

ಬೆಂಗಳೂರು: ಕನ್ನಡದ ಜನಪ್ರಿಯ ನಟಿಕಿ ಹರಿಪ್ರಿಯಾ, ವಸಿಷ್ಠ ಸಿಂಹ ಪೋಷಕರಾಗಿ ಪ್ರಮೋಷನ್ ಸಿಕ್ಕಿದೆ. ಭಾನುವಾರ (ಜನವರಿ 26) ಹರಿಪ್ರಿಯಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಹರಿಪ್ರಿಯಾ ಅವರ ಪತಿ, ನಟ ವಶಿಷ್ಠ ಸಿಂಹ ಅವರು ಈ ಸಂತಸದ ಸುದ್ದಿಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ಎಲ್ಲರೊಂದಿಗೆ ಹಂಚಿಕೊಂಡಿದ್ದಾರೆ.
ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹರಿಪ್ರಿಯಾ ಮೊದಲ ಮಗುವಿಗೆ ಜನ್ಮ ನೀಡಿದ್ದಾರೆ. ಸದ್ಯ ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ನಮ್ಮ ಜೀವನದಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ ಎಂದು ವಶಿಷ್ಠಸಿಂಹ ಭಾವುಕರಾದರು.
2023ರ ಜನವರಿ 26ರಂದು ಹರಿಪ್ರಿಯಾ, ವಸಿಷ್ಠ ಸಿಂಹ ಅವರು ಮೈಸೂರಿನಲ್ಲಿ ಮದುವೆಯಾಗಿದ್ದರು. ಈಗ ಇದೇ ದಿನ ಹರಿಪ್ರಿಯಾ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದರು. ಇಂದು ನಟಿ ಹರಿಪ್ರಿಯಾ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಹೆರಿಗೆಗೆಂದು ದಾಖಲಾಗಿದ್ದರು. ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ವಸಿಷ್ಠ ಸಿಂಹ- ಹರಿಪ್ರಿಯಾ ಬಾಳಲ್ಲಿ ಈಗ ಪುತ್ರನ ಆಗಮನವಾಗಿದೆ.
ಪೋಷಕರಾಗಿ ಬಡ್ತಿ ಪಡೆದಿರುವ ಹರಿಪ್ರಿಯಾ-ವಶಿಷ್ಟ ದಂಪತಿಗೆ ಕುಟುಂಬಸ್ಥರು, ಬಂಧುಗಳು, ಚಿತ್ರರಂಗದ ಗಣ್ಯರು, ಅಭಿಮಾನಿಗಳು, ನೆಟ್ಟಿಗರು ಅಭಿನಂದನೆ ಸಲ್ಲಿಸಿ ಶುಭ ಹಾರೈಸುತ್ತಿದ್ದಾರೆ. ಇಲ್ಲಿ ವಿಶೇಷ ಏನೆಂದರೆ, ಹರಿಪ್ರಿಯಾ ಮತ್ತು ವಶಿಷ್ಠ ಸಿಂಹ ಮದುವೆಯ ದಿನವೇ ತಂದೆ ತಾಯಿಯಾದರು.
ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಪ್ರೀತಿಸಿ ಮದುವೆಯಾದರು. ಇಬ್ಬರೂ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಮದುವೆಯ ನಂತರ ಹರಿಪ್ರಿಯಾ ತಮ್ಮ ಕುಟುಂಬಕ್ಕೆ ಹೆಚ್ಚಿನ ಸಮಯವನ್ನು ನೀಡಿದ್ದರು. ಗರ್ಭಿಣಿಯಾದ ತಕ್ಷಣ ಚಿತ್ರದ ಶೂಟಿಂಗ್‌ನಿಂದ ದೂರ ಉಳಿದಿದ್ದರು. ಹರಿಪ್ರಿಯಾ ಕನ್ನಡ ಮಾತ್ರವಲ್ಲದೆ ಬೇರೆ ಭಾಷೆಗಳಲ್ಲೂ ಫೇಮಸ್.