ಖ್ಯಾತಯ ಹಿರಿಯ ನಟಿ ಕಮಲಶ್ರೀ ನಿಧ‌ನ..actress kamalashree

kamalashree
Published on

ಬೆಂಗಳೂರು: ಖ್ಯಾತ ಹಿರಿಯ ನಟಿ ಕಮಲಶ್ರೀ ( actress kamalashree ) ನಿಧ‌ನ ಹೊಂದಿದ್ದಾರೆ.  ಸ್ತನ ಕ್ಯಾನ್ಸರ್​​ನಿಂದ ಬಳಲುತ್ತಿದ್ದ ಕಮಲಶ್ರೀ ಅವರು ಇಂದು ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಸ್ತನ ಕ್ಯಾನ್ಸರ್​​ನಿಂದ ಬಳಲುತ್ತಿದ್ದರು. ಅವರಿಗೆ ವಯಸ್ಸು 70 ವರ್ಷ ಮೇಲ್ಪಟ್ಟಿತ್ತು.  ಕಮಲಶ್ರೀ ಅವರು ಇಂದು ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅನಾರೋಗ್ಯದ ಬಳಿಕ ಧಾರಾವಾಹಿಗಳಲ್ಲಿ ನಟಿಸಲು ಅವರಿಂದ ಸಾಧ್ಯವಾಗಿಲ್ಲ.

ಗಟ್ಟಿಮೇಳ ಸೇರಿದಂತೆ ಹಲವಾರು ಹಿಟ್‌ ಸೀರಿಯಲ್​ಗಳಲ್ಲಿ ಕಮಲಶ್ರೀ ಅವರು ಅಭಿನಯ ಮಾಡಿದ್ದರು. ನಾಡಿನಾದ್ಯಂತ ಸಾಕಷ್ಟು ಮೆಚ್ಚುಗೆ ಪಡೆದಿದ್ದರು. ಸೀರಿಯಲ್​ಗಳಲ್ಲಿ ಬಹುತೇಕ ಅಜ್ಜಿ ಪಾತ್ರಗಳಲ್ಲಿ ಕಮಲಶ್ರೀ ಅವರು ಕಾಣಿಸಿಕೊಳ್ಳುತ್ತಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net