

ಬೆಂಗಳೂರು: ಲಾಕ್ಡೌನ್ ಹಿನ್ನೆಲೆಯಲ್ಲಿ ಮನೆಯಲ್ಲಿರುವ ಮಹಿಳೆಯರು ಒಂದಿಲ್ಲೊಂದು ಚಾಲೆಂಜ್ ಹಾಕಿಕೊಳ್ಳುತ್ತ ಟೈಪಾಸ್ ಮಾಡುತ್ತಿದ್ದಾರೆ. ಅದರಲ್ಲೂ ಸೀರೆ ಚಾಲೆಂಜ್, ಬಗೆಬಗೆ ಅಡುಗೆ ಚಾಲೆಂಜ್ ಸ್ವೀಕರಿಸಿ ಅದನ್ನು ಮತ್ತೊಬ್ಬರಿಗೆ ವರ್ಗಾಯಿಸುತ್ತಿದ್ದಾರೆ. ಇದೀಗ ನಟಿ ಹರ್ಷಿಕಾ ಪೂಣಚ್ಚ ಹೊಸದೊಂದು ಚಾಲೆಂಜ್ ಎಸೆದಿದ್ದಾರೆ. ಅದುವೇ ಫ್ಯಾಮಿಲಿ ಫೋಟೋ ಚಾಲೆಂಜ್.
ಹೌದು, ಅಮ್ಮ ಮತ್ತು ಸಾಕುನಾಯಿಗಳೊಂದಿಗಿನ ಫೋಟೋವನ್ನು ಶೇರ್ ಮಾಡಿಕೊಂಡಿರುವ ಹರ್ಷಿಕಾ, ಇದೇ ನನ್ನ ಮುದ್ದಾದ ಕುಟುಂಬ ಎಂದು ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲ ಫ್ಯಾಮಿಲಿ ಬಗ್ಗೆಯೂ ಹೇಳಿಕೊಂಡಿದ್ದಾರೆ. ‘ಈ ಹೊತ್ತಿನಲ್ಲಿ ಅವಶ್ಯವಾಗಿ ಸ್ವೀಕರಿಸಬೇಕಾದ ಚಾಲೆಂಜ್ ಅಂದರೆ ಅದು ಫ್ಯಾಮಿಲಿ ಫೋಟೋ ಚಾಲೆಂಜ್. ಕುಟುಂಬದೊಟ್ಟಿಗೆ ಫೋಟೋ ತೆಗೆದುಕೊಂಡಿರುವುದೇ ಇಲ್ಲ. ಹಾಗಾಗಿ ಒಟ್ಟಾಗಿ ಒಂದು ಫೋಟೋ ಫ್ರೇಮ್ಗೆ ಪೋಸ್ ಕೊಡಿ. ಬಳಿಕ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ, ನಿಮ್ಮ ಸ್ನೇಹಿತರನ್ನೂ ಆಹ್ವಾನಿಸಿ’ ಎಂದಿದ್ದಾರೆ ಹರ್ಷಿಕಾ.