More

    VIDEO| ಲಂಡನ್​ನಿಂದ ಮರಳಿದ ಹರ್ಷಿಕಾ ಪೂಣಚ್ಚ; ಕ್ವಾರಂಟೈನ್ ಬಗ್ಗೆ ಅವರು ನೀಡಿದ ಸ್ಪಷ್ಟನೆ ಇಲ್ಲಿದೆ

    ಬೆಂಗಳೂರು: ಕರೊನಾ ರೂಪಾಂತರ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಇಂಗ್ಲೆಂಡ್, ನೆದರ್​ಲೆಂಡ್ ಸೇರಿ ಕೆಲ ದೇಶಗಳಿಂದ ಮರಳುವ ಪ್ರಯಾಣಿಕರ ಮೇಲೆ ರಾಜ್ಯ ಸರ್ಕಾರ ಹದ್ದಿನ ಕಣ್ಣಿಟಿದೆ. ಅಲ್ಲಿಂದ ಆಗಮಿಸುವವರನ್ನು ಸಾಂಸ್ಥಿಕ ಕ್ವಾರಂಟೈನ್​ ವಿಧಿಸುವುದಾಗಿ ಬಿಬಿಎಂಪಿ ಸಹ ತಿಳಿಸಿದೆ. ಅದೇ ರೀತಿ ಇಷ್ಟು ದಿನ ಸಿನಿಮಾ ಶೂಟಿಂಗ್​ ಸಲುವಾಗಿ ಲಂಡನ್​ನಲ್ಲಿ ತಂಗಿದ್ದ ನಟಿ ಹರ್ಷಿಕಾ ಪೂಣಚ್ಚ, ಇದೀಗ ಬೆಂಗಳೂರಿಗೆ ಮರಳಿದ್ದಾರೆ. ಅವರು ತಾಯ್ನಾಡಿಗೆ ಮರಳಿದ್ದೇ ಇದೀಗ ಒಂದಷ್ಟು ಚರ್ಚೆಗೆ ಕಾರಣವಾಗಿದೆ.

    ಇದನ್ನೂ ಓದಿ: ರಾಖಿ ಋಣವನ್ನು ಈ ಜನ್ಮದಲ್ಲಿ ತೀರಿಸೋಕೆ ಸಾಧ್ಯವಿಲ್ಲ: ರಿತೇಶ್​

    ನಟಿ ಹರ್ಷಿಕಾಗೆ ಕ್ವಾರಂಟೈನ್ ಇಲ್ವಾ? ಅವರಿಗೆ ಕೋವಿಡ್ ಪರೀಕ್ಷೆ ಮಾಡಿಸುವುದಿಲ್ಲವಾ ಎಂಬಿತ್ಯಾಬಿ ಪ್ರಶ್ನೆಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಹಾಗೆ ಹರಿದಾಡಿದ ಪ್ರಶ್ನೆಗಳಿಗೆ ಸ್ವತಃ ಹರ್ಷಿಕಾ ವಿಡಿಯೋ ಮಾಡಿ ವಿವರವಾಗಿ ಉತ್ತರ ನೀಡಿದ್ದಾರೆ.

    ‘ಏನ್ ಆಗ್ತಿದೆ ಅಂತ ಅರ್ಥ ಆಗ್ತಿಲ್ಲ. ನಾನು ಲಂಡನ್​ಗೆ ಹೋಗಿದ್ದು ನಿಜ. ಆದರೆ ಎರಡು ವಾರದ ಹಿಂದೆಯೇ ನಾನು ಲಂಡನ್​ನಿಂದ ವಾಪಸ್ ಬಂದಿದ್ದೇನೆ. ಲಂಡನ್ ನನ್ನ ಇಷ್ಟದ ಸ್ಥಳ ಆಗಿರುವುದರಿಂದ ಅಲ್ಲಿನ ಸಾಕಷ್ಟು ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತೇನೆ. ಆದರೆ, ನಾನು ಇನ್ನೂ ಅಲ್ಲಿಯೇ ಇದ್ದೇನೆ ಎಂಬ ರೀತಿಯಲ್ಲಿ ಸುದ್ದಿ ಹರಿದಾಡುತ್ತಿದೆ. ಒಂದು ವಾರದ ಹಿಂದೆ ಫೋಟೋಶೂಟ್ ಸಹ ಮಾಡಿಸಿದ್ದೆ. ನಾನು ಬೆಂಗಳೂರಿನಲ್ಲಿಯೇ ಇದ್ದೇನೆ. ಸುರಕ್ಷಿತವಾಗಿದ್ದೇನೆ ಎಂದು ಹರ್ಷಿಕಾ ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: ನಟನಾಗಿದ್ದ ಆಯುಷ್ಮಾನ್​ ಖುರಾನಾ ಇದೀಗ ‘ಡಾಕ್ಟರ್’ ಆಗೋಕೆ ಹೊರಟಿದ್ದಾರೆ!

    ಅಂದಹಾಗೆ, ಇತ್ತೀಚೆಗಷ್ಟೇ ಭೋಜಪುರಿ ಸಿನಿಮಾ ಒಪ್ಪಿಕೊಂಡ ಹಿನ್ನೆಲೆಯಲ್ಲಿ ಆ ಚಿತ್ರದ ಶೂಟಿಂಗ್ ಸಲುವಾಗಿ ಹರ್ಷಿಕಾ ಲಂಡನ್​ಗೆ ತೆರಳಿದ್ದರು. ಇದೀಗ ಆ ಸಿನಿಮಾದ ಬಹುತೇಕ ಕೆಲಸಗಳನ್ನು ಮುಗಿಸಿಕೊಂಡು ಕರ್ನಾಟಕಕ್ಕೆ ಮರಳಿದ್ದಾರವರು.

    VIDEO| ಟೀ ಬ್ರೇಕ್​ನಲ್ಲಿ ನಟ ಸತೀಶ್​ ನೀನಾಸಂ ಮಾಡೋ ಕೆಲಸ ಒಂದೊಂದಲ್ಲ ಬಿಡಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts