ಹಣ ಬಲದ ಮುಂದೆ ಯಾವುದೂ ನಡೆಯವುದಿಲ್ಲ: ಯಶ್​ ರಹಸ್ಯ ಭೇಟಿಯ ಬೆನ್ನಲ್ಲೇ ಗ್ರಾಮಸ್ಥರ ಆಕ್ರೋಶ!

Yash Hassan
Published on

ಹಾಸನ: ಜಮೀನಿಗಾಗಿ ಗಲಾಟೆ ಮಾಡಿಕೊಂಡಿದ್ದ ರೈತರು, ನಟ ಯಶ್ ಜತೆ ಪೋಟೋಗೆ ಫೋಸ್ ನೀಡಿರುವುದು ಹೊಸ ಸಂಶಯಕ್ಕೆ ಎಡೆಮಾಡಿಕೊಟ್ಟಿದ್ದು, ಗ್ರಾಮಸ್ಥರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

ಯಶ್ ಗುಟ್ಟಾಗಿ ತನ್ನ ಜಮೀನಿಗೆ ಭೇಟಿ ನೀಡಿದ್ದ ವೇಳೆ ಗಲಾಟೆ ಮಾಡಿಕೊಂಡ ರೈತರು, ಯಶ್ ಜತೆ ಖುಷಿಯಾಗಿ ಪೋಟೋ ತೆಗೆಸಿಕೊಂಡಿದ್ದು, ಪೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಯಶ್ ಜತೆ ರೈತ ಕಾಂತರಾಜ್ ಮತ್ತು ರಮೇಶ್​ ಇರುವ ಪೋಟೋಗಳು ವೈರಲ್ ಆಗಿವೆ. ಹಾಸನದ ತಿಮ್ಲಾಪುರದಲ್ಲಿರುವ ತನ್ನ ಜಮೀನು ವಿವಾದ ರಾಜಿಯಾದ ಬಳಿಕ ಗೌಪ್ಯವಾಗಿ ಜಮೀನಿಗೆ ಭೇಟಿ ನೀಡಿದ್ದ ಯಶ್​, ರೈತರನ್ನು ಮಾತನಾಡಿಸಿ ಕಳುಹಿಸಿದ್ದಾರೆಂದು ತಿಳಿದುಬಂದಿದೆ.

ಜಮೀನು ವಿಚಾರಕ್ಕಾಗಿ ಯಶ್​ ಪಾಲಕರು ಪಕ್ಕದ ಜಮೀನಿನ ಕಾಂತರಾಜ್ ಹಾಗೂ ರಮೇಶ್ ಜತೆ ಗಲಾಟೆ ಮಾಡಿಕೊಂಡಿದ್ದರು. ಅಲ್ಲದೆ, ದುದ್ದ ಪೊಲಿಸ್ ಠಾಣೆಯ ಮೆಟ್ಟಿಲೇರಿದ್ದರು. ಇದಾದ ಬಳಿಕ ಯಶ್​, ರೈತರೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸಿಕೊಂಡಿದ್ದರು.

ಇದೀಗ ಯಶ್​ ಜತೆಯಲ್ಲಿ ಫೋಟೋ ತೆಗೆಸಿಕೊಂಡಿರುವುದು ವೈರಲ್​ ಆದ ಬೆನ್ನಲ್ಲೇ ಅಂದು ಕಾಂತರಾಜ್​ ಮತ್ತು ರಮೇಶ್​ಗೆ ಯಶ್​ ಕಡೆಯವರು ತೊಂದರೆ ಕೊಟ್ಟಿದ್ದಕ್ಕೆ ಅಕ್ಕಪಕ್ಕದ ಊರು ಸೇರಿ ಇಡೀ ಊರೇ ಅವರ ಪರವಾಗಿ ನಿಂತಿತು. ಆದರೆ, ಇಂದು ಒಳಗೊಳಗೆ ರಾಜಿ ಮಾಡಿಕೊಂಡಿದ್ದಾರೆ. ಹಣ ಬಲದ ಜತೆ ಯಾವುದು ಇಲ್ಲ ಎಂಬ ಸಂದೇಶ ಗ್ರಾಮಸ್ಥರ ವಾಟ್ಸ್​ಆ್ಯಪ್​ ಮತ್ತು ಜಾಲತಾಣಗಳಲ್ಲಿ ಹರಿದಾಡುತ್ತಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net