More

    ಕಿಯಾರಾ ಗೆಲುವಿನ ವೈಯ್ಯಾರ; ಸಿದ್ಧಾರ್ಥ್ ಬಗ್ಗೆ ಬೇಡ, ಸಕ್ಸಸ್ ಬಗ್ಗೆ ಮಾತು..

    ಬಾಲಿವುಡ್ ಸುಂದರಿ ಕಿಯಾರಾ ಅಡ್ವಾನಿ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಇತ್ತೀಚೆಗೆ ಕಿಯಾರಾ ನಟಿಸಿರುವ ಎರಡು ಚಿತ್ರಗಳು ಸಕ್ಸಸ್ ಕಂಡಿವೆ. ಒಂದೆಡೆ ಅವರು ಕಾರ್ತಿಕ್ ಆರ್ಯನ್ ಜತೆ ನಟಿಸಿರುವ ‘ಭೂಲ್ ಬುಲಯ್ಯಾ 2’ ಬರೋಬ್ಬರಿ 175 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿಕೊಂಡಿದ್ದರೆ, ಮತ್ತೊಂದೆಡೆ ಕಳೆದ ವಾರವಷ್ಟೇ ತೆರೆಗೆ ಬಂದ ‘ಜುಗ ಜುಗ್ ಜೀಯೊ’ ಒಂದೇ ವಾರದಲ್ಲಿ 57 ಕೋಟಿ ರೂಪಾಯಿ ಗಳಿಕೆ ಮಾಡಿದೆ.

    ಹೀಗೆ ಬ್ಯಾಕ್ ಟು ಬ್ಯಾಕ್ ಯಶಸ್ಸಿನ ಖುಷಿಯಲ್ಲಿರುವ ಕಿಯಾರಾ, ಕೇವಲ ಸಿನಿಮಾಗಳಿಂದ ಮಾತ್ರವಲ್ಲ ತಮ್ಮ ಖಾಸಗಿ ಬದುಕಿನಲ್ಲೂ ಸಾಕಷ್ಟು ಸದ್ದು ಮಾಡುತ್ತಿದ್ದಾರೆ. ಹೌದು, ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ ಹಾಗೂ ಕಿಯಾರಾ ಅಡ್ವಾನಿ ನಡುವಿನ ಪ್ರೀತಿ- ಪ್ರೇಮದ ವಿಷಯ ಸದ್ಯ ಟಾಕ್ ಆಫ್ ದ ಟೌನ್ ಆಗಿದೆ. ಮೊದಲು ಅವರಿಬ್ಬರೂ ಜತೆಯಾಗಿ ಸಾಕಷ್ಟು ಬಾರಿ ಕಾಣಿಸಿಕೊಂಡಿದ್ದು ಸುದ್ದಿಯಾಯಿತು. ಆ ನಂತರ ಇಬ್ಬರೂ ದೂರಾಗಿದ್ದಾರೆ ಎಂಬ ಗುಸುಗುಸು ಹಬ್ಬಿತು. ಕೊನೆಗೆ, ಇಬ್ಬರೂ ಕಹಿಘಟನೆಗಳನ್ನು ಮರೆತು ಮತ್ತೊಮ್ಮೆ ಒಟ್ಟಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಇದ್ಯಾವುದರ ಬಗ್ಗೆಯೂ ಇಬ್ಬರೂ ಮಾತನಾಡಿಲ್ಲ ಎಂಬುದು ವಿಶೇಷ.

    ಈ ಬಗ್ಗೆ ಮೌನ ಮುರಿದಿರುವ ಕಿಯಾರಾ, ‘ಇದರ ಬಗ್ಗೆ ನಾನು ಮಾತನಾಡಲು ಇಷ್ಟಪಡುವುದಿಲ್ಲ. ನಾನೇನೂ ಮಾತನಾಡದೆ ಇದ್ದರೂ ಏನೇನೋ ವಿಷಯಗಳು ಹರಿದಾಡುತ್ತಿವೆ. ಇನ್ನು ಮಾತನಾಡಿಬಿಟ್ಟರೆ ಏನಾಗುತ್ತೋ ಗೊತ್ತಿಲ್ಲ. ಆದರೆ, ಈ ವಿಷಯದ ಬಗ್ಗೆ ಮಾತನಾಡಬೇಕು ಅಂತನ್ನಿಸಿದಾಗ ಖಂಡಿತವಾಗಿಯೂ ಮಾತನಾಡುತ್ತೇನೆ. ಸದ್ಯ ವೃತ್ತಿಜೀವನ ಹಾಗೂ ಖಾಸಗಿ ಬದುಕು ಎರಡರಲ್ಲೂ ಖುಷಿಯಾಗಿದ್ದೇನೆ’ ಎಂದಿದ್ದಾರೆ. ಕಿಯಾರಾ ಸದ್ಯ ಬಾಲಿವುಡ್​ನಲ್ಲಿ ‘ಗೋವಿಂದ ನಾಮ್ ಮೇರಾ’ ಹಾಗೂ ತೆಲುಗಿನಲ್ಲಿ ರಾಮ್ರಣ್ ತೇಜಾ ನಾಯಕನಾಗಿರುವ, ಶಂಕರ್ ನಿರ್ದೇಶಿಸುತ್ತಿರುವ ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ. –ಏಜೆನ್ಸೀಸ್

    ‘ನಮಸ್ಕಾರ ದೇವರು’ ಅಂತ ಹೇಳೋದ್ಯಾಕೆ ಡಾಕ್ಟರ್​ ಬ್ರೋ?; ಹಣ ಬೇಕಾದಾಗ ಯಾವ ಹೋಟೆಲ್​ಗೆ ಹೋಗ್ತಾರೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts