ಗುಡ್ ನ್ಯೂಸ್ ಕೊಟ್ಟ ಭುವನ್, ಹರ್ಷಿಕಾ ಪೂಣಚ್ಚ ದಂಪತಿ; ತಾಯಿಯಾಗ್ತಿದ್ದಾರೆ ಕೊಡಗಿನ ಕುವರಿ..

harshika
Published on

ಬೆಂಗಳೂರು: ಸ್ಯಾಂಡಲ್​ವುಡ್​​ನ ಕ್ಯೂಟ್ ಕಪಲ್​​ ಭುವನ್, ಹರ್ಷಿಕಾ ಪೂಣಚ್ಚ  ಜೋಡಿ ಮೊದಲ ಮಗುವಿನ ನೀರಿಕ್ಷೆಯಲ್ಲಿದ್ದಾರೆ.  ಕೊಡಗಿನ ಶೈಲಿಯಲ್ಲಿ ಫೋಟೋಶೂಟ್ ಮಾಡಿಸಿದ ಸೆಲೆಬ್ರಿಟಿ ಜೋಡಿ  ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ.

'ಗೆಳೆಯರೆ, ಇಂದಿನವರೆಗೂ ನಮ್ಮಿಬ್ಬರಿಗೆ ಸದಾ ಆಶೀರ್ವಾದಿಸುತ್ತಾ ಬಂದಿದ್ದೀರಿ, ಇನ್ನು ಮುಂದೆ ನಿಮ್ಮ ಪ್ರೀತಿ ಆಶೀರ್ವಾದ ನಮ್ಮ ಈ ಇನ್ನೊಂದು ಪುಟ್ಟ ಜೀವನದ ಮೇಲೆ ಇರಲಿ. ಅಕ್ಟೋಬರ್‌ಗೆ ಕಾತುರದಿಂದ ಕಾಯುತ್ತಿದ್ದೇವೆ' ಎಂದು ಭುವನ್ ಬರೆದುಕೊಂಡಿದ್ದಾರೆ.  ಕೊಡಗಿನ ಶೈಲಿಯಲ್ಲಿ ತಮ್ಮ ಹುಟ್ಟೂರಿನಲ್ಲಿ ಫೋಟೋಶೂಟ್ ಮಾಡಿಸುವ ಮೂಲಕ ಸಿಹಿ ಸುದ್ದಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಹರ್ಷಿಕಾ ಈಗ ಐದು ತಿಂಗಳ ಗರ್ಭಿಣಿ. ಇದೇ ಅಕ್ಟೋಬರ್ ತಿಂಗಳಲ್ಲಿ ತಮ್ಮ ಪಾಪುವಿನ ಆಗಮನವನ್ನು ತಿಳಿಸಲು ಪಕ್ಕಾ ಪುರಾತನ ಕೊಡವ ಸಾಂಪ್ರದಾಯ, ಉಡುಪು, ಕೊಡಗಿನ 'ಐನ್ ಮನೆ' (ದೊಡ್ಡಮನೆ), ಕೋವಿ, ಉಪಕರಣಗಳು, ಜೀವನಶೈಲಿ ಎಲ್ಲವನ್ನು ಬಿಂಬಿಸುವ ಶೈಲಿಯಲ್ಲಿ ಒಂದು ಫೋಟೋಶೂಟ್ ಹಾಗು ಅದ್ಭುತವಾದ ವಿಡಿಯೋವನ್ನು ಅಭಿಮಾನಿಗಳ ಜತೆ ಹಂಚಿಕೊಂಡಿದ್ದಾರೆ.

2023 ಆಗಸ್ಟ್‌ 24ರಂದು ಹರ್ಷಿಕಾ ಮತ್ತು ಭುವನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಜೋಡಿ ವರ್ಷದೊಳಗೆ ಗುಡ್‌ ನ್ಯೂಸ್‌ ಹಂಚಿಕೊಳ್ಳುತ್ತಿದ್ದಾರೆ. ಹಲವು ವರ್ಷಗಳ ಕಾಲ ಭುವನ್ ಪೊನ್ನಣ್ಣ ಮತ್ತು ಹರ್ಷಿಕಾ ಪೂಣಚ್ಚ ಪ್ರೀತಿಸುತ್ತಿದ್ದರು, ಪೋಷಕರು ಒಪ್ಪಿಗೆ ಪಡೆದು ಖುಷಿ ಖುಷಿಯಾಗಿ ತಮ್ಮ ಹುಟ್ಟೂರಿನಲ್ಲಿ ಮದುವೆ ಮಾಡಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net