More

    ಪ್ರಿಯಕರನ ಜೊತೆ ಹಸೆಮಣೆ ಏರಲು ಸಜ್ಜಾದ’ಗೂಗ್ಲಿ’ನಟಿ: ಮದುವೆ ಯಾವಾಗ ಗೊತ್ತೇ? ಇಲ್ಲಿದೆ ಮಾಹಿತಿ..

    ಮುಂಬೈ: ಬಾಲಿವುಡ್ ಲವ್‌ಬರ್ಡ್ಸ್ ಪುಲ್ಕಿತ್ ಸಾಮ್ರಾಟ್-ಕೃತಿ ಕರಬಂಧ ಮಾರ್ಚ್ 13 ರಂದು ಮದುವೆಯಾಗಲಿದ್ದಾರೆ, ಮದುವೆಯ ಆಹ್ವಾನ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ. ನೆಟ್ಟಿಗರು ಇದನ್ನು ನೋಡಿ ಶಾಕ್‌ ಆಗಿದ್ದಾರೆ.

    ತಿಳಗಳ ಹಿಂದೆ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಕೃತಿ ಈಗ ಹಸೆಮಣೆ ಏರಲು ಸಜ್ಜಾಗಿದ್ದಾಳೆ. ಹಲವು ವರ್ಷಗಳಿಂದ ರಿಲೇಷನ್​ಶಿಪ್​ನಲ್ಲಿ ಇರುವ ಪ್ರಿಯಕರ ಪುಲ್ಕಿತ್​ಸಾಮ್ರಾಟ್​ ಜೊತೆ ದಾಂಪತ್ಯ

    ಇದನ್ನೂ ಓದಿ: ಇಶಾನ್​, ಶ್ರೇಯಸ್​ ವಿವಾದ ಬೆನ್ನಲ್ಲೇ, ರಣಜಿ ಕುರಿತು ಸಚಿನ್​ ಮಾಡಿದ ಪೋಸ್ಟ್​ ವೈರಲ್​..

    ಮೂಲತಃ ದೆಹಲಿಯ ಬೆಡಗಿ ಕೃತಿ ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸಿ ಫೇಮಸ್​ಆಗಿದ್ದಾರೆ. ಕನ್ನಡದಲ್ಲಿ ಯಶ್​ ಜೊತೆ ನಟಿಸಿದ ‘ಗೂಗ್ಲಿ’ ಸಿನಿಮಾದಿಂದ ಕೃತಿಗೆ ಯಶಸ್ಸು ಸಿಕ್ಕಿತು. ಸದ್ಯಕ್ಕೆ ಬಾಲಿವುಡ್​ನಲ್ಲೇ ಬ್ಯುಸಿಯಾಗಿರುವ ಆಕೆ ಪ್ರಿಯಕರನ ಜೊತೆ ಮಾರ್ಚ್​13ರಂದು ಮದುವೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಈ ಬಗ್ಗೆ ಕೃತಿ ಅಥವಾ ಪುಲ್ಕಿತ್​ ಇನ್ನಷ್ಟೇ ಅಧಿಕೃತವಾಗಿ ಹೇಳಿಕೆ ನೀಡಬೇಕಿದೆ.

    ಹಲವು ವರ್ಷಗಳಿಂದ ಕೃತಿ ಮತ್ತು ಪುಲ್ಕಿತ್​ ಪರಸ್ಪರ ಪ್ರೀತಿಸುತ್ತಿದ್ದಾರೆ. ಅವರಿಬ್ಬರು ಜೊತೆಯಾಗಿ ಇರುವ ಅನೇಕ ಫೋಟೋಗಳು ವೈರಲ್​ಆಗಿವೆ. ತಮ್ಮ ಪ್ರೀತಿಯನ್ನು ಅವರು ಮುಚ್ಚಿಟ್ಟಿಲ್ಲ. ಈ ಸಂಬಂಧವನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಲು ಅವರು ನಿರ್ಧರಿಸಿದ್ದಾರೆ. ಹೀಗಾಗಿ ವಿವಾಹ ಬಂಧನಕ್ಕೆ ಒಳಗಾಗುತ್ತಿದ್ದಾರೆ. ಎಂದು ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.

    ಕೃತಿ ಕರಬಂಧ ಇನ್​ಸ್ಟಾಗ್ರಾಮ್​ ಪೋಸ್ಟ್​: ಇತ್ತೀಚೆಗೆ ವ್ಯಾಲೆಂಟೈನ್ಸ್​ ಡೇ ದಿನ ಕೃತಿ, ಪುಲ್ಕಿಟ್​ಜೊತೆ ಇರುವ ಫೋಟೋ ಹಂಚಿಕೊಂಡು, ‘ಲೆಟಸ್​ ಮಾರ್ಚ್​ ಟುಗೆದರ್​, ಹ್ಯಾಂಡ್​ ಇನ್​ ಹ್ಯಾಡ್​’ ಎಂದು ಕ್ಯಾಪ್ಷನ್​ ನೀಡಿದ್ದರು. ಅವರು ಬೇಕಂತಲೇ ಮಾರ್ಚ್​ ಎಂಬ ಪದವನ್ನು ಬಳಸಿದ್ದರು ಎಂದು ಫ್ಯಾನ್ಸ್ ಊಹಿಸಿದ್ದಾರೆ. ಈಗಾಗಲೇ ಮದುವೆಗೆ ಸಕಲ ತಯಾರಿ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ ಮದುವೆ ನಡೆಯುವ ಸ್ಥಳದ ಬಗ್ಗೆ ಮಾಹಿತಿ ಸಿಗುವುದು ಬಾಕಿ ಇದೆ. ಇತ್ತೀಚೆಗೆ ಅವರ ಎಂಗೇಜ್​ಮೆಂಟ್​ ನಡೆದಿದೆ.

    ಕನ್ನಡದ ಅನೇಕ ಕಲಾವಿದರು ಮತ್ತು ತಂತ್ರಜ್ಞರ ಜೊತೆ ಕೃತಿ ಕರಬಂಧ ಕೆಲಸ ಮಾಡಿದ್ದಾರೆ. ‘ಚಿರು’, ‘ಪ್ರೇಮ್​ ಅಡ್ಡ’, ‘ಗಲಾಟೆ’, ‘ತಿರುಪತಿ ಎಕ್ಸ್​ಪ್ರೆಸ್​’, ‘ಸೂಪರ್​ ರಂಗ’, ‘ಬೆಳ್ಳಿ’, ‘ಮಿಂಚಾಗಿ ನೀನು ಬರಲು’, ‘ಮಾಸ್ತಿಗುಡಿ’, ‘ದಳಪತಿ’ ಸಿನಿಮಾಗಳಲ್ಲಿ ನಟಿಸುವ ಮೂಲಕ ಕನ್ನಡದ ಪ್ರೇಕ್ಷಕರನ್ನು ಅವರು ರಂಜಿಸಿದ್ದಾರೆ. ಸ್ಯಾಂಡಲ್​ವುಡ್​ನ ಯಾವೆಲ್ಲ ಸೆಲೆಬ್ರಿಟಿಗಳಿಗೆ ಕೃತಿ ಕರಬಂಧ ಅವರ ಮದುವೆಯ ಆಹ್ವಾನ ಸಿಗಲಿದೆ ಎಂಬುದನ್ನು ಕಾದು ನೋಡಬೇಕು. ‘ಗೂಗ್ಲಿ’ ಸಿನಿಮಾದಲ್ಲಿ ಅವರ ಜೊತೆ ತೆರೆಹಂಚಿಕೊಂಡ ‘ರಾಕಿಂಗ್​ ಸ್ಟಾರ್​’ ಯಶ್​ ಅವರು ಈ ಮದುವೆಗೆ ಹಾಜರಿ ಹಾಕಲಿದ್ದಾರಾ ಎಂಬ ಕೌತುಕ ಅಭಿಮಾನಿಗಳಿಗೆ ಇದೆ.

    ನಟಿ ಟಬು ಜೊತೆ ಸಂಬಂಧ: ನಿಜವಾಗಿ ನಡೆದಿದ್ದೇನು? ಬಹಿರಂಗಪಡಿಸಿದ ನಾಗಾರ್ಜುನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts