More

    ವಿಜಯ್ ಜೊತೆ ಮದುವೆ; ರಶ್ಮಿಕಾ ಮಂದಣ್ಣ ಮಾತು ಕೇಳಿದ್ರೆ ಶಾಕ್​ ಆಗ್ತೀರಾ? 

    ತೆಲಂಗಾಣ: ಅನಿಮಲ್​ ಚಿತ್ರದ ಹಸಿಬಿಸಿ ದೃಶ್ಯದ ಬಳಿಕ ನಟಿ ರಶ್ಮಿಕಾ ಮಂದಣ್ಣ ಸಕತ್​ ಸುದ್ದಿಯಲ್ಲಿದ್ದಾರೆ. ನಟ ರಣಬೀರ್​ ಕಪೂರ್​ ಜೊತೆಗಿನ ಲಿಪ್​ಲಾಕ್​ ಸೇರಿದಂತೆ ಈ ಚಿತ್ರದಲ್ಲಿ ಇಂಟಿಮೇಟ್​ ಸೀನ್​ನಲ್ಲಿ ಕಾಣಿಸಿಕೊಂಡ ಬಳಿಕ ನಟಿಯ ಬೇಡಿಕೆ ಇನ್ನಷ್ಟು ಹೆಚ್ಚಾಗುತ್ತಿದೆ. ಈ ಮಧ್ಯೆ ರಶ್ಮಿಕಾ ಮಂದಣ್ಣ ಇತ್ತೀಚೆಗಷ್ಟೇ ವಿಜಯ್ ದೇವರ ಕೊಂಡ ಬಗ್ಗೆ ಇಂಟರೆಸ್ಟಿಂಗ್ ಕಾಮೆಂಟ್ ಮಾಡಿದ್ದಾರೆ.

    ಇದನ್ನೂ ಓದಿ:ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೂ ಆಯುಷ್ಮಾನ್‌ ಭಾರತ್‌ ವಿಸ್ತರಣೆ

    ವಿಜಯ್ ಜೊತೆ ಮದುವೆ; ರಶ್ಮಿಕಾ ಮಂದಣ್ಣ ಮಾತು ಕೇಳಿದ್ರೆ ಶಾಕ್​ ಆಗ್ತೀರಾ? 

    ನಟಿ ರಶ್ಮಿಕಾ ಮಂದಣ್ಣ ಅವರ ಜೊತೆಗೆ ಶೀಘ್ರ ಮದ್ವೆಯೂ ಆಗುತ್ತಿಲ್ಲ, ಫೆಬ್ರುವರಿಯಲ್ಲಿ ನಿಶ್ಚಿತಾರ್ಥನೂ ಮಾಡಿಕೊಳ್ಳುತ್ತಿಲ್ಲ ಎಂದಿದ್ದಾರೆ. ಮಾಧ್ಯಮಗಳು ನನ್ನ ಮತ್ತು ರಶ್ಮಿಕಾ ಮದುವೆಯನ್ನು ಆಗ್ಗಾಗ್ಗೆ ಮಾಡಿಸುತ್ತಲೇ ಇರುತ್ತವೆ. ಕನಿಷ್ಠ ಎರಡು ವರ್ಷಗಳಿಗೆ ಒಮ್ಮೆಯಾದರೂ ಮದುವೆ ಮಾಡಿಸುತ್ತವೆ. ಪ್ರತಿ ಬಾರಿಯೂ ನನ್ನ ಮದುವೆ ಸುದ್ದಿ ಬಂದಾಗ ಈ ಬಗ್ಗೆ ಸ್ಪಷ್ಟನೆ ನೀಡುತ್ತಲೇ ಇರುತ್ತೇನೆ. ಇವೆಲ್ಲಾ ಸುಳ್ಳು ಎಂದು ವಿಜಯ್​ ದೇವರಕೊಂಡ ಹೇಳಿದ್ದರು.

    ರಶ್ಮಿಕಾ ಮಂದಣ್ಣ ಹೇಳಿದ್ದೇನು?: ನಟಿ ರಶ್ಮಿಕಾ ಮಂದಣ್ಣ ಇತ್ತೀಚೆಗೆ ಸಂದರ್ಶನವೊಂದರಲ್ಲಿ ವಿಜಯ್ ದೇವರಕೊಂಡ ಬಗ್ಗೆ ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡಿದ್ದಾರೆ. ‘ವೀ ಆರ್ ಯೂತ್’ ನಡೆಸಿದ ಸಂದರ್ಶನದಲ್ಲಿ ಮಾತನಾಡಿ, ‘ವಿಜು (ವಿಜಯ್ ದೇವರಕೊಂಡ) ಮತ್ತು ನಾನು ಕೂಡ ಒಂದೇ ರೀತಿಯಲ್ಲಿ ಯೋಚಿಸುತ್ತೇವೆ. ನಾನು ಮಾಡುವ ಎಲ್ಲಾ ಕೆಲಸಗಳಲ್ಲಿ ಸಲಹೆ ತೆಗೆದುಕೊಳ್ಳುತ್ತೇನೆ. ಅವನು ಎಲ್ಲದಕ್ಕೂ ಹೌದು ಎಂದು ಹೇಳುವ ಮನುಷ್ಯನಲ್ಲ. ಒಳ್ಳೇದು, ಕೆಟ್ಟದು ಏನು ಎಂಬುದನ್ನು ನನಗೆ ಮಾರ್ಗದರ್ಶನ ಮಾಡುತ್ತಾನೆ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ.

    ನನ್ನ ಜೀವನದಲ್ಲಿ ಬೇರೆಯವರಿಗಿಂತ ವಿಜಯ್ ದೇವರಕೊಂಡ ನನ್ನನ್ನು ಬೆಂಬಲಿಸಿದರು. ಹಾಗಾಗಿ ಅವರನ್ನು ತುಂಬಾ ಗೌರವಿಸುತ್ತೇನೆ. ವಿಜಯ್ ದೇವರಕೊಂಡ ಜೊತೆ ‘ಗೀತ ಗೋವಿಂದಂ’ ಮತ್ತು ‘ಡಿಯರ್ ಕಾಮ್ರೇಡ್’ ಚಿತ್ರದಲ್ಲಿ ರಶ್ಮಿಕಾ ನಟಿಸಿದ್ದೇನೆ. ಅಲ್ಲಿಂದ ನಮ್ಮ ನಡುವೆ ಉತ್ತಮ ಬಾಂಧವ್ಯ ಬೆಳೆಯಿತು ಎಂದಿದ್ದಾರೆ.

    ಲವ್ ವಿಚಾರ ಬಂದಾಗ ರಶ್ಮಿಕಾ ಮಂದಣ್ಣ “ನಾನು, ವಿಜಯ್ ದೇವರಕೊಂಡ ಒಳ್ಳೆಯ ಸ್ನೇಹಿತರು. ನಮ್ಮಿಬ್ಬರಿಗೂ ಫ್ರೆಂಡ್ಸ್ ಸರ್ಕಲ್ ಇದ್ದು, ಅವರ ಜೊತೆಯೇ ನಾವು ಜಾಸ್ತಿ ಮಾತನಾಡ್ತೀವಿ, ತಿರುಗಾಡ್ತೀವಿ. ನಾನು, ವಿಜಯ್ ಎಲ್ಲಿಯೇ ಹೋದರೂ ನಮ್ಮಿಬ್ಬರನ್ನು ಟ್ಯಾಗ್ ಮಾಡಿ ಲವ್, ಮದುವೆ ಅಂತ ಹೇಳುತ್ತಾರೆ. ನ್ಯೂಯಾರ್ಕ್‌ನಲ್ಲಿ ನಾನು, ವಿಜಯ್ ಹೊಸ ವರ್ಷ ಆಚರಿಸಿದ್ವಿ ಅಂತ ಹೇಳಿದ್ರು. ನಾವು, ನಮ್ಮ 10 ಜನ ಸ್ನೇಹಿತರು ಸೇರಿಕೊಂಡು ಟ್ರಿಪ್ ಹೋಗ್ತೀವಿ” ಎಂದು ಹೇಳಿದ್ದರು.

    ರಶ್ಮಿಕಾ ಪುಷ್ಪ 2 ಚಿತ್ರದಲ್ಲಿ ನಟಿಸುತ್ತಿದ್ದಾರೆ. ಹಾಗೆಯೇ ತಮಿಳಿನಲ್ಲಿ ಕೆಲವು ಚಿತ್ರಗಳು.. ಬಾಲಿವುಡ್ ನಲ್ಲಿ ಕೆಲವು ಪ್ರಾಜೆಕ್ಟ್ ಗಳು. ಮತ್ತು ವಿಜಯ್ ಕೂಡ ಬ್ಯಾಕ್ ಟು ಬ್ಯಾಕ್ ಚಿತ್ರಗಳನ್ನು ಮಾಡುತ್ತಿದ್ದಾರೆ. ವಿಜಯ್ ಅಭಿನಯದ ಫ್ಯಾಮಿಲಿ ಸ್ಟಾರ್ ಸಿನಿಮಾ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.

    ರಾಜಕೀಯಕ್ಕೆ ಎಂಟ್ರಿ ಕೊಟ್ಟ ಸೌತ್​ ಇಂಡಿಯಾ ಸ್ಟಾರ್​: ಪಕ್ಷದ ಹೆಸರು ಬಹಿರಂಗ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts