ಹಣಕ್ಕಾಗಿ ನಾನು...ಮಾಡಿದ್ದೇನೆ; ಜನ್ಮದಿನ ಸಂಭ್ರಮದಲ್ಲಿರುವ ಪ್ರಕಾಶ್ ರೈ ಹೀಗೆ ಹೇಳಿದ್ಯಾಕೆ?

Prakash Raj
Published on

ಬೆಂಗಳೂರು: ಬಹುಭಾಷ ನಟ ಪ್ರಕಾಶ್​ ರೈ ಇಂದು ಜನ್ಮ ದಿನ ಸಂಭ್ರಮದಲ್ಲಿದ್ದಾರೆ. ಎಂತಹುದೇ ಪಾತ್ರ ಕೊಟ್ಟರೂ ಮಾಡಿ ತೋರಿಸುವ ನಟನಾ ಶೈಲಿ ಹೊಂದಿರುವ ನಟ ಪ್ರಕಾಶ್​​ ರೈ. ಈ ನಟ ಹಿಟ್ ಸಿನಿಮಾಗಳ ಜತೆ ಫ್ಲಾಪ್ ಸಿನಿಮಾಗಳನ್ನೂ ನೀಡಿದ್ದೂ ಇದೆ. ಆದರೆ ಈ ನಟ ಹೇಳಿರುವ ಒಂದು ಮಾತು ಸಖತ್​ ವೈರಲ್​ ಆಗಿದೆ.

‘ಫಿಲ್ಮ್ ಕಂಪಾನಿಯನ್ ಸೌತ್​’ಗೆ ನೀಡಿದ ಸಂದರ್ಶನದಲ್ಲಿ  ಮಾತನಾಡಿದ ಪ್ರಕಾಶ್​ ರೈ, ‘ಈ ಸಿನಿಮಾ ಮಾಡಿದರೆ ನನಗೆ ಹಣ ಸಿಗುತ್ತದೆ ಎಂದು ಯಾವಾಗಲೂ ಯೋಚನೆ ಮಾಡಿದ್ದೀರೇ’ ಎಂದು ಸಂದರ್ಶಕಿ ಪ್ರಕಾಶ್​ ರೈಗೆ ಪ್ರಶ್ನೆ ಮಾಡಿದ್ದಾರೆ. ‘ನಾನು ಹಣಕ್ಕಾಗಿ ಸ್ಟುಪಿಡ್ ಸಿನಿಮಾಗಳನ್ನು ಮಾಡಿದ್ದೂ ಇದೆ. ನನಗೆ ಬ್ಯಾಲೆನ್ಸ್ ಮಾಡುವ ಅಗತ್ಯವಿಲ್ಲ. ಕಮರ್ಷಿಯಲ್ ಚಿತ್ರಗಳನ್ನು ನಾನು ಹೇಟ್ ಮಾಡಲ್ಲ. ಅವುಗಳಿಗೂ ದೊಡ್ಡ ಪ್ರೇಕ್ಷಕ ವರ್ಗ ಇದೆ. ಎಲ್ಲರೂ ಎಷ್ಟು ಶ್ರಮ ಹಾಕುತ್ತಾರೋ ಅಷ್ಟೇ ಶ್ರಮವನ್ನು ಅವರೂ ಹಾಕುತ್ತಾರೆ. ಅವರು ವಿಲನ್ ಆಗಿ ನನ್ನನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ನನ್ನ ಮನಸ್ಸು ಅರೇ ಎಂಥ ಸಿನಿಮಾ ಮಾಡ್ತಾ ಇದೀಯಾ ಎನ್ನುತ್ತದೆ. ಆದರೆ, ನನಗೆ ಹಣ ಬೇಕಲ್ಲ’ ಎಂದಿದ್ದಾರೆ ಪ್ರಕಾಶ್ ರೈ.

ಸಿನಿಮಾನ ಉಚಿತವಾಗಿ ಏಕೆ ಮಾಡುತ್ತಾ ಇದೀಯಾ ಎಂದು ಕೆಲವರು ಕೇಳುತ್ತಾರೆ. ಅದು ನನಗೆ ಬಿಟ್ಟ ನಿರ್ಧಾರ. ನಾನು ಸಿನಿಮಾನ ಫ್ರೀ ಆಗಿ ಮಾಡುತ್ತಾ ಇದೀನಿ ಎಂದು ಅವರಿಗೆ ಹೇಳಿದವರು ಯಾರು? ಒಂದು ಸಿನಿಮಾ ಮಾಡುವುದರಿಂದ ಸಿಗುವ ರಿವಾರ್ಡ್​​ಗಳು ಅವರಿಗೆ ಕಾಣುವುದಿಲ್ಲ. ಹಣಕ್ಕಾಗಿ ಸ್ಟುಪಿಡ್ ಸಿನಿಮಾಗಳನ್ನೂ ಮಾಡಿದ್ದು ಇದೆ.’ ಎಂದಿದ್ದಾರೆ ಪ್ರಕಾಶ್ ರೈ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net