ಬಾಯ್ಕಾಟ್ ಬಗ್ಗೆ ನಟಿ ಕರೀನಾ ಕಪೂರ್ ಮಾತು..

Kareena Kapoor - Final
Published on

ಸಾಮಾಜಿಕ ಜಾಲತಾಣದಲ್ಲಿ ಬಾಯ್ಕಾಟ್ ಬಾಲಿವುಡ್ ಟ್ರೆಂಡ್ ಮತ್ತೆ ಸದ್ದು ಮಾಡುತ್ತಿದೆ. ಅದಕ್ಕೆ ಕಾರಣ ಶಾರುಖ್ ಖಾನ್, ದೀಪಿಕಾ ಪಡುಕೋಣೆ ಅಭಿನಯದ ‘ಪಠಾಣ್’ ಚಿತ್ರ. ಕಳೆದ ವರ್ಷ ಬಾಯ್ಕಾಟ್ ಬೇಗೆಯಲ್ಲಿ ಬೆಂದ ಬಾಲಿವುಡ್ ಚಿತ್ರಗಳಲ್ಲಿ ಆಮಿರ್ ಖಾನ್, ಕರೀನಾ ಕಪೂರ್ ನಟಿಸಿದ್ದ ‘ಲಾಲ್ ಸಿಂಗ್ ಛಡ್ಡಾ’ ಪ್ರಮುಖವಾದುದು.

ನಿಮಗಿಷ್ಟವಿಲ್ಲದಿದ್ದರೆ ನಮ್ಮ ಸಿನಿಮಾ ನೋಡಬೇಡಿ ಎಂದು ಕಡ್ಡಿ ತುಂಡಾದಂತೆ ಮಾತನಾಡಿದ್ದ ಕರೀನಾ, ಆ ಚಿತ್ರದ ಸಮಯದಲ್ಲಿ, ‘ದಯವಿಟ್ಟು ನಮ್ಮ ಸಿನಿಮಾ ನೋಡಿ’ ಎಂದು ಅಂಗಲಾಚಿದ್ದರು. ಆದರೆ, ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಮಕಾಡೆ ಮಲಗಿತ್ತು. ಇದೀಗ ಬಾಯ್ಕಾಟ್ ಟ್ರೆಂಡ್ ಮತ್ತೆ ಸದ್ದು ಮಾಡುತ್ತಿರುವ ಹಿನ್ನೆಲೆಯಲ್ಲಿ ಕರೀನಾ ಮತ್ತೊಮ್ಮೆ ಮಾತನಾಡಿದ್ದಾರೆ.

‘ಬಾಯ್ಕಾಟ್ ಮಾಡುವುದನ್ನು ನಾನು ಒಪ್ಪುವುದಿಲ್ಲ. ಪ್ರತಿ ಬಾರಿ ಹೀಗಾಗುತ್ತಿದ್ದರೆ ನಿಮ್ಮನ್ನು ನಾವು ಮನರಂಜಿಸುವುದಾದರೂ ಹೇಗೆ? ನೀವು ನಿಮ್ಮ ಜೀವನದಲ್ಲಿ ಖುಷಿ ಹೇಗೆ ಪಡೆಯುತ್ತೀರಿ? ಎಲ್ಲರಿಗೂ ಮನರಂಜನೆಯ ಖುಷಿ ಬೇಕು. ಸಿನಿಮಾ ಇಲ್ಲದಿದ್ದರೆ ಮನರಂಜನೆ ಹೇಗೆ ಸಿಗುತ್ತೆ?’ ಎಂದು ಹೇಳಿಕೊಂಡಿದ್ದಾರೆ. ಆ ಮೂಲಕ ಬಾಯ್ಕಾಟ್ ಬಾಲಿವುಡ್ ಟ್ರೆಂಡ್ ಬಗ್ಗೆ ತಮ್ಮದೇ ರೀತಿಯಲ್ಲಿ ಅಸಮಾಧಾನ ಹೊರಹಾಕಿದ್ದಾರೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net