಜಯ ನಾಯಕನಾಗಿರುವ ಚಿತ್ರ ‘ಹೆಡ್ ಬುಷ್’. 80, 90ರ ದಶಕದ ಬೆಂಗಳೂರಿನ ಡಾನ್ ಜೈರಾಜ್ ಜೀವನಾಧಾರಿತ ಕಥೆಯಾದ ಕಾರಣ ಚಿತ್ರದ ಬಗ್ಗೆ ಮೊದಲಿಂದಲೂ ಕುತೂಹಲವಿದೆ. ಶೂನ್ಯ ಚೊಚ್ಚಲ ಬಾರಿಗೆ ಆಕ್ಷನ್-ಕಟ್ ಹೇಳಿರುವ ‘ಹೆಡ್ ಬುಷ್’ ಪ್ರಿ-ರಿಲೀಸ್ ಕಾರ್ಯಕ್ರಮ ಇದೇ ಭಾನುವಾರ ದಾವಣಗೆರೆಯಲ್ಲಿ ನಡೆಯಲಿದೆ. ವಿಶೇಷ ಅಂದರೆ ಈ ಅದ್ಧೂರಿ ಕಾರ್ಯಕ್ರಮದಲ್ಲಿ ಇದೇ ಮೊದಲ ಬಾರಿಗೆ ನಟಿಯರಾದ ರಮ್ಯಾ ಮತ್ತು ರಚಿತಾ ವೇದಿಕೆ ಹಂಚಿಕೊಳ್ಳಲಿದ್ದಾರೆ.

    ಕನ್ನಡ ಚಿತ್ರಗಳ ಬೆಂಬಲಕ್ಕೆ ರಮ್ಯಾ ನಿಂತಿರುವುದು ಇದೇ ಮೊದಲೇನಲ್ಲ. ರಾಜಕೀಯದಲ್ಲಿ ಬಿಜಿಯಾದ ಕಾರಣ ಕೆಲವು ವರ್ಷಗಳ ಕಾಲ ಸಿನಿಮಾಗಳ ಕುರಿತು ಮೌನವಹಿಸಿದ್ದರೂ, ಕೆಲ ತಿಂಗಳಿಂದೀಚೆಗೆ ಹಲವು ಸಿನಿಮಾಗಳಿಗೆ ಪ್ರೋತ್ಸಾಹಿಸಿದ್ದಾರೆ. ‘ಹೊಯ್ಸಳ’ ಚಿತ್ರದ ಶೂಟಿಂಗ್ ಸ್ಪಾಟ್​ಗೂ ರಮ್ಯಾ ಭೇಟಿ ನೀಡಿದ್ದರು. ‘ಆರ್ಕೆಸ್ಟ್ರಾ ಮೈಸೂರು’, ‘ಉತ್ತರಕಾಂಡ’ ಚಿತ್ರಗಳ ಪೋಸ್ಟರ್ ಬಿಡುಗಡೆ ಮಾಡಿ ಧನಂಜಯ ಮತ್ತು ತಂಡಕ್ಕೆ ಶುಭಹಾರೈಸಿದ್ದರು. ‘ಕೆಜಿಎಫ್’, ‘777 ಚಾರ್ಲಿ’ ಸೇರಿದಂತೆ ಹಲವು ಚಿತ್ರಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದರು.

    ಇನ್ನು, ಇತ್ತೀಚೆಗಷ್ಟೇ ‘ಕಾಂತಾರ’ ಚಿತ್ರತಂಡದ ಜೊತೆಗೆ ಸಿನಿಮಾ ವೀಕ್ಷಿಸಿದರು ರಮ್ಯಾ. ಈಗ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಮೂಲಕ ಮತ್ತೆ ಚಿತ್ರರಂಗದಲ್ಲಿ ತೊಡಗಿಕೊಂಡಿರುವ ಅವರು, ‘ಹೆಡ್ ಬುಷ್’ ಚಿತ್ರದ ಪ್ರಿ-ರಿಲೀಸ್ ಕಾರ್ಯಕ್ರಮಲ್ಲಿ ಭಾಗವಹಿಸುತ್ತಿದ್ದಾರೆ. ಇನ್ನು ‘ಮಾನ್ಸೂನ್ ರಾಗ’ ಚಿತ್ರದಲ್ಲಿ ಧನಂಜಯಗೆ ಜೋಡಿಯಾಗಿ ನಟಿಸಿದ್ದ ರಚಿತಾ ರಾಮ್ ಕೂಡ ರಮ್ಯಾಗೆ ಜೊತೆಯಾಗಲಿದ್ದಾರೆ. ಈ ಸ್ಟಾರ್ ನಟಿಯರನ್ನು ಒಂದೇ ವೇದಿಕೆಯಲ್ಲಿ ನೋಡಲು ಅಭಿಮಾನಿಗಳು ಉತ್ಸುಕರಾಗಿದ್ದಾರೆ.

    ‘ಹೆಡ್ ಬುಷ್’ನಲ್ಲಿ ಧನಂಜಯ, ಯೋಗಿ, ರವಿಚಂದ್ರನ್, ವಸಿಷ್ಠ ಸಿಂಹ, ಪಾಯಲ್ ರಜಪುತ್, ರಘು ಮುಖರ್ಜಿ, ಬಾಲು ನಾಗೇಂದ್ರ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಡಾಲಿ ಪಿಕ್ಚರ್ಸ್ ಹಾಗೂ ರಾಮ್ಕೋ ಸೋಮಣ್ಣ ಬ್ಯಾನರ್​ನಲ್ಲಿ ಧನಂಜಯ್ ಮತ್ತು ರಾಮ್ಕೋ ಸೋಮಣ್ಣ ನಿರ್ವಿುಸಿದ್ದಾರೆ. ಚರಣ್ ರಾಜ್ ಸಂಗೀತ ನೀಡಿರುವ ಈ ಚಿತ್ರವು, ಇದೇ ತಿಂಗಳ 21ರಂದು ಚಿತ್ರ ಬಿಡುಗಡೆಯಾಗಲಿದೆ.

    ‘ಕಾಂತಾರ’ ಮತ್ತೊಂದು ದಾಖಲೆ; ಉತ್ತರಭಾರತದಲ್ಲಿ ಈ ಸಾಧನೆ ಮಾಡಿದ ಮೊದಲ ಕನ್ನಡ ಚಿತ್ರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts