More

    ಅದಿತಿ ಆಗಮನ…; 5ಡಿ ಮೂಲಕ ಶೂಟಿಂಗ್​ಗೆ ಎಂಟ್ರಿ

    ಬೆಂಗಳೂರು: ಸ್ಯಾಂಡಲ್​ವುಡ್ ನಟಿ ಅದಿತಿ ಪ್ರಭುದೇವ ಕೈಯಲ್ಲಿ ಬರೋಬ್ಬರಿ ಹತ್ತು ಪ್ಲಸ್ ಸಿನಿಮಾಗಳಿವೆ. ಅದರಲ್ಲಿ ಕೆಲವು ಶೂಟಿಂಗ್ ಮುಗಿದರೆ, ಮತ್ತೆ ಕೆಲವು ಬಿಡುಗಡೆಗೆ ಸಿದ್ಧವಾಗಿವೆ. ಇನ್ನು ಕೆಲವು ಶೂಟಿಂಗ್​ಗೆ ಸಿದ್ಧತೆ ಮಾಡಿಕೊಳ್ಳುತ್ತಿವೆ. ಹೀಗಿರುವಾಗಲೇ ಸುದೀರ್ಘ ಎರಡು ತಿಂಗಳ ಲಾಕ್​ಡೌನ್ ಬಳಿಕ ಶೂಟಿಂಗ್​ಗೆ ಮರಳಲು ಸಜ್ಜಾಗಿದ್ದಾರೆ. ‘5ಡಿ’ ಸಿನಿಮಾ ಮೂಲಕ ಮತ್ತೆ ಕ್ಯಾಮರಾ ಎದುರಿಸಲಿದ್ದಾರೆ.

    ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಇಷ್ಟೊತ್ತಿಗಾಗಲೇ ಚಿತ್ರದ ಬಹುತೇಕ ಎಲ್ಲ ಕೆಲಸಗಳನ್ನು ನಿರ್ದೇಶಕ ಎಸ್. ನಾರಾಯಣ್ ಮುಗಿಸಿರುತ್ತಿದ್ದರು. ಆದರೆ ಕೋವಿಡ್ ಲಾಕ್​ಡೌನ್ ಹಿನ್ನೆಲೆಯಲ್ಲಿ ಅದು ಸಾಧ್ಯವಾಗಲಿಲ್ಲ. ಇದೀಗ ಜುಲೈ 11ಕ್ಕೆ ಫಸ್ಟ್ ಲುಕ್ ಬಿಡುಗಡೆಯಾಗಲಿದೆ. 12ರಿಂದ ಮತ್ತೆ ಕೆಲಸ ಆರಂಭವಾಗಲಿದ್ದು, ಶೂಟಿಂಗ್​ನಲ್ಲಿ ಪಾಲ್ಗೊಳ್ಳಲು ಅದಿತಿ ಸಹ ಉತ್ಸುಕರಾಗಿದ್ದಾರೆ.

    ‘ಲಾಕ್​ಡೌನ್ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳು ಮನೆಯಲ್ಲಿಯೇ ಕಾಲಕಳೆದಿದ್ದೇನೆ. ಇದೀಗ ಮತ್ತೆ ಕೆಲಸ ಆರಂಭವಾಗಿದೆ. ಲಾಕ್​ಡೌನ್ ಬಳಿಕ ಶೂಟಿಂಗ್ ಆರಂಭಿಸಲಿರುವ ನನ್ನ ಮೊದಲ ಸಿನಿಮಾ ‘5ಡಿ’. ಈ ಮೊದಲು 10 ದಿನದ ಶೂಟಿಂಗ್​ನಲ್ಲಿ ಭಾಗವಹಿಸಿದ್ದೇನೆ ’ ಎನ್ನುವ ಅದಿತಿ, ‘ಎಸ್. ನಾರಾಯಣ್ ಒಂದು ರೀತಿ ಯೂನಿವರ್ಸಿಟಿ ಇದ್ದಂತೆ. ಅವರಿಂದ ಸಾಕಷ್ಟು ಕಲಿಯಬಹುದು. ಇನ್ನೂ ಕಲಿಯುವುದಿದೆ. ಈ ಚಿತ್ರದ ಪಾತ್ರವೂ ಅಷ್ಟೇ ಸೊಗಸಾಗಿದೆ. ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯ ಚಿತ್ರವಾದರೂ, ಹಾಸ್ಯದ ಅಂಶ ಸಿನಿಮಾದಲ್ಲಿದೆ. ಈಗಿನ ಕಾಲದ ಪ್ರಬುದ್ಧ ಯುವತಿಯ ಪಾತ್ರ ಸಿಕ್ಕಿದೆ’ ಎಂಬುದು ಅವರ ಮಾತು.

    ಮನಿಮೈಂಡೆಡ್​ ಜನಪ್ರತಿನಿಧಿಗಳಿಗೆ ಇದು ಶಾಕಿಂಗ್ ಸುದ್ದಿ: ಸಂಚಲನ ಮೂಡಿಸುವಂತಿದೆ ಆರ್​ಬಿಐನ ಈ ಕ್ರಮ!

    ತುಂಬು ಗರ್ಭಿಣಿಯೇ ಆಸ್ಪತ್ರೆಗೆ ದಾಖಲಾಗಿ ಮಗುವನ್ನು ಕದ್ದಳು!; ಕಾರಣ ಮೂರು ಮತ್ತೊಂದು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts