

Actor Vijay : ಖ್ಯಾತ ಜ್ಯೋತಿಷಿಯೊಬ್ಬರ ಮಾತು ಕೇಳಿ ತಮಿಳು ಚಿತ್ರರಂಗದ ಸ್ಟಾರ್ ನಟ ಹಾಗೂ ಇತ್ತೀಚೆಗೆ ರಾಜಕೀಯಕ್ಕೆ ಇಳಿದಿರುವ ವಿಜಯ್ ಅವರು ತಮ್ಮ ಪತ್ನಿಯನ್ನು ದೂರ ಇಟ್ಟಿದ್ದಾರೆ ಎಂದು ಸೆಲೆಬ್ರಿಟಿಯೊಬ್ಬರು ಹೇಳಿರುವ ಮಾತು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ನಟ ವಿಜಯ್ ತಮಿಳು ಚಿತ್ರರಂಗದ ಪ್ರಮುಖ ನಟನೆಂಬುದು ಎಲ್ಲರಿಗೂ ತಿಳಿದಿದೆ. ಕೊನೆಯದಾಗಿ GOAT ಸಿನಿಮಾ ಬಿಡುಗಡೆಯಾಯಿತು. ಈ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ವಿಜಯ್ ಅವರು ಇನ್ನು ಕೇವಲ ಒಂದು ಸಿನಿಮಾದಲ್ಲಿ ಮಾತ್ರ ನಟಿಸಲಿದ್ದಾರೆ. ಆ ಚಿತ್ರವನ್ನು ಎಚ್.ವಿನೋದ್ ಅವರು ನಿರ್ದೇಶನ ಮಾಡಲಿದ್ದಾರೆ. ಇದಾದ ಬಳಿಕ ಚಿತ್ರರಂಗದಿಂದ ಅಂತರ ಕಾಯ್ದುಕೊಳ್ಳಲಿದ್ದಾರೆ.
ವಿಜಯ್ ಅವರು ಸಿನಿರಂಗದಿಂದ ದೂರ ಉಳಿಯಲು ಕಾರಣವೇನೆಂದರೆ, ಅವರ ರಾಜಕೀಯ ಎಂಟ್ರಿ. ವಿಜಯ್ ಅವರು ತಮಿಳುನಾಡು ವೆಟ್ರಿ ಕಳಗಂ ( TVK ) ಎಂಬ ಹೊಸ ಪಕ್ಷವನ್ನು ಆರಂಭಿಸಿದ್ದಾರೆ. ಇದರ ಮೊದಲ ರಾಜ್ಯ ಸಮ್ಮೇಳನ ಇತ್ತೀಚೆಗಷ್ಟೇ ಯಶಸ್ವಿಯಾಗಿ ಮುಕ್ತಾಯವಾಯಿತು. ಈ ಸಮಾವೇಶಲ್ಲಿ ಭಾರಿ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು.
ಪಕ್ಷದ ಸಮಾವೇಶ ನಡೆದಾಗ ವಿಜಯ್‌ಗೆ ಬೆಂಬಲ ನೀಡಲು ಅವರ ತಾಯಿ ಮತ್ತು ತಂದೆ ಅವರ ಸ್ವಯಂಸೇವಕರೊಂದಿಗೆ ಹಾಜರಿದ್ದರು. ಆದರೆ, ವಿಜಯ್ ಅವರ ಪತ್ನಿ ಮತ್ತು ಮಕ್ಕಳು ಹಾಜರಾಗಿರಲಿಲ್ಲ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗಳಾಗಿತ್ತು.
ಜ್ಯೋತಿಷಿಯ ಭವಿಷ್ಯ ಕೆಲಸ ಮಾಡುತ್ತಾ?
ಇದೇ ಸಂದರ್ಭದಲ್ಲಿ ತಮಿಳುನಾಡಿನ ಖ್ಯಾತ ಪತ್ರಕರ್ತ ಶಂಕರ್ ಅವರು ವಿಜಯ್ ಅವರ ರಾಜಕೀಯ ಜೀವನ ಮತ್ತು ಅವರ ರಹಸ್ಯಗಳ ಬಗ್ಗೆ ಮಾತನಾಡಿದ್ದಾರೆ. ಅದೇನೆಂದರೆ, ವಿಜಯ್ ಮತ್ತು ಸಂಗೀತಾ ಶಾಶ್ವತವಾಗಿ ಬೇರ್ಪಟ್ಟಿದ್ದಾರೋ? ಇಲ್ಲವೋ? ಗೊತ್ತಿಲ್ಲ. ಆದರೆ, ಜ್ಯೋತಿಷಿಯೊಬ್ಬರು ವಿಜಯ್ ಪತ್ನಿಯಿಂದ ಅಂತರ ಕಾಯ್ದುಕೊಂಡರೆ ಅಧಿಕಾರ ಸಿಗುತ್ತದೆ ಎಂದಿದ್ದಾರೆ. ಕಡಲೂರು ಜ್ಯೋತಿಷಿಯ ಭವಿಷ್ಯವಾಣಿಯಂತೆ ವಿಜಯ್ ನಡೆಯುತ್ತಿದ್ದಾರೆ ಎಂದಿದ್ದಾರೆ.
ಸಿನಿ ಸೆಲೆಬ್ರಿಟಿಗಳು ಹಾಗೂ ರಾಜಕಾರಣಿಗಳ ಜೀವನದಲ್ಲಿ ಜ್ಯೋತಿಷಿಗಳು ಪ್ರಮುಖ ಪಾತ್ರ ವಹಿಸುತ್ತಾರೆ. ವಿಜಯ್ ಅವರಂತೆ ಕಲಾವಿದ ಕರುಣಾನಿಧಿ ಮತ್ತು ಎಂಜಿಆರ್ ತಮ್ಮ ವೈಯಕ್ತಿಕ ಬದುಕನ್ನು ಯಾವತ್ತೂ ಮುಚ್ಚಿಟ್ಟವರಲ್ಲ. ಹಾಗಾಗಿ ಸಂಗೀತಾ ಬಗ್ಗೆ ವಿಜಯ್ ಸ್ಪಷ್ಟನೆ ನೀಡಬೇಕು ಎಂಬ ಮಾತುಗಳು ಸಹ ಕೇಳಿಬರುತ್ತಿವೆ.
ಅಂದಹಾಗೆ ನಟ ವಿಜಯ್ ಅವರು ಕಳೆದ ಫೆಬ್ರವರಿ 2ರಂದು ತಮ್ಮ ಹೊಸ ರಾಜಕೀಯ ಪಕ್ಷ ತಮಿಳಗ ವೆಟ್ರಿ ಕಳಗಂ ಅನ್ನು ಘೋಷಣೆ ಮಾಡಿದರು. ಇದಾದ 5 ತಿಂಗಳ ನಂತರ ಆಗಸ್ಟ್ 22ರಂದು ಚೆನ್ನೈನಲ್ಲಿರುವ ತಮ್ಮ ಪಕ್ಷದ ಪ್ರಧಾನ ಕಚೇರಿಯಲ್ಲಿ ಪಕ್ಷದ ಧ್ವಜ ಮತ್ತು ಗೀತೆಯನ್ನು ಅನಾವರಣಗೊಳಿಸಿದರು. 2026ರಲ್ಲಿ ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ವಿಜಯ್ ಘೋಷಣೆ ಮಾಡಿದ್ದಾರೆ. (ಏಜೆನ್ಸೀಸ್)