More

  ‘ಅನ್ನಪೂರಣಿ’ಯಲ್ಲಿ ಡೂಪ್ ಇಲ್ಲದೆ ಅಡುಗೆ ಮಾಡಿದ ಲೇಡಿ ಸೂಪರ್‌ಸ್ಟಾರ್‌ ನಯನತಾರಾ

  ಚೆನ್ನೈ: ಚಿತ್ರರಂಗದಲ್ಲಿ ಮುಂಚೂಣಿಯಲ್ಲಿರುವ ನಟಿ ನಯನತಾರಾ ತಮ್ಮ 75ನೇ ಚಿತ್ರ ‘ಅನ್ನಪೂರಣಿ-ದಿ ಗಾಡೆಸ್ ಆಫ್ ಪುಡ್‌’ನಲ್ಲಿ ನಟಿಸಿದ್ದಾರೆ. ಝೀ ಸ್ಟುಡಿಯೋಸ್, ನ್ಯಾಟ್ ಸ್ಟುಡಿಯೋಸ್ ಮತ್ತು ಟ್ರೈಡೆಂಟ್ ಆರ್ಟ್ಸ್ ನಿರ್ಮಾಣದ ಈ ಚಿತ್ರವನ್ನು ನೀಲೇಶ್ ಕೃಷ್ಣ ನಿರ್ದೇಶಿಸಿದ್ದಾರೆ. ಚಿತ್ರವು ಡಿಸೆಂಬರ್ 1 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.

  ಈ ಚಿತ್ರದಲ್ಲಿ ನಯನತಾರಾ ಬಾಣಸಿಗರಾಗಿ ಕಾಣಿಸಿಕೊಂಡಿದ್ದಾರೆ. ಏತನ್ಮಧ್ಯೆ ನೈಜತೆಗಾಗಿ ಚಿತ್ರದಲ್ಲಿನ ಅಡುಗೆ ದೃಶ್ಯಗಳ ಸಮಯದಲ್ಲಿ, ಚಿತ್ರತಂಡವು ಸೆಟ್​​ನಲ್ಲಿ ನಿಜವಾದ ಬಾಣಸಿಗನನ್ನು ಕರೆತಂದಿದೆ. ಅಷ್ಟೇ ಅಲ್ಲ, ಚಿತ್ರಕ್ಕಾಗಿ ನಯನತಾರಾ ಬಾಣಸಿಗರ ಗುಣಲಕ್ಷಣಗಳಾದ ವ್ಯಾನ್ ಕ್ಲಿಪ್ಪಿಂಗ್ ಮತ್ತು ಟಾಸ್ ಮಾಡುವಂತಹ ಅನೇಕ ತಂತ್ರಗಳನ್ನು ಕಲಿತಿದ್ದಾರೆ.

  ಅಲ್ಲದೆ ಚಿತ್ರದಲ್ಲಿ ಒಂದೇ ಒಂದು ಸಿಂಗಲ್​​​ ಚೀಟಿಂಗ್​​​​​​​ ಶಾಟ್ ಇಲ್ಲ ಎಂದು ಚಿತ್ರತಂಡ ಖಚಿತಪಡಿಸಿದ್ದು, ನಯನತಾರಾ ಯಾವುದೇ ಡ್ಯೂಪ್ ಇಲ್ಲದೆ ನಟಿಸಿದ್ದಾರೆ. ಅಲ್ಲದೆ ಕೆಲವು ದಿನಗಳಲ್ಲಿ ಹತ್ತು ಗಂಟೆಗೆ ಮುಗಿಯಬೇಕಿದ್ದ ಶೂಟಿಂಗ್ ಕೂಡ ಮಧ್ಯರಾತ್ರಿ 12 ಗಂಟೆವರೆಗೂ ವಿಸ್ತರಣೆಯಾಗಿತ್ತು. ಈ ಸಮಯದಲ್ಲಿ, ಅವರ ವೈಯಕ್ತಿಕ ಕೆಲಸದಿಂದಾಗಿ ಮರುದಿನ ಚಿತ್ರೀಕರಣವನ್ನು ಮುಂದುವರಿಸಬಹುದು ಎಂದು ಚಿತ್ರತಂಡ ಹೇಳಿದ್ದರೂ, ನಯನತಾರಾ ಬೆಳಗ್ಗೆ 5 ಗಂಟೆಯವರೆಗೆ ಸೆಟ್‌ನಲ್ಲಿಯೇ ಇದ್ದರು ಎಂದು ಚಿತ್ರತಂಡವು ಹೆಮ್ಮೆಯಿಂದ ಹೇಳಿಕೊಂಡಿದೆ.

  ಚಿತ್ರದಲ್ಲಿ ಜೈ, ಸತ್ಯರಾಜ್, ಕೆ.ಎಸ್.ರವಿಕುಮಾರ್, ರೆಡಿನ್ ಕಿಂಗ್ಲಿ, ಅಚ್ಯುತ್ ಕುಮಾರ್, ಕುಮಾರಿ ಸಂಜು, ರೇಣುಕಾ, ಕಾರ್ತಿಕ್ ಕುಮಾರ್, ಸುರೇಶ್ ಚಕ್ರವರ್ತಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಸತ್ಯನ್ ಸೂರ್ಯನ್ ಛಾಯಾಗ್ರಹಣ ಮತ್ತು ಧಮನ್ ಸಂಗೀತ ಸಂಯೋಜಿಸಿದ್ದಾರೆ.

  ಪ್ರಧಾನಿ ಮೋದಿಯವರ ಈ ಕನಸು ನನಸಾಗಲು ಭಾರತೀಯರ ಚಿನ್ನದ ವ್ಯಾಮೋಹ ಅಡ್ಡಿಯಾಗಿದೆಯೇ?

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts