More

    ಆ ಹೀರೋಗಳ ಜತೆ ರೊಮ್ಯಾನ್ಸ್ ಕಂಫರ್ಟಬಲ್ ಅಲ್ಲ.. ‘ಸೂರ್ಯವಂಶ’ ನಟಿ ಇಶಾ ಕೊಪ್ಪಿಕರ್ ಶಾಕಿಂಗ್ ಕಾಮೆಂಟ್ಸ್..

    ಮುಂಬೈ: ವೃತ್ತಿಬದುಕಿನ ಆರಂಭದಲ್ಲಿ ಸಾಲು ಸಾಲು ಆಫರ್​​ಗಳನ್ನು ಪಡೆದಿದ್ದ ಇಶಾ ಕೊಪ್ಪಿಕರ್ ಬಳಿಕ ಸಿನಿಮಾಗಳಿಂದ ದೂರ ಉಳಿದಿದ್ದರು. ಬಹಳ ದಿನಗಳಿಂದ ಮೌನವಾಗಿದ್ದ ಇಶಾ ಇತ್ತೀಚೆಗಷ್ಟೇ ಸಿದ್ಧಾರ್ಥ್ ಕಣ್ಣನ್​ಗೆ ಸಂದರ್ಶನ ನೀಡಿದ್ದರು. ಇದರಲ್ಲಿ ಅವರು ತಮ್ಮ ವೃತ್ತಿಜೀವನದಲ್ಲಿ ಎದುರಿಸಿದ ಸನ್ನಿವೇಶಗಳು ಮತ್ತು ಚಲನಚಿತ್ರಗಳ ಮೇಲಿನ ಆಸಕ್ತಿಯ ಬಗ್ಗೆ ಮಾತನಾಡಿದ್ದಾರೆ.

    ಇಂಡಸ್ಟ್ರಿಯಲ್ಲಿ ಸೀನಿಯರ್ ಹೀರೋಗಳ ಜತೆ ರೊಮ್ಯಾನ್ಸ್ ಮಾಡಿದರೆ ಕಂಫರ್ಟಬಲ್ ಆಗುತ್ತೆ ಅಂತಾರೆ.. ನಿಜವಾಗ್ಲೂ ಕಂಫರ್ಟಬಲ್ ಆಗೋದಿಲ್ಲ ಎಂದು ನಟಿ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಈ ಸುದ್ದಿ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗಿದೆ.

    ನಿಮಗಿಂತ 30 ಅಥವಾ 40 ವರ್ಷ ವಯಸ್ಸಿನ ಜನರೊಂದಿಗೆ ಕೆಲಸ ಮಾಡುವುದು ತುಂಬಾ ಅಹಿತಕರವಾಗಿರುತ್ತದೆ. ಹಳೇ ಸ್ಟಾರ್ ಹೀರೋಗಳ ಜತೆ ಕೆಲಸ ಮಾಡುವಾಗ ಅವರ ಜತೆ ರೊಮ್ಯಾನ್ಸ್ ಸೀನ್ ಮಾಡುವಾಗ ಅದು ನನಗೆ ಇಷ್ಟ ಆಗಲ್ಲ. ಆರಾಮದಾಯಕ ಅನಿಸುವುದಿಲ್ಲ. ಅವರನ್ನು ಅಪ್ಪಿಕೊಳ್ಳುವುದು ಅಪ್ಪನನ್ನು ಮುಟ್ಟಿದಂತೆ ಭಾಸವಾಗುತ್ತದೆ. ಸಂಗಾತಿ ಎನ್ನಿಸುವುದಿಲ್ಲ ಎಂದು ಬೋಲ್ಡ್​​ ಆಗಿ ನಟಿ ಮಾತನಾಡಿದ್ದಾರೆ.

    ಚಿತ್ರರಂಗಕ್ಕೆ ಹೊಸಬಳಾಗಿದ್ದಾಗ ನನಗೂ ಹಾಗೆಯೇ ಅನಿಸಿತ್ತು. ನಟನೆಯ ಸಮಯದಲ್ಲಿ ನಾವು ನಟನೆಯತ್ತ ಮಾತ್ರ ಗಮನ ಹರಿಸುತ್ತೇವೆ. ನಂತರ ಅವರು ನಮಗಿಂತ ದೊಡ್ಡವರು ಎಂಬ ಅಂಶವನ್ನು ಬದಲಾಯಿಸುತ್ತೇವೆ. ಕೆಲವು ಹೀರೋಗಳು ತಮ್ಮ ವಯಸ್ಸನ್ನು ತೋರಿಸಿಕೊಳ್ಳದೆ ಫಿಟ್ನೆಸ್ ಕಾಯ್ದುಕೊಳ್ಳುತ್ತಾರೆ. ಆದರೆ ಕೆಲವರ ನಡತೆ ಮತ್ತು ಹಿರಿಯರ ವರ್ತನೆ ಅವರ ವಯಸ್ಸನ್ನು ಸ್ಪಷ್ಟಪಡಿಸುತ್ತದೆ. 35 ವರ್ಷ ದಾಟಿದ ನಂತರ ಪ್ರತಿಯೊಬ್ಬ ನಾಯಕಿಯೂ ತಾಯಿ ತಂದೆಯಂತೆ ಕಾಣುತ್ತಾರೆ. ಆದರೆ ನಾಯಕ ಇನ್ನೂ ತನಗಿಂತ 25 ವರ್ಷ ಕಿರಿಯ ನಟಿಯ ಜೊತೆ ನಟಿಸುತ್ತಿದ್ದಾನೆ. ಅವರು ಹೇಗಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಿ. ಮುಂದಿನ ದಿನಗಳಲ್ಲಿ ಇದು ಬದಲಾಗಲಿದೆ ಎಂದು ಭಾವಿಸುತ್ತೇವೆ. ಏಕೆಂದರೆ ಪ್ರೇಕ್ಷಕರು ಮೂರ್ಖರಲ್ಲ ಕೊಪ್ಪಿಕರ್ ನೇರವಾಗಿಹೇಳಿದ್ದಾರೆ.

    See also  "ಸೂರ್ಯವಂಶ" ನಟಿಯಿಂದ ನಾನು ದೂರವಾಗಿದ್ದೇನೆ: ಇಶಾ ಕೊಪ್ಪಿಕರ್ ಮಾಜಿ ಪತಿ

    ಇಶಾ ಕೊಪ್ಪಿಕರ್ ಕನ್ನಡ ತೆಲುಗು, ತಮಿಳು, ಹಿಂದಿ ಮತ್ತು ಮರಾಠಿ ಭಾಷೆಗಳಲ್ಲಿ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ಮದುವೆಯ ನಂತರ ಇಶಾ ಕೊಪ್ಪಿಕರ್ ಸಿನಿಮಾದಿಂದ ಸಂಪೂರ್ಣವಾಗಿ ದೂರ ಉಳಿದಿದ್ದರು. 2009ರಲ್ಲಿ ಮದುವೆಯಾಗಿ ಸಿನಿಮಾ ರಂಗದಿಂದ ದೂರ ಉಳಿದಿದ್ದ ಇಶಾ ಕೊಪ್ಪಿಕರ್​ ತೆಲುಗು ನಟ ನಿಖಿಲ್​ ಅಭಿನಯದ ಕೇಶವ ಸಿನಿಮಾ ಮೂಲಕ ಮತ್ತೆ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟರು. ಸದ್ಯ ಸಿನಿಮಾಗಳಲ್ಲಿ ಸಕ್ರಿಯರಾಗಿದ್ದಾರೆ. ಅಲ್ಲದೆ, ಸಾಮಾಜಿಕ ಜಾಲತಾಣದಲ್ಲೂ ಸಕ್ರಿಯರಾಗಿದ್ದು, ಆಗಾಗ ಬೋಲ್ಡ್​ ಫೋಟೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.

    ಇಶಾ ಕೊಪ್ಪಿಕರ್​ ಕನ್ನಡಗಿರಿಗೇನು ಗೊತ್ತಿರದ ಮುಖವಲ್ಲ. ಸೂರ್ಯವಂಶ ಹಾಗೂ ಓ ನನ್ನ ನಲ್ಲೆ ಚಿತ್ರದಲ್ಲಿ ತಮ್ಮ ಅದ್ಭುತ ನಟನೆಯ ಮೂಲಕ ಕನ್ನಡಿಗರ ಮನಸ್ಸಲ್ಲಿ ಗಟ್ಟಿಯಾಗಿ ಉಳಿದುಕೊಂಡಿದ್ದಾರೆ. 90ರ ದಶಕದಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಸೃಷ್ಟಿಸಿದ ನಟಿಯಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts