

ಪಡುಬಿದ್ರಿ: ನಟ ರಕ್ಷಿತ್ ಶೆಟ್ಟಿ ಕುಟುಂಬ ಸಮೇತರಾಗಿ ಕಾಪು ಶ್ರೀ ಹೊಸ ಮಾರಿಗುಡಿಗೆ ಮಂಗಳವಾರ ಭೇಟಿ ನೀಡಿ ದೇವರ ದರ್ಶನ ಪಡೆದರು. ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ವಾಸುದೇವ ಶೆಟ್ಟಿ ಮಾರಿಯಮ್ಮನ ಸನ್ನಿಧಾನದಲ್ಲಿ ಪ್ರಾರ್ಥಿಸಿ ಅನುಗ್ರಹ ಪ್ರಸಾದ ನೀಡಿದರು. ದೇವಳ ಜೀರ್ಣೋದ್ಧಾರ ಆರ್ಥಿಕ ಸಮಿತಿ ಕಾತ್ಯಾಯಿನಿ ತಂಡದ ಮುಖ್ಯ ಸಂಚಾಲಕಿ ಬೀನಾ ವಿ.ಶೆಟ್ಟಿ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು. ರಕ್ಷಿತ್ ಶೆಟ್ಟಿ ಕುಟುಂಬಸ್ಥರೊಂದಿಗೆ ದೇವಳ ಜೀರ್ಣೋದ್ಧಾರ ಕಾರ್ಯ ವೀಕ್ಷಿಸಿದರು. ರಶ್ಮಿತ್ ನಿಖಿಲ್ ಶೆಟ್ಟಿ ಕಾಪುವಿನ ಅಮ್ಮನ ಸ್ವರ್ಣ ಗದ್ದುಗೆಗೆ 9 ಗ್ರಾಂ ಸ್ವರ್ಣ ಸಮರ್ಪಿಸಿದರು. ತಾಯಿ ರಂಜನಾ ಶ್ರೀಧರ್ ಶೆಟ್ಟಿ ಮತ್ತು ಸಹೋದರ ರಂಜಿತ್ ಶೆಟ್ಟಿ ಉಪಸ್ಥಿತರಿದ್ದರು.