More

  ‘ಬಾ ಬಾರೋ ರಸಿಕ’ ನಟಿ ಆಶಿತಾ ಪ್ರೀತಿಸಿ ಮದ್ವೆ ಆದ್ರೂ ಡಿವೋರ್ಸ್ ಆಯ್ತು

  ಬೆಂಗಳೂರು:  ಸ್ಯಾಂಡಲ್​ವುಡ್​ ನಟಿ ಆಶಿತಾ ಮಾರಿಯಾ ಕ್ರಾಸ್ತಾ ಒಂದು ಕಾಲದಲ್ಲಿ ಬಹುಬೇಡಿಕೆಯ ನಟಿಯಲ್ಲಿ ಒಬ್ಬರಾಗಿದ್ದರು. ಸಾಕಷ್ಟು ಹಿಟ್​ ಸಿನಿಮಾಗಳ ಜತೆಗೆ ಸ್ಟಾರ್​​ ನಟರ ಜತೆಗೆ ತೆರೆ ಹಂಚಿಕೊಂಡಿದ್ದ ನಟಿ ಇದೀಗ ಚಿತ್ರರಂಗದಿಂದ ದೂರ ಉಳಿದಿದ್ದಾರೆ. ನಟಿ ಈಗ ಯುಟ್ಯೂಬ್ ಚಾನೆಲ್‌ನ ಸಂದರ್ಶನವೊಂದರಲ್ಲಿ ವಯಕ್ತಿಕ ಜೀವನದ ಕುರಿತಾಗಿ ಮಾತನಾಡಿದ್ದಾರೆ.

  ಆಶಿತಾ ನಟ ರಘುರಾಮ್‌ ಯುಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿ, ‘ನನ್ನ ಮದುವೆ ಆಯ್ತು. ಆದ ಮೇಲೆ ವರ್ಕೌಟ್ ಆಗಲಿಲ್ಲ. ಜನರಿಗೂ ಗೊತ್ತಾಗಬೇಕು ಮದುವೆ ಜೀವನ ವರ್ಕೌಟ್ ಆಗಲಿಲ್ಲ ಅಂತ. ಇಬ್ಬರು ಮಾತನಾಡಿಕೊಂಡು ಪರಸ್ಪರ ನಿರ್ಧಾರ ಮಾಡಿ ಸಪರೇಟ್ ಆಗಿದ್ದು. ಇದು ಲವ್ ಮ್ಯಾರೇಜ್ ಆಗಿತ್ತು. ಲೈಫ್‌ನಲ್ಲಿ ನಾವು ಅಂದುಕೊಂಡಂತೆ ಆಗಲ್ಲ ಹೀಗಾಗಿ ಜೀವನವನ್ನು ಒಪ್ಪಿಕೊಂಡು ಚೆನ್ನಾಗಿ ಬದುಕಬೇಕು. ನಿರೀಕ್ಷೆ ಹೆಚ್ಚಿಗೆ ಇದ್ದಷ್ಟು ದುಃಖ ಅಗುತ್ತೆ. ನಿರೀಕ್ಷೆಗಳು ತುಂಬಾ ನೋವು ಕೊಡುತ್ತದೆ. ನನ್ನ ಜೀವನದಲ್ಲಿ ನಡೆದಿರುವ ಘಟನೆಗಳಿಂದ ನಾನು ಇಂದು ಗಟ್ಟಿಯಾಗಿರುವೆ..ಈಗ ಯಾವುದೇ ಘಟನೆ ಎದುರಾದರೂ ನಾನು ಸ್ಟ್ರಾಂಗ್ ಆಗಿ ನಿಂತುಕೊಳ್ಳುವೆ’ ಎಂದಿದ್ದಾರೆ.

   ಪುನೀತ್ ರಾಜ್‌ಕುಮಾರ್, ಶಿವರಾಜ್‌ಕುಮಾರ್ ಅವರಿಗೆ ಸಹೋದರಿಯಾಗಿ ಕಾಣಿಸಿಕೊಳ್ಳುತ್ತಿದ್ದ ಆಶಿತಾ ಅವರಿಗೆ ತಮ್ಮ ಉತ್ತಮವಾದ ನಟನಾ ಶೈಲಿ ಮೂಲಕವಾಗಿ ನಟಿಯಾಗುವ ಅವಕಾಶವನ್ನು ಗಿಟ್ಟಿಸಿಕೊಂಡಿದ್ದರು. ಸಾಕಷ್ಟು ಹಿಟ್​ ಸಿನಿಮಾಗಳ ಜತೆಗೆ ಸ್ಠಾರ್​ ಹೋರೋ ಜತೆಗೆ ತೆರೆ ಹಂಚಿಕೊಂಡಿದ್ದ ನಟಿ ಇದೀಗ ಚಿತ್ರರಂಗದಿಂದ ದೂರ ಉಳಿದಿದ್ದಾರೆ.

  ಆಶಿತಾ, ಮುಂಬೈನಲ್ಲಿ ಜನಿಸಿ ಬೆಂಗಳೂರಿನಲ್ಲಿ ಬೆಳೆದವರು. ಎಂಬಿಎ ಪದವಿ ಪಡೆದಿರುವ ಇವರು ತಮ್ಮ ಮೊದಲ ಬ್ಯೂಟಿ ಕಂಟೆಸ್ಟ್ ಗೆದ್ದದ್ದು 16ನೇ ವಯಸ್ಸಿನಲ್ಲಿ. ನಂತರ ಮಿಸ್ ಬ್ಲಾಸಮ್ -1998, ಮಿಸ್ ಎಕ್ಷೋಟಿಕಾ- 1999 , ಮಿಸ್ ಮಿಲೇನಿಯಂ – 2000 ಸ್ಪರ್ಧೆಗಳಲ್ಲಿ ವಿಜೇತರಾದರು. `ಬಾ ಬಾ ಬಾರೋ ರಸಿಕ’ ಸೇರಿದಂತೆ ತವರಿನ ಸಿರಿ, ಆಕಾಶ್ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಸದ್ಯ ಸಿನಿಮಾರಂಗದಿಂದ ದೂರ ಇರುವ ಆಶಿತಾ ಮತ್ತೆ ಬಣ್ಣ ಹಚ್ಚುತ್ತಾರಾ, ಯಾವ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲಿದ್ದಾರೆ ಎಂದು ಕಾದು ನೋಡಬೇಕಿದೆ.

  ‘ಬಾ ಬಾರೋ ರಸಿಕ’ ನಟಿ ಆಶಿತಾ ಈಗಲೂ ಸಖತ್​ ಬೋಲ್ಡ್​; ಫೋಟೋ ನೋಡಿದ್ರೆ ಕಳೆದು ಹೋಗುವುದು ಪಕ್ಕಾ…

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts