More

    ಬೃಂದಾ, ಮೂರು ಮತ್ತೊಂದಾ! ನಾಲ್ಕು ಚಿತ್ರಗಳಲ್ಲಿ ಬಿಜಿಯಾದ ‘ಪ್ರೇಮಂ ಪೂಜ್ಯಂ’ ನಟಿ

    ವಿಜಯವಾಣಿ ಸುದ್ದಿಜಾಲ ಬೆಂಗಳೂರು

    ‘ಪ್ರೇಮಂ ಪೂಜ್ಯಂ’ ಚಿತ್ರದಲ್ಲಿ ಏಂಜೆಲ್ ಪಾತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ನಾಯಕಿಯಾಗಿ ಪದಾರ್ಪಣೆ ಮಾಡಿದ ನಟಿ ಬೃಂದಾ, ನಂತರ ‘ಜೂಲಿಯೆಟ್ 2’ ಚಿತ್ರದಲ್ಲಿ ಟೈಟಲ್ ರೋಲ್‌ನಲ್ಲಿ ಹಾಗೂ ‘ಕೌಸಲ್ಯಾ ಸುಪ್ರಜಾ ರಾಮ’ ಸಿನಿಮಾದಲ್ಲಿ ಶಿವಾನಿ ಪಾತ್ರದಲ್ಲಿ ಮಿಂಚಿದ್ದರು. ಮೂರೂ ಚಿತ್ರಗಳಲ್ಲಿ ಭಿನ್ನ, ವಿಭಿನ್ನ ಪಾತ್ರಗಳ ಮೂಲಕ ಬೃಂದಾ ಆಚಾರ್ಯ ಗಮನ ಸೆಳೆದಿದ್ದರು. ನಂತರ ಹಲವು ಅವಕಾಶಗಳು ಕೈಬೀಸಿ ಕರೆದರೂ, ಉತ್ತಮ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿರುವ ಬೃಂದಾ, ಸದ್ಯ ನಾಲ್ಕು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ.

    ಇದನ್ನೂ ಓದಿ : ಕಂಗನಾ ರಣಾವತ್ ‘ತೇಜಸ್’ ಓಟಿಟಿಗೆ..ಯಾವ ವೇದಿಕೆಯಲ್ಲಿ ಸ್ಟ್ರೀಮಿಂಗ್ ಆಗಿದೆ?

    ಬೃಂದಾ, ಮೂರು ಮತ್ತೊಂದಾ! ನಾಲ್ಕು ಚಿತ್ರಗಳಲ್ಲಿ ಬಿಜಿಯಾದ ‘ಪ್ರೇಮಂ ಪೂಜ್ಯಂ’ ನಟಿ

    ಎಸ್. ನಾರಾಯಣ್ ನಿರ್ದೇಶಿಸುತ್ತಿರುವ, ಶ್ರೇಯಸ್ ಮಂಜು ನಾಯಕನಾಗಿರುವ ‘ಒಂದ್ಸಲ ಮೀಟ್ ಮಾಡಣ’, ಸತ್ಯ ಪ್ರಕಾಶ್ ಆ್ಯಕ್ಷನ್-ಕಟ್ ಹೇಳಿ, ಅಥರ್ವ ಜತೆ ನಾಯಕನಾಗಿ ನಟಿಸುತ್ತಿರುವ ್ಯಾಂಟಸಿ ಹ್ಯೂಮರ್ ಜಾನರ್‌ನ ‘ಎಕ್ಸ್ ಆ್ಯಂಡ್ ವೈ’, ದೀಕ್ಷಿತ್ ಶೆಟ್ಟಿ ನಾಯಕನಾಗಿರುವ, ಅಭಿಷೇಕ್ ನಿರ್ದೇಶಿಸುತ್ತಿರುವ ಕಾಮಿಡಿ ಸಿನಿಮಾ ‘ಬ್ಯಾಂಕ್ ಆ್ ಭಾಗ್ಯಲಕ್ಷ್ಮಿ’ ಚಿತ್ರಗಳಿಗೆ ಬೃಂದಾ ನಾಯಕಿಯಾಗಿ ಆಯ್ಕೆಯಾಗಿದ್ದರು. ಅದರ ಬೆನ್ನಲ್ಲೇ ಇತ್ತೀಚೆಗಷ್ಟೆ ಹೊಸ ಸಿನಿಮಾ ಸೈನ್ ಮಾಡಿದ್ದಾರೆ.

    ಇದನ್ನೂ ಓದಿ : ನಟ ದರ್ಶನ್ ಮುಂದಿನ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಮೆಗಾಸ್ಟಾರ್? ಇಲ್ಲಿದೆ ಅಸಲಿ ಸಂಗತಿ!

    ಬೃಂದಾ, ಮೂರು ಮತ್ತೊಂದಾ! ನಾಲ್ಕು ಚಿತ್ರಗಳಲ್ಲಿ ಬಿಜಿಯಾದ ‘ಪ್ರೇಮಂ ಪೂಜ್ಯಂ’ ನಟಿ

    ನಿರೂಪ್‌ಗೆ ನಾಯಕಿಯಾಗಿ ಆಯ್ಕೆ
    ಈ ಹೊಸ ಚಿತ್ರದಲ್ಲಿ ಬೃಂದಾ, ‘ರಂಗಿತರಂಗ’, ‘ರಾಜರಥ’ ನಟ ನಿರೂಪ್ ಭಂಡಾರಿಗೆ ಜೋಡಿಯಾಗಲಿದ್ದಾರೆ. ಕಳೆದ ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಸಹನಿರ್ದೇಶಕನಾಗಿ ಕೆಲಸ ಮಾಡಿ ಅನುಭವ ಪಡೆದಿರುವ ಸಚಿನ್ ವಾಲಿ ಚೊಚ್ಚಲ ಬಾರಿಗೆ ನಿರ್ದೇಶಲಿರುವ ಚಿತ್ರವಿದು. ಇನ್ನಷ್ಟೇ ಶೀರ್ಷಿಕೆ ರಿವೀಲ್ ಆಗಬೇಕಿದೆ. ನಿರೂಪ್, ಬೃಂದಾ ಜತೆ ಕಿರುತೆರೆ ನಟಿ ಅಂಕಿತಾ ಅಮರ್ ಈ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಬೃಂದಾ ಸೋಷಿಯಲ್ ಮೀಡಿಯಾ ಇನ್‌ಲ್ೂಯೆನ್ಸರ್ ಪಾತ್ರದಲ್ಲಿ ಹಾಗೂ ಅಂಕಿತಾ ಅಮರ್ ಪತ್ರಕರ್ತೆಯಾಗಿ ಕಾಣಿಸಿಕೊಳ್ಳಲಿದ್ದಾರೆ.

    ಬೃಂದಾ, ಮೂರು ಮತ್ತೊಂದಾ! ನಾಲ್ಕು ಚಿತ್ರಗಳಲ್ಲಿ ಬಿಜಿಯಾದ ‘ಪ್ರೇಮಂ ಪೂಜ್ಯಂ’ ನಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts