ಲೀಕ್ ಆಯ್ತು 'ಗೂಗ್ಲಿ' ನಟಿಯ ಮದುವೆ ಆಮಂತ್ರಣ ಪತ್ರಿಕೆ! ಸ್ಥಳ ಎಲ್ಲಿ? ಎಂದ ಫ್ಯಾನ್ಸ್​

WhatsApp Image 2024-03-12 at 7.32.31 AM
Published on

ಮುಂಬೈ: ರಾಕಿಂಗ್ ಸ್ಟಾರ್​ ಯಶ್​ ನಟನೆಯ ಸೂಪರ್ ಹಿಟ್ ಸಿನಿಮಾ ಗೂಗ್ಲಿ ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ ನಟಿ ಕೃತಿ ಕರಬಂದ ಇದೀಗ ತಮ್ಮ ಬಹುಕಾಲದ ಗೆಳೆಯನೊಂದಿಗೆ ಹಸೆಮಣೆ ಏರಲು ಸಜ್ಜಾಗಿದ್ದು, ಕುಟುಂಬಸ್ಥರು ಮತ್ತು ಅತ್ಯಾಪ್ತರ ನಡುವೆ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ಅವರ ವಿವಾಹ ಆಮಂತ್ರಣ ಪತ್ರಿಕೆ ಲೀಕ್ ಆದ ಬೆನ್ನಲ್ಲೇ ಬಹಿರಂಗವಾಗಿದೆ.

ಕನ್ನಡ, ಹಿಂದಿ ಸಿನಿಮಾಗಳಲ್ಲಿ ನಟಿಸಿರುವ ಕೃತಿ ಕರಬಂದ ತಮ್ಮ ಗೆಳೆಯ ಪುಲ್ಕಿತ್ ಸಾಮ್ರಾಟ್ ಅವರೊಂದಿಗೆ ಸಪ್ತಪದಿ ತುಳಿಯಲು ನಿರ್ಧರಿಸಿದ್ದು, ದೆಹಲಿಯ ಮನೇಸರ್‌ನಲ್ಲಿ ಇದೇ ಮಾರ್ಚ್​​ 13ರಂದು ಮದುವೆಯಾಗಲಿದ್ದಾರೆ ಎಂಬ ಮಾಹಿತಿ ಇದೀಗ ಲೀಕ್ ಆದ ವಿವಾಹದ ಇನ್ವಿಟೆಷನ್ ಕಾರ್ಡ್​ ಮೂಲಕ ತಿಳಿದುಬಂದಿದೆ. ಕೇವಲ ಕುಟುಂಬಸ್ಥರು, ಸ್ನೇಹಿತರು ಮತ್ತು ಆತ್ಯಾಪ್ತರ ಸಮ್ಮುಖದಲ್ಲಿ ಮದುವೆಯಾಗಲು ಈ ಜೋಡಿ ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಒಂದೆರಡು ವರ್ಷಗಳಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದ ಕೃತಿ ಕರ್ಬಂದ ಮತ್ತು ಪುಲ್ಕಿತ್ ಸಾಮ್ರಾಟ್ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡುವ ಮುಖೇನ ವದಂತಿಗಳಿಗೆ ತೆರೆ ಎಳೆದಿದ್ದಾರೆ. ಕೃತಿ ಮತ್ತು ಪುಲ್ಕಿತ್ 'ವೀರೇ ಕಿ ವೆಡ್ಡಿಂಗ್', 'ತೈಶ್' ಮತ್ತು 'ಪಾಗಲ್ಪಂತಿ' ಸೇರಿದಂತೆ ಹಲವು ಚಿತ್ರಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ,(ಏಜೆನ್ಸೀಸ್). 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net